ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,52,991 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 2812 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸತತ 5ನೇ ದಿನವೂ ವಿಶ್ವದಲ್ಲೇ ಒಂದೇ ದಿನದಲ್ಲಿ ದಾಖಲಾಗಿರೋ ಅತ್ಯಧಿಕ ಕೇಸ್​ಗಳು ಹಾಗೂ ಅತ್ಯಧಿಕ ಸಾವಿನ ಸಂಖ್ಯೆ ಇದಾಗಿದೆ.

2,19,272 ಮಂದಿ ನಿನ್ನೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟಾರೆ ವರದಿಯಾದ ಸೋಂಕಿತರ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ. ಹಾಗೇ ಇಲ್ಲಿವರೆಗೆ 1,43,04,382 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಸದ್ಯ 28,13,658 ಸಕ್ರಿಯ ಪ್ರಕರಣಗಳಿವೆ. 1,95,123 ಮಂದಿ ಈವರೆಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ದೇಶದಾದ್ಯಂತ ಈವರೆಗೆ ಒಟ್ಟು 13,83,79,832ಜನರಿಗೆ ಲಸಿಕೆ ನೀಡಲಾಗಿದೆ.

ಕೊರೊನಾ ಪ್ರಕರಣಗಳ ಅಂಕಿ-ಅಂಶ

  • ಒಟ್ಟು ಪ್ರಕರಣಗಳು: 1,73,13,163
  • ಒಟ್ಟು ಗುಣಮುಖರಾದವರು: 1,43,04,382
  • ಈವರೆಗೆ ಸಾವನ್ನಪ್ಪಿದವರ ಸಂಖ್ಯೆ: 1,95,123
  • ಈವರೆಗಿನ ವ್ಯಾಕ್ಸಿನೇಷನ್: 14,19,11,223

The post ದೇಶದಲ್ಲಿ 3,52,991 ಹೊಸ ಕೊರೊನಾ ಪ್ರಕರಣ; ಸತತ 5ನೇ ದಿನವೂ ವಿಶ್ವದ ಅತ್ಯಧಿಕ ಕೇಸ್ appeared first on News First Kannada.

Source: News First Kannada
Read More