ನವದೆಹಲಿ: ದೇಶದಲ್ಲಿ N440K ಎಂಬ ಮತ್ತೊಂದು ಸಾಂಕ್ರಾಮಿಕ ಕೊರೊನಾ ತಳಿ ಪತ್ತೆಯಾಗಿದೆ ಅಂತ ಅಕಾಡೆಮಿ ಫಾರ್ ಸೈಂಟಿಫಿಕ್ ಅಂಡ್ ರಿಸರ್ಚ್ ಸಂಸ್ಥೆ ಅಧ್ಯಯನದಲ್ಲಿ ತಿಳಿಸಿದೆ.

ಈ ತಳಿಗಳು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಾಗಿ ಕಂಡುಬಂದಿದ್ದು, ಮಹಾರಾಷ್ಟ್ರದಲ್ಲಿ 91, ತೆಲಂಗಾಣದಲ್ಲಿ 773, ಕರ್ನಾಟಕದಲ್ಲಿ 54 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ದೇಶದ ಹಲವೆಡೆ ಕೊರೊನಾ ಪರೀಕ್ಷೆ ನಡೆಸಿದಾಗ ಅದರಲ್ಲಿ ಸಂಗ್ರಹಿಸಿದ ಶೇಕಡಾ 50ರಷ್ಟು ಮಾದರಿಗಳು N440K ತಳಿಯಾಗಿವೆ. ಈ ತಳಿಗಳು ಅತಿ ವೇಗವಾಗಿ ಹರಡಿ, ಸೋಂಕಿನ ತೀವ್ರತೆಯನ್ನು ಹೆಚ್ಚಿಸುತ್ತದೆ ಅಂತ ಅಧ್ಯಯನದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

The post ದೇಶದಲ್ಲಿ N440K ಎಂಬ ಹೊಸ ಕೊರೊನಾ ತಳಿ ಪತ್ತೆ appeared first on News First Kannada.

Source: newsfirstlive.com

Source link