ದೇಶದಲ್ಲೇ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ನಗರಗಳಲ್ಲಿ ಗದಗ ಫಸ್ಟ್​

ದೇಶದಲ್ಲೇ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ನಗರಗಳಲ್ಲಿ ಗದಗ ಫಸ್ಟ್​

ಗದಗ: ಇಡೀ ದೇಶದಲ್ಲಿಯೇ ಶುದ್ಧ ಹಾಗೂ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ನಗರ ಎಂಬ ಕೀರ್ತಿಗೆ ನಗರ ಪಾತ್ರವಾಗಿದೆ. ಜೂನ್ 15ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಅತ್ಯುತ್ತಮ ಗುಣಮಟ್ಟದ ಗಾಳಿ ಹೊಂದಿರುವ ದೇಶದ ಒಟ್ಟು 131 ನಗರಗಳ ಪೈಕಿ ಗದಗ ನಗರ 10 ಅಂಕಗಳ ಇಂಡೆಕ್ಸ್ ವ್ಯಾಲ್ಯೂದೊಂದಿಗೆ ಪ್ರಥಮ ಸ್ಥಾನ ಪಡೆದಿದೆ.

 

ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ ಹೊಂದಿವೆ. 65 ನಗರಗಳಲ್ಲಿ ಸಮಾಧಾನಕರ, ಮತ್ತು 21 ನಗರಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಳಿ ಕಳೆದ 24 ಗಂಟೆಯಲ್ಲಿನ ಗಾಳಿಯನ್ನ ಆಧರಿಸಿ ಈ ಪ್ರಕಟಣೆ ಹೊರಡಿಸಿದೆ.

ಮುಂದಿನ ದಿನಗಳಲ್ಲಿ ಇದ್ರಲ್ಲಿ ಮತ್ತಷ್ಟು ಏರಿಳಿತ ಕಾಣಬಹುದು. ಯಾಕೆಂದರೆ ಸದ್ಯ ಲಾಕ್ ಡೌನ್ ಇರೋದ್ರಿಂದ ವಾಹನಗಳ ಓಡಾಟ, ಕೈಗಾರಿಕೆಗಳ ಕಾರ್ಯಸ್ಥಗಿತ ಹೀಗೆ ನಾನಾ ಕಾರಣಗಳು  ಸೇರಿವೆ.

ಗದಗ ಜಿಲ್ಲೆ ಸಹ್ಯಾದ್ರಿ ಅಂತ ಕರೆಸಿಕೊಳ್ಳುವ ಕಪ್ಪತಗುಡ್ಡವನ್ನ ಹೊಂದಿರೋದ್ರಿಂದ ಇದು ಅತೀ ವೇಗವಾಗಿ ಗಾಳಿ ಬೀಸುವ ಪ್ರದೇಶವೂ ಹೌದು. ಈ ಕಾರಣಕ್ಕೆ ಇಲ್ಲಿ ನೂರಾರು ಪವನ್ ವಿದ್ಯುತ್ ಯಂತ್ರಗಳನ್ನ ಅಳವಡಿಸಿ ವಿದ್ಯುತ್ ತಯಾರಿಸಲಾಗ್ತಿದೆ. ಇದರ ಜೊತೆಗೆ ಈಗ ಸ್ವಚ್ಛ ಗಾಳಿ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

The post ದೇಶದಲ್ಲೇ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ನಗರಗಳಲ್ಲಿ ಗದಗ ಫಸ್ಟ್​ appeared first on News First Kannada.

Source: newsfirstlive.com

Source link