ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ; ಪ್ರಶಸ್ತಿ ಸ್ವೀಕರಿಸಿದ ಸಚಿವ ಭೈರತಿ ಬಸವರಾಜ್ | Mysore get Clean City award from Central Govt Mysuru News details here


ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ; ಪ್ರಶಸ್ತಿ ಸ್ವೀಕರಿಸಿದ ಸಚಿವ ಭೈರತಿ ಬಸವರಾಜ್

ಸಾಂಕೇತಿಕ ಚಿತ್ರ

ದೆಹಲಿ: ಭಾರತ ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿದೆ. ಕರ್ನಾಟಕದ 4 ನಗರ ಪಾಲಿಕೆಗಳಿಗೆ ಸ್ವಚ್ಛ ನಗರ ಪುರಸ್ಕಾರ ಲಭಿಸಿದೆ. ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಸ್ವಚ್ಛನಗರ ಪುರಸ್ಕಾರ ದೊರಕಿದೆ. ಸಚಿವ ಭೈರತಿ ಬಸವರಾಜ್ ಸ್ವಚ್ಛ ನಗರಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರದಿಂದ ನೀಡುವ ಸ್ವಚ್ಛನಗರ ಪುರಸ್ಕಾರವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವೀಕಾರ ಮಾಡಿದ್ದಾರೆ. ಕಳೆದ ವರ್ಷ ಘೋಷಣೆಯಗಿದ್ದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿತ್ತು.

ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಮೈಸೂರು ಜೋಡಿಯಿಂದ ಕನ್ನಡದಲ್ಲೇ ಮದುವೆ ಕರೆಯೋಲೆ; ಸಂತಸ ಪಟ್ಟ ನಟಿ

TV9 Kannada


Leave a Reply

Your email address will not be published. Required fields are marked *