ದೇಶದಾದ್ಯಂತ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು.. ಕಾರಣ ಏನು..?

ದೇಶದಾದ್ಯಂತ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು.. ಕಾರಣ ಏನು..?

ನವದೆಹಲಿ: ಕೊರೊನಾ ಕಷ್ಟಕಾಲದಲ್ಲಿ ಹಗಲಿರುಳೆನ್ನದೇ ಕುಟುಂಬಗಳನ್ನೂ ಸಂಪರ್ಕಿಸದೆ ಸೋಂಕಿತರ ರಕ್ಷಣೆಗಾಗಿ ದುಡಿದವರು ವೈದ್ಯರು. ಆದರೆ ಕೆಲವು ಸೋಂಕಿತರ ಕುಟುಂಬಗಳು ಹಲವು ಕಾರಣಗಳಿಗಾಗಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದರ ಬಗ್ಗೆ ಆಗಾಗ್ಗೆ ವರದಿಗಳಾಗಿವೆ. ಇಂಥ ಹಲ್ಲೆಗಳಿಂದ ವೈದ್ಯರನ್ನು ರಕ್ಷಿಸುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಹಿನ್ನೆಲೆ ಇಂದು ದೇಶದಾದ್ಯಂತ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ.

ವೈದ್ಯರ ಬೇಡಿಕೆ ಏನು..?
ವೈದ್ಯರ ಮೇಲೆ ಹಲ್ಲೆಗಳು, ಹಿಂಸಾಕೃತ್ಯಗಳು ನಡೆಯದಂತೆ ಕೇಂದ್ರ ಸರ್ಕಾರ ಹೊಸ ಕಾನೂನೊಂದನ್ನು ಜಾರಿಗೆ ತರಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಹಿಂದೆ ಐಎಮ್​ಎ ಕೇಂದ್ರ ಗೃಹಸಚಿವ ಅಮಿತ್ ಶಾರಿಗೆ ಪತ್ರ ಬರೆದು ಹೊಸ ಕಾನೂನು ಜಾರಿಗೆ ತರುವಂತೆ ಮನವಿ ಮಾಡಿಕೊಂಡಿತ್ತು.

The post ದೇಶದಾದ್ಯಂತ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು.. ಕಾರಣ ಏನು..? appeared first on News First Kannada.

Source: newsfirstlive.com

Source link