ಕೊರೊನಾ 2ನೇ ಅಲೆಯ ಸುಳಿಗೆ ಸಿಲುಕಿ ನರಳಾಡ್ತಿರೋ ಭಾರತಕ್ಕೆ ಬ್ಲ್ಯಾಕ್ ಫಂಗಸ್​ ಅನ್ನೋ ಮಾರಕ ಸೋಂಕು ದಾಳಿ ಇಟ್ಟಿದೆ. ಈಗಾಗಲೇ ಸಾವಿರಾರು ಜನರನ್ನ ಬಲಿ ಪಡೆಯುತ್ತಿರೋ ಕೊರೊನಾ ಜೊತೆ ಬ್ಲ್ಯಾಕ್​ ಫಂಗಸ್​ ಕೂಡ ಮರಣದ ಮನೆ ಕಟ್ತಿದೆ. ಅದರಲ್ಲೂ ದೇಶದ 70 ಜಿಲ್ಲೆಗಳಲ್ಲಿ ನಿತ್ಯವೂ ಹೆಮ್ಮಾರಿ ಕೊರೊನಾ ಮರಣ ಮೃದಂಗ ಬಾರಿಸ್ತಿದೆ.

ಮೊದಲನೇ ಅಲೆಗಿಂತ ಭೀಕರತೆಯ ರೂಪ ಪಡೆದಿರೋ ಕೊರೊನಾ 2ನೇ ಅಲೆ ಸಾವಿನ ವಿಚಾರದಲ್ಲಿ ಅಟ್ಟಹಾಸ ಮರೆಯುತ್ತಿದೆ. ಭಾರತದಲ್ಲಿ ನಿತ್ಯವೂ 3 ಲಕ್ಷ ಜನ ಸೋಂಕಿಗೆ ಗುರಿಯಾಗ್ತಿದ್ರೆ, ಸುಮಾರು 4 ಸಾವಿರ ಜನ ಉಸಿರು ಚೆಲ್ತಿದ್ದಾರೆ. ಅದರಲ್ಲೂ ಸದ್ಯ ಬಿಡುಗಡೆಗೊಂಡಿರೋ ಕೊರೊನಾ ಸೋಂಕು ಹಾಗೂ ಸಾವಿನ ಪ್ರಮಾಣದ ಅಂಕಿ ಅಂಶ ನಿಜಕ್ಕೂ ಆತಂಕ ಮೂಡಿಸ್ತಿದೆ. ಯಾಕಂದ್ರೆ ಭಾರತದ 70 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಾವಿನ  ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲಿ ಕರ್ನಾಟಕದ 7 ಜಿಲ್ಲೆಗಳೂ ಸೇರಿವೆ.

ಮೋದಿ ತವರೂರು ಗುಜರಾತ್​ನ ಜಿಲ್ಲೆಗಳೇ ಹೆಚ್ಚು ಟಾರ್ಗೆಟ್
ಭಾರತದಲ್ಲಿ ಹೆಚ್ಚು ಸಾವಿನ ಪ್ರಮಾಣ ಏರಿಕೆಯಾಗ್ತಿರೋ ಜಿಲ್ಲೆಗಳ ಅಂಕಿ ಅಂಶ ಬಿಡುಗಡೆಗೊಂಡಿದೆ. ಅದರಲ್ಲಿ ದೇಶದ 70 ಜಿಲ್ಲೆಗಳಲ್ಲಿ ಮರಣ ಪ್ರಮಾಣ ವೇಗವಾಗಿ ಏರಿಕೆಯಾಗಿದೆ. ಜಿಲ್ಲೆಯ ಜನಸಂಖ್ಯೆ ಹಾಗೂ ಪಾಸಿಟಿವಿಟಿ ದರ ಆಧರಿಸಿ ಅಂಕಿ ಅಂಶ ಬಿಡುಗಡೆ ಮಾಡಲಾಗಿದೆ. 7 ದಿನದಿಂದ 28ನೇ ದಿನಕ್ಕೆ‌ ಮರಣ ಪ್ರಮಾಣ ದರದಲ್ಲಿ ಭಾರೀ ವ್ಯತ್ಯಾಸ ಕಂಡಿದೆ. ಏಪ್ರಿಲ್​ 2 ರಿಂದ ಮೇ 19ರವರೆಗಿ‌ನ‌ 28 ದಿನಗಳ ಮರಣ ಪ್ರಮಾಣ‌ 70 ಜಿಲ್ಲೆಗಳಲ್ಲಿ ದುಪ್ಪಟ್ಟಾಗಿದೆ. ಗಮನಿಸಬೇಕಾದ ಅಂಶವೆಂದ್ರೆ ಪ್ರಧಾನಿ ಮೋದಿ ತವರೂರು ಗುಜರಾತ್​ನ 5 ಜಿಲ್ಲೆಗಳಲ್ಲೇ ಅತೀ ಹೆಚ್ಚು ಜನ ಮರಣ ಹೊಂದುತ್ತಿದ್ದಾರೆ. 70 ಜಿಲ್ಲೆಗಳ ಪೈಕಿ ಕರ್ನಾಟಕದ 7 ಜಿಲ್ಲೆಗಳಲ್ಲೂ ಹೆಚ್ಚು ಸಾವು ದಾಖಲಾಗಿದೆ ಅನ್ನೋದು ಭೀತಿ ಹುಟ್ಟಿಸಿದೆ.

ಮರಣ ಪ್ರಮಾಣ ಏರಿಕೆ ಆಗ್ತಿರೋ ದೇಶದ 70 ಜಿಲ್ಲೆಗಳಲ್ಲಿ ಕರ್ನಾಟಕದ 7 ಜಿಲ್ಲೆಗಳು ಯಾವುವು ಅಂತಾ ನೋಡೋದಾದ್ರೆ, ಮೊದಲು ಬರೋದು ರಾಮನಗರ.

ರಾಜ್ಯದ ಟಾಪ್​ 7 ಜಿಲ್ಲೆಗಳು

             ಜಿಲ್ಲೆ               –  7ನೇ ದಿನ      – 28ನೇ ದಿನ

 1. ರಾಮನಗರ        –   ಶೇ.23    – ಶೇ.171
 2. ಕೊಡಗು             –  ಶೇ.28    – ಶೇ.149
 3. ಚಾಮರಾಜನಗರ –  ಶೇ.20    – ಶೇ.141
 4. ಉತ್ತರ ಕನ್ನಡ      –  ಶೇ.34    – ಶೇ.125
 5. ಯಾದಗಿರಿ          –    ಶೇ.27    – ಶೇ.127
 6. ಮಂಡ್ಯ              –   ಶೇ.24      – ಶೇ.119
 7. ಬೆಂಗಳೂರು ಗ್ರಾಂ – ಶೇ. 31    – ಶೇ.106
 • ಮೊದಲ 7 ದಿನಕ್ಕೆ ಸಾವಿನ ಪ್ರಮಾಣ ಶೇ. 23 ರಷ್ಟು ಏರಿಕೆಯಾಗಿತ್ತು. 28ನೇ ದಿನಕ್ಕೆ ಶೇ. 171 ರ ದರದಲ್ಲಿ ಸಾವಿನ ಪ್ರಮಾಣ ಏರಿಕೆಯಾಗಿದೆ.
 • 2ನೇ ಸ್ಥಾನದಲ್ಲಿರುವ ಕೊಡಗು ಜಿಲ್ಲೆಯಲ್ಲಿ ಮೊದಲ 7 ದಿನಕ್ಕೆ ಶೇ. 28 ರಷ್ಟು ಹಾಗೂ 28ನೇ ದಿನಕ್ಕೆ ಶೇ. 149 ದರದಲ್ಲಿ ಸಾವಿನ ಪ್ರಮಾಣ ಏರಿದೆ.
 • 3ನೇ ಸ್ಥಾನದಲ್ಲಿ ಚಾಮರಾಜನಗರ ಇದ್ದು, ಮೊದಲ 7 ದಿನಕ್ಕೆ ಶೇ. 20ರಂತೆ ಮರಣದ ದರ ಏರಿದ್ದರೆ, 28ನೇ ದಿನಕ್ಕೆ ಶೇ. 141 ರಷ್ಟು ಸಾವಿನ ಪ್ರಮಾಣ ಏರಿದೆ.
 • ಇನ್ನು 4ನೇ ಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ 7 ದಿನಕ್ಕೆ ಶೇ. 24 ಹಾಗೂ 28ನೇ ದಿನಕ್ಕೆ ಶೇ 125 ರಷ್ಟು ಸಾವಿನ ಪ್ರಮಾಣ ಹೆಚ್ಚಳವಾಗಿದೆ.
 •  5ನೇ ಸ್ಥಾನದಲ್ಲಿ ಯಾದಗಿರಿ ಇದ್ದು, ಮೊದಲ 7 ದಿನಕ್ಕೆ ಶೇ. 27 ಹಾಗೂ 28ನೇ ದಿನಕ್ಕೆ ಶೇ. 127 ರಷ್ಟು ಸಾವಿನ ಪ್ರಮಾಣ ಉಲ್ಲೇಖವಾಗಿದೆ.
 • 6ನೇ ಸ್ಥಾನದಲ್ಲಿ ಮಂಡ್ಯ ಇದ್ದು, ಮೊದಲ 7 ದಿನದಲ್ಲಿ ಶೇ. 24ರ ದರಲ್ಲಿ ಸಾವಿನ ಪ್ರಮಾಣ ಏರಿಕೆ ಕಂಡಿದೆ. ಹಾಗೆಯೇ ಮುಂದಿನ 28 ದಿನದಲ್ಲಿ ಶೇ.119ರಷ್ಟು ಸಾವಿನ ಪ್ರಮಾಣ ಹೆಚ್ಚಳ ಕಂಡಿದೆ.
 • ಇನ್ನು 7ನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದ್ದು, ಮೊದಲ 7 ದಿನದಲ್ಲಿ ಶೇ. 31ರ ದರಲ್ಲಿ ಸಾವಿನ ಪ್ರಮಾಣ ಹೆಚ್ಚಳವಾಗಿದ್ರೆ, 28ನೇ ದಿನಕ್ಕೆ ಶೇ. 106 ರಷ್ಟು ಸಾವಿನ ಪ್ರಮಾಣ ಏರಿಕೆ ಕಂಡಿದೆ.

ಹೀಗೆ ನಿತ್ಯವೂ ಸಾವಿರಾರು ಜನರ ದೇಹ ಹೊಕ್ಕುತ್ತಿರೋ ಕೊರೊನಾ ಜನರನ್ನ ಮರಣದ ವ್ಯೂಹಕ್ಕೆ ತಗೊಳ್ತಾ ಇರೋ ವೇಗ ಹೆಚ್ಚಾಗ್ತಾನೇ ಹೋಗ್ತಿದೆ. ಕಳೆದ 28 ದಿನಗಳಲ್ಲಿ ಸಾವಿನ ಪ್ರಮಾಣದ ಏರಿಕೆಯ ದರ ಭಾರೀ ಆತಂಕ ಹುಟ್ಟಿಸಿದೆ. ಸೋಂಕಿತರ ಸಂಖ್ಯೆ ಕಮ್ಮಿಯಾಗ್ತಿದ್ರೂ ಸಾವಿನ ದರ ಕಮ್ಮಿಯಾಗದೇ ಆತಂಕ ಮುಗಿಯಲ್ಲ.

The post ದೇಶದ‌ 70 ಜಿಲ್ಲೆಗಳಲ್ಲಿ ಕೊರೊನಾ ‘ಮರಣ ಮೃದಂಗ’: ರಾಜ್ಯದ 7 ಜಿಲ್ಲೆಗಳಲ್ಲಿ ಮರಣಪ್ರಮಾಣ ಹೆಚ್ಚಳ appeared first on News First Kannada.

Source: newsfirstlive.com

Source link