ದೇಶದ ಅತಿದೊಡ್ಡ ಜೇಬುಗಳ್ಳ ಅಂದ್ರೆ ಅದು ಕಾಂಗ್ರೆಸ್ -ಬಿಜೆಪಿ ಗಂಭೀರ ಆರೋಪ


ನವದೆಹಲಿ: ದೇಶದ ಅತಿದೊಡ್ಡ ಜೇಬುಗಳ್ಳ ಅಂದ್ರೆ ಅದು ಕಾಂಗ್ರೆಸ್​ ಅಂತಾ ರಾಹುಲ್​ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ಇಂಧನ ಬೆಲೆ ಏರಿಕೆಯನ್ನು ಖಂಡಿಸಿ, ಜೇಬುಗಳ್ಳರ ಬಗ್ಗೆ ಎಚ್ಚರಸಿಂದಿರಿ ಎಂದು ಟ್ವೀಟ್​ ಮಾಡಿದ್ದರು. ಅಲ್ಲದೇ ಹ್ಯಾಷ್‌ಟ್ಯಾಗ್‌ TaxExtortion ಅಂತಾ ಉಲ್ಲೇಖಿಸಿದ್ದರು. ಇದಕ್ಕೆ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ನೀಡಿದ ಹೇಳಿಕೆಯನ್ನ ಪಕ್ಷದ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿ ರಾಹುಲ್​​​ಗೆ ತಿರುಗೇಟು ನೀಡಿದೆ.

ದೇಶದಲ್ಲಿ ಕಾಂಗ್ರೆಸ್‌ಗಿಂತ ದೊಡ್ಡ ಜೇಬುಗಳ್ಳರಿಲ್ಲ. ಕಾಂಗ್ರೆಸ್ ಪಕ್ಷವೇ ಜೇಬುಗಳ್ಳ ಪಕ್ಷವಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

News First Live Kannada


Leave a Reply

Your email address will not be published. Required fields are marked *