ದೇಶದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಕೈಯಲ್ಲಿದೆ 17,200 ರೂ ಹಣ, ಒಟ್ಟು ಆಸ್ತಿ ಮೌಲ್ಯ ಎರಡೂವರೆ ಕೋಟಿ ರೂ ಅಷ್ಟೇಯಾ! | Karnataka Rajya sabha candidate Nirmala Sitharaman announce her assets details


ದೇಶದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಕೈಯಲ್ಲಿದೆ 17,200 ರೂ ಹಣ, ಒಟ್ಟು ಆಸ್ತಿ ಮೌಲ್ಯ ಎರಡೂವರೆ ಕೋಟಿ ರೂ ಅಷ್ಟೇಯಾ!

ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)

ರಾಜ್ಯಸಭೆ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ. ನಿರ್ಮಲಾ ಒಟ್ಟು ಆಸ್ತಿ ಮೌಲ್ಯ 2,50,99,396 ರೂ. ಸ್ಥಿರಾಸ್ತಿ 1,87,60,200, ಚರಾಸ್ತಿ 63,39,196 ರೂ. ಹಾಗೂ ಅವರ ಕೈಯಲ್ಲಿರುವ ಹಣ 17,200 ರೂಪಾಯಿಯಂತೆ.

ಬೆಂಗಳೂರು: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್‌ಗಾಗಿ ಅನೇಕರು ಸರತಿ ಸಾಲಲ್ಲಿ ನಿಂತಿದ್ದರು. ಆದ್ರೆ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಸದ್ಯ ರಾಜ್ಯಸಭೆ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ. ನಿರ್ಮಲಾ ಒಟ್ಟು ಆಸ್ತಿ ಮೌಲ್ಯ 2,50,99,396 ರೂ. ಸ್ಥಿರಾಸ್ತಿ 1,87,60,200, ಚರಾಸ್ತಿ 63,39,196 ರೂ.

ನಿರ್ಮಲಾ ಬಳಿ 315 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಇದೆ. ಹಾಗೂ ಅವರ ಕೈಯಲ್ಲಿರುವ ಹಣ 17,200 ರೂಪಾಯಿ. ಬ್ಯಾಂಕ್ನಲ್ಲಿ 45,04,479 ರೂಪಾಯಿ ಎಫ್ಡಿ ಇದೆ. ನಿರ್ಮಲಾ ಬಳಿ 1 ಸ್ಕೂಟರ್ ಇದೆ. ಇವರು 30,44,838 ರೂ. ಸಾಲ ಪಡೆದಿದ್ದಾರೆ. ಕುಟುಂಬಸ್ಥರಿಗೆ ನೀಡಿದ ಸಾಲ 3,50,000 ರೂ. ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಕುಂಟನೂರು ಗ್ರಾಮದಲ್ಲಿ 4806 ಚ. ಅಡಿ ಜಮೀನು ಖರೀದಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *