ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗಿದೆ- ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ


ನವದೆಹಲಿ:ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಕ್ರಿಫ್ಟೋ ಕರೆನ್ಸಿಯ ಕುರಿತು ಸಂಘಟಿತ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದಾವೋಸ್​ನಲ್ಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗವಹಿಸಿ ಮಾತನಾಡಿದ ಅವರು. ಸದ್ಯ ದೇಶದಲ್ಲಿನ ಆರ್ಥಿಕತೆಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 6 ತಿಂಗಳಿನಲ್ಲಿ 10 ಲಕ್ಷ ಸ್ಟಾರ್ಟ್​ಪ್​ ನೋಂದಣಿಯಾಗಿವೆ. ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಆ ಮೂಲಕ ಈಡೀ ವಿಶ್ವವೇ ನಮ್ಮನ್ನು ನೋಡಲಿದೆ. ದೇಶದಲ್ಲಿ ಹೂಡಿಕೆಗೆ ಇದು ಸೂಕ್ತ ಸಮಯ ಹಾಗಾಗಿ ಭಾರತ ಇದೀಗ ಹೂಡಿಕೆಯ ಮೇಲೆ ಗಮನ ಹರಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಇನ್ನು ದೇಶದಲ್ಲಿ ಅಬ್ಬರ ಶುರು ಮಾಡಿರುವ ಕೋವಿಡ್​ ಕುರಿತು ಮಾತನಾಡಿ ಸದ್ಯ ದೇಶ ಮೂರನೆ ಅಲೆ ಎದುರಿಸುತ್ತಿದೆ. ಈ ಮಾರಕ ಸೋಂಕನ್ನು ನಿಯಂತ್ರಣಕ್ಕೆ ತರಲು ನಾವು ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಈ ವರೆಗೆ ಸುಮಾರು 160 ಕೋಟಿಯಷ್ಟು ಲಸಿಕೆ ನೀಡಿದ್ದೇವೆ. ಜೊತೆಗೆ 80 ಕೋಟಿ ಜನರಿಗೆ ಉಚಿತ ರೇಶನ್​ ವಿತರಿಸಲಾಗಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.

 

News First Live Kannada


Leave a Reply

Your email address will not be published. Required fields are marked *