ದೇಶದ ಗ್ರೀನ್‌ ಎಕಾನಮಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ -ಅನಂತಕುಮಾರ್ ಪುಣ್ಯಸ್ಮರಣೆ ವೇಳೆ ಕೇಂದ್ರ ಸಚಿವ ಗಡ್ಕರಿ | Nitin Gadkari Address AnanthKumar Memorial Lecture on Progressive Politics and Nation Building


ದೇಶದ ಗ್ರೀನ್‌ ಎಕಾನಮಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ -ಅನಂತಕುಮಾರ್ ಪುಣ್ಯಸ್ಮರಣೆ ವೇಳೆ ಕೇಂದ್ರ ಸಚಿವ ಗಡ್ಕರಿ

ದೇಶದ ಗ್ರೀನ್‌ ಎಕಾನಮಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರ: ಅನಂತಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಗಡ್ಕರಿ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಹೆಚ್.ಎನ್. ಅನಂತಕುಮಾರ್ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಜಯನಗರದಲ್ಲಿರುವ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ನಡೆಯಿತು. ಈ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ. ಕೃಷ್ಣ ಭಟ್ ಭಾಗಿಯಾಗಿದ್ದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗ್ರೀನ್‌ ಎಕಾನಮಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ದೇಶದ ಗ್ರೀನ್‌ ಎಕಾನಮಿಯಲ್ಲಿ ಬೆಂಗಳೂರು ನಗರದ ಕೊಡುಗೆ ಅಪಾರ. ಇ.ವಿ. ಹಾಗೂ ಗ್ರೀನ್‌ ಹೈಡ್ರೋಜನ್‌ ನಂತಹ ಕ್ಷೇತ್ರಗಳಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ ಗಳು ಪ್ರಮುಖ ಸಂಶೋಧನೆ ಕೈಗೊಂಡಿವೆ. ಕರ್ನಾಟಕದಲ್ಲಿ ಎಥೆನಾಲ್‌ ಉತ್ಪಾದನೆ ಹೆಚ್ಚಾಗಿದೆ. ಫ್ಲೆಕ್ಸ್‌ ಇಂಜಿನ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಅಭಿವೃದ್ದಿಯಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳಲ್ಲಿ ಬೆಂಗಳೂರು ನಗರದ ಕೊಡುಗೆ ಬಹಳಷ್ಟಿದೆ. ದೇಶದಲ್ಲಿ ಹಸಿರು ಆರ್ಥಿಕತೆ ಅಭಿವೃದ್ದಿಯಲ್ಲಿ ಬೆಂಗಳೂರು ನಗರದ ಸ್ಟಾರ್ಟ್‌ ಅಪ್‌ಗಳು ನೇತೃತ್ವ ವಹಿಸಲಿವೆ.

ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿನ ಸಂಶೋಧನೆಗಳಲ್ಲಿ ಬೆಂಗಳೂರು ನಗರ ಪ್ರಮುಖ ಪಾತ್ರ ವಹಿಸಲಿದೆ. ಅನಂತ ಕುಮಾರ್‌ ಅವರ ಕನಸಾಗಿದ್ದ ಬೆಂಗಳೂರು ರಿಂಗ್‌ ರಸ್ತೆಯ ನಿರ್ಮಾಣದ ಬಗ್ಗೆ ಈಗಾಗಲೇ ಚರ್ಚೆಯನ್ನು ನಡೆಸಲಾಗಿದೆ. ಚುನಾವಣೆಯ ನೀತಿ ಸಂಹಿತೆಯ ನಂತರ ಕರ್ನಾಟಕಕ್ಕೆ ಆಗಮಿಸಿ ರಿಂಗ್‌ ರಸ್ತೆಯ ಕಾಮಗಾರಿ ಪ್ರಾರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

(Nitin Gadkari Address AnanthKumar Memorial Lecture on Progressive Politics and Nation Building)

TV9 Kannada


Leave a Reply

Your email address will not be published. Required fields are marked *