ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿರುವ ಸಾಮಾಜಿಕ ಮಾಧ್ಯಮ ಕೂ ಇದೀಗ ಕಾಂಪ್ಲಿಯೆನ್ಸ್ ವರದಿಯನ್ನ ಪ್ರಕಟಿಸಿದೆ. ದೇಶದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನ ಅಳವಡಿಸಿಕೊಂಡು, ಮೊದಲ ಬಾರಿಗೆ ಕಾಂಪ್ಲಿಯೆನ್ಸ್​ ರಿಪೋರ್ಟ್​ ಸಲ್ಲಿಸಿದ ಹೆಗ್ಗಳಿಗೆ ಕೂ ಪಾತ್ರವಾಗಿದೆ.

ನೂತನ ಐಟಿ ನಿಯಮಗಳ ಪ್ರಕಾರ.. ಸೋಶಿಯಲ್ ಮೀಡಿಯಾಗಳು ತಿಂಗಳಿಗೊಮ್ಮೆ ಪಾರದರ್ಶಕತೆಯನ್ನ ತೋರಿಸಬೇಕು. ತಿಂಗಳಿಗೆ ಎಷ್ಟು ದೂರುಗಳು ಬಂದಿವೆ, ಅಲ್ಲದೇ ಎಷ್ಟು ವಿವಾದಾತ್ಮಕ ಪೋಸ್ಟ್​ಗಳು ಪಬ್ಲಿಷ್​ ಆಗಿದ್ದವು. ದೂರುಗಳ ನಂತರ ಎಷ್ಟು ಪೋಸ್ಟ್​ಗಳನ್ನ ರಿಮೂವ್ ಮಾಡಲಾಗಿದೆ, ಜೊತೆಗೆ ಏನೆಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಅನ್ನೋದ್ರ ವರದಿಯನ್ನ ನೀಡಬೇಕಾಗುತ್ತದೆ ಅದರಂತೆ ಕೂ, ಇಂದು ಜೂನ್ ತಿಂಗಳ ತೆಗೆದುಕೊಂಡಿರುವ ಕ್ರಮಗಳ ಕುರಿತ ವರದಿಯನ್ನ ಪ್ರಕಟಿಸಿದೆ.

ಕಮ್ಯುನಿಟಿ ಗೈಡ್​ಲೈನ್ಸ್ ಹಾಗೂ ಇತರೆ ನಿಯಮಗಳ ಉಲ್ಲಂಘಟನೆಗೆ ಸಂಬಂಧಿಸಿದಂತೆ ಜೂನ್ ತಿಂಗಳಿನಲ್ಲಿ 5502 ದೂರುಗಳು ಕೂಗೆ ಬಂದಿದ್ದವು, ಅವುಗಳಲ್ಲಿ 1253 ಪೋಸ್ಟ್​ಗಳನ್ನ ರಿಮೂವ್ ಮಾಡಲಾಗಿದೆ. ಇನ್ನುಳಿದ 4249 ಪೋಸ್ಟ್​ಗಳಿಗೆ ಫೋಟೋ ಬ್ಲರ್​, ಇಗ್ನೋರ್​ ಹಾಗೂ ಎಚ್ಚರಿಕೆ ಕ್ರಮವನ್ನ ತೆಗೆದುಕೊಳ್ಳಲಾಗಿದೆ.

ಇನ್ನು ಫೇಸ್​ಬುಕ್​ ನಾಳೆ ತನ್ನ ವರದಿಯನ್ನ ಪ್ರಕಟಿಸಲಿದೆ ಅಂತಾ ಹೇಳಿಕೊಂಡಿದೆ. ಈ ಹಿಂದೆ ಫೇಸ್​ಬುಕ್​ ದೇಶದ ನೂತನ ಐಟಿ ನಿಯಮಗಳನ್ನ ಪಾಲಿಸಲು ಹಿಂದೇಟು ಹಾಕಿತ್ತು.

The post ದೇಶದ ನಿಯಮಕ್ಕೆ ಬದ್ಧ ಎಂದ Koo.. ರಿಪೋರ್ಟ್ ಸಲ್ಲಿಸಿದ ಮೊದಲ ಸೋಶಿಯಲ್ ಮೀಡಿಯಾ​  appeared first on News First Kannada.

Source: newsfirstlive.com

Source link