ದೇಶದ ಮೊದಲ ಪ್ರಧಾನಿಗೆ ಗೌರವ ಕೊಡೋದು ಸಂಸ್ಕಾರ‌ -ಕೇಂದ್ರ ಸಚಿವರ ವಿರುದ್ಧ ಗುಂಡೂರಾವ್ ವಾಗ್ದಾಳಿ


ಬೆಂಗಳೂರು: ದೇಶದ ಪ್ರಥಮ‌ ಪ್ರಧಾನಿ ನೆಹರು ಜನ್ಮದಿನಾಚಾರಣೆ ಪ್ರಯುಕ್ತ ಸಂಸತ್ತಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರು ಯಾರು ಭಾಗವಹಿಸಿಲ್ಲ. ಇದು BJP ನಾಯಕರ ದುರುದ್ದೇಶದ ನಡೆ ಅಂತಾ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಇತಿಹಾಸ ಪುರುಷರನ್ನು ಜನರ ಮನಸ್ಸಿನಿಂದ ದೂರ ಮಾಡಲು ಬಿಜೆಪಿ ಕುತಂತ್ರ ಮಾಡಲು ಹೊರಟ್ಟಿದೆ. ಆದರೆ ಆ ಕುತಂತ್ರ ಫಲಿಸುವುದಿಲ್ಲ. ನೆಹರು ಜನಮಾನಸದಲ್ಲಿ ಸದಾ ಉಳಿಯಲಿದ್ದಾರೆ. ಸಂಸತ್ತಿನಲ್ಲಿ ಪ್ರತಿವರ್ಷ ನೆಹರು ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಒಬ್ಬರಾದರೂ ಸಚಿವರು ಆಗಮಿಸಬೇಕಿತ್ತು. ಸೈದ್ಧಾಂತಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಮೊದಲ ಪ್ರಧಾನಿಗೆ ಗೌರವ ಕೊಡುವುದು ಸಂಸ್ಕಾರ‌. ಆದರೆ BJP ದ್ವೇಷದ ರಾಯಭಾರಿಯಂತೆ ವರ್ತಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ.

News First Live Kannada


Leave a Reply

Your email address will not be published. Required fields are marked *