ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಇಲಾಖೆ ಈವರೆಗೆ 25,301 ಕೋಟಿ ರೂಪಾಯಿಯನ್ನ ತೆರಿಗೆದಾರರಿಗೆ ಮರುಪಾವತಿ ಮಾಡಿದೆ.

ಈ ಬಗ್ಗೆ ಇನ್​ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಮಾಹಿತಿ ನೀಡಿದ್ದು, 2021ರ ಏಪ್ರಿಲ್​​​​ 1ರಿಂದ 2021ರ ಮೇ 24ರವರೆಗೆ ಒಟ್ಟು 15.45 ಲಕ್ಷ ತೆರಿಗೆದಾರರಿಗೆ ರೀಫಂಡ್ ನೀಡಲಾಗಿದೆ ಎಂದು ಹೇಳಿದೆ. ಇದರಲ್ಲಿ 15 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ತೆರಿಗೆದಾರರಿಗೆ 7,494 ಕೋಟಿ ರೂಪಾಯಿ ಮರುಪಾವತಿ ಮಾಡಿದ್ರೆ, ಕಾರ್ಪೊರೇಟ್ ಟ್ಯಾಕ್ಸ್​ನ ರೀಫಂಡ್ ಮೊತ್ತ 17,807 ಕೋಟಿಯನ್ನ 44,140 ತೆರಿಗೆದಾರರಿಗೆ ನೀಡಲಾಗಿದೆ ಅಂತ ತಿಳಿಸಿದೆ.

ಈ ಹಣ ಮರುಪಾವತಿ ಯಾವ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದು ಎಂದು ಐಟಿ ಇಲಾಖೆ ನಿರ್ದಿಷ್ಟವಾಗಿ ಹೇಳಿಲ್ಲ. ಆದ್ರೆ ಇದು 2019-20ರ ಹಣಕಾಸು ವರ್ಷದಲ್ಲಿ ಫೈಲ್ ಮಾಡಿದ್ದ ಟ್ಯಾಕ್ಸ್​​ ರಿಟರ್ನ್‌ಗಳ ರೀಫಂಡ್​ ಎಂದು ಹೇಳಲಾಗ್ತಿದೆ.

 

The post ದೇಶದ 15.45 ಲಕ್ಷ ತೆರಿಗೆದಾರರಿಗೆ ₹25,301 ಕೋಟಿ ಟ್ಯಾಕ್ಸ್ ರೀಫಂಡ್ appeared first on News First Kannada.

Source: newsfirstlive.com

Source link