ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಲಂಡನ್ನಲ್ಲಿ ಖರೀದಿಸಿರುವ ಮನೆ ಸಂಚಲನ ಸೃಷ್ಟಿಸಿದೆ. ಮುಖೇಶ್ ಅಂಬಾನಿ ಭಾರತ ಬಿಟ್ಟು ಲಂಡನ್ನಲ್ಲಿ ಕುಟುಂಬ ಸಮೇತರಾಗಿ ನೆಲೆಸ್ತಾರೆ ಎಂಬ ಸುದ್ದಿ ಕೂಡ ಹರಿದಾಡ್ತಿದೆ. ಆದ್ರೆ ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಿರುವ ರಿಲಯನ್ಸ್ ಸಂಸ್ಥೆ ಅಂತಹ ಯಾವುದೇ ಪ್ಲಾನ್ ಇಲ್ಲ ಎಂದಿದೆ.
ಮುಖೇಶ್ ಅಂಬಾನಿ ಲಂಡನ್ನಲ್ಲಿ ಖರೀದಿಸಿದ ನಿವಾಸಕ್ಕೆ ಶಿಫ್ಟ್ ಆಗ್ತಾರೆ ಅನ್ನೋ ಸುದ್ದಿ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ರಿಲಯನ್ಸ್ ಲಿಮಿಟೆಡ್ ಮುಖ್ಯಸ್ಥ ಭಾರತ ತೊರೆಯುತ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಈ ಎಲ್ಲಾ ಗೊಂದಲಗಳಿಗೆ ಖುದ್ದು ರಿಲಯನ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಅಸಲಿಗೆ ಮುಖೇಶ್ ಅಂಬಾನಿಗೆ ಅಂತಹ ಪ್ಲ್ಯಾನ್ ಯಾವುದೂ ಇಲ್ವಂತೆ.
ಮುಖೇಶ್ ಅಂಬಾನಿ.. ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್ ಲಿಮಿಟೆಡ್ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕ.. ಸದ್ಯ ಅಂಬಾನಿ ಕುಟುಂಬ ಮುಂಬೈನ ಅಲ್ಟಾಮೌಂಟ್ ರಸ್ತೆಯ ಐಷಾರಾಮಿ ಆಂಟಿಲಿಯಾ ನಿವಾಸದಲ್ಲಿದೆ. ಆದ್ರೆ ಇದ್ರ ನಡುವೆ ಇದ್ದಕ್ಕಿದ್ದಂತೆ ಲಂಡನ್ನಲ್ಲಿ ಮುಖೇಶ್ ಅಂಬಾನಿ ನಿವಾಸ ಖರೀದಿಸಿದೆ. ನಿವಾಸ ಖರೀದಿಸಿದ್ದು ಓಕೆ, ಆದ್ರೆ ಕುಟುಂಬ ಸಮೇತರಾಗಿ ಲಂಡನ್ಗೆ ಶಿಫ್ಟ್ ಆಗ್ತಾರೆ ಅನ್ನೋ ವಿಚಾರ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು.
ಇದನ್ನೂ ಓದಿ:ದೇಶ ಬಿಡ್ತಾರಾ ಅಂಬಾನಿ..? ಕಂಗಾಲು ಆಯ್ತು ಮುಂಬೈ..!
ಲಂಡನ್ ನಿವಾಸಕ್ಕೆ ಅಂಬಾನಿ ಕುಟುಂಬ ಸ್ಥಳಾಂತರ ಸುಳ್ಳು
ಅಂತಹ ಯಾವುದೇ ಪ್ಲಾನ್ ಇಲ್ಲ ಅಂತ ರಿಲಯನ್ಸ್ ಸ್ಪಷ್ಟನೆ
ಕೊರೊನಾ ಲಾಕ್ಡೌನ್ ಹಾಗೂ ಸೋಂಕಿನ ತೀವ್ರತೆ ಹೆಚ್ಚಿದ್ದ ಸಮಯದಲ್ಲಿ ಅಂಬಾನಿ ಕುಟುಂಬ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದ್ದ ಐಷಾರಾಮಿ ಆಂಟಿಲಿಯಾ ನಿವಾಸದಲ್ಲೇ ಕಳೆದಿದ್ದರು. ಈ ವೇಳೆ ಮತ್ತೊಂದು ನಿವಾಸದ ಅಗತ್ಯವಿತ್ತು ಎಂಬ ಭಾವನೆ ಮೂಡಿತ್ತಂತೆ. ಈ ಹಿನ್ನೆಲೆಯಲ್ಲಿ ಹೊಸ ನಿವಾಸದ ನಿರ್ಮಾಣಕ್ಕೆ ಅಂಬಾನಿ ಮುಂದಾಗಿದ್ದಾರೆ ಎನ್ನಲಾಗಿತ್ತು.
ಸ್ಟೋಕ್ ಪಾರ್ಕ್ ನಿವಾಸ
- ಲಂಡನ್ನಲ್ಲಿ ಭವ್ಯವಾದ 49 ಕೊಠಡಿಗಳ ಹೊಸ ಮನೆ ಖರೀದಿ
- 300 ಎಕರೆ ವಿಸ್ತೀರ್ಣದ 592 ಕೋಟಿಯ ಸ್ಟೋಕ್ ಪಾರ್ಕ್
- ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಹ ಸ್ಥಾಪಿಸಲಾಗಿದೆ
- ಲಂಡನ್ನ ಮನೆಯಲ್ಲಿ ದೇವಸ್ಥಾನವನ್ನು ನಿರ್ಮಿಸಿದ ಅಂಬಾನಿ
- ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಪಾರ್ಕ್ ಅಭಿವೃದ್ಧಿಪಡಿಸ್ತೇವೆ
ಲಂಡನ್ನಲ್ಲಿ ಮುಖೇಶ್ ಅಂಬಾನಿ ಭವ್ಯವಾದ 49 ಕೊಠಡಿಗಳ ಹೊಸ ಮನೆ ಖರೀದಿಸಿದ್ದಾರೆ. ಇದು 300 ಎಕರೆ ವಿಸ್ತೀರ್ಣದ 592 ಕೋಟಿಯ ಸ್ಟೋಕ್ ಪಾರ್ಕ್ ಆಗಿದೆ. ಇದ್ರಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಹ ಸ್ಥಾಪಿಸಲಾಗಿದೆ. ಇನ್ನು ಮನೆಯಲ್ಲಿ ದೇವಸ್ಥಾನವನ್ನು ಕೂಡ ನಿರ್ಮಿಸಲಾಗಿದೆ. ಇದನ್ನ ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸ್ತೇವೆ ಅಂತ ಮುಖೇಶ್ ಅಂಬಾನಿ ಆಪ್ತ ಮೂಲಗಳು ಹೇಳಿದ್ವು.
ಇನ್ನು ಇಡೀ ಕುಟುಂಬ ಭಾರತ ಬಿಟ್ಟು ಅಲ್ಲಿಗೆ ಶಿಫ್ಟ್ ಆಗುತ್ತೆ ಅಂತನೂ ಹೇಳಲಾಗಿತ್ತು. ಆದ್ರೆ ಇಷ್ಟೆಲ್ಲಾ ಸೌಲಭ್ಯಗಳೊಂದಿಗೆ ಭಾರತದ ಪ್ರಸಿದ್ಧ ಉದ್ಯಮಿ ಎನಿಸಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ನಿವಾಸ ಖರೀದಿಸಿದ್ರೂ ಅವರ ಕುಟುಂಬ ಸದಸ್ಯರು ಭಾರತದಿಂದ ಶಿಫ್ಟ್ ಆಗ್ತಿಲ್ಲ. ಸ್ಟೋಕ್ ಪಾರ್ಕ್ ಖರೀದಿಸಿರುವ ಮುಖೇಶ್ ಅಂಬಾನಿ ಮತ್ತು ಕುಟುಂಬ ಅಲ್ಲಿ ವಾಸಿಸುವ ಸುದ್ದಿ ಸುಳ್ಳು ಅಂತ. ಖುದ್ದು ರಿಲಾಯನ್ಸ್ ಸಂಸ್ಥೆಯೇ ಪ್ರಕಟಣೆ ಹೊರಡಿಸಿದೆ.
ರಿಲಯನ್ಸ್ ಸಂಸ್ಥೆ ಮುಖ್ಯಸ್ಥರು, ಲಂಡನ್ ಅಥವಾ ವಿಶ್ವದ ಬೇರೆ ಯಾವುದೇ ಸ್ಥಳಕ್ಕೆ ರಿಲೋಕೇಟ್ ಆಗುವ ಯಾವ ಚಿಂತನೆ ಇಲ್ಲ. ಅಲ್ಲದೇ ನಮ್ಮ ರಿಲಿಯನ್ಸ್ ಸಂಸ್ಥೆ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ. ಭಾರತದ ಖ್ಯಾತಿಯನ್ನು ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಪಸರಿಸಲು ಕಾರ್ಯನಿರ್ವಹಿಸುತ್ತಿದೆ. ಲಂಡ್ನಲ್ಲಿ ಖರೀದಿ ಮಾಡಲಾದ ಜಾಗದಲ್ಲಿ ಸ್ಪೋರ್ಟ್ಸ್ ಕ್ಲಬ್ ಒಂದು ನಿರ್ಮಾಣ ಮಾಡಲಿದ್ದೇವೆ.
-ರಿಲಯನ್ಸ್ ಸಂಸ್ಥೆ
ಹೀಗೆ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಅಂಬಾನಿ ಕುಟುಂಬ ಭಾರತ ಬಿಟ್ಟು ಲಂಡನ್ ಮನೆಗೆ ಶಿಫ್ಟ್ ಆಗುವ ಯಾವುದೇ ಪ್ಲಾನ್ ಇಲ್ಲ ಅಂತ ರಿಲಾಯನ್ಸ್ ಸಂಸ್ಥೆ ಹೇಳಿದೆ. ಒಟ್ನಲ್ಲಿ ಸಂಚಲನ ಸೃಷ್ಟಿಸಿದ್ದ ಮುಖೇಶ್ ಅಂಬಾನಿ ಲಂಡನ್ ಶಿಫ್ಟ್ ವದಂತಿಗೆ ಕಡೆಗೂ ಈ ಮೂಲಕ ತೆರೆಯಂತೂ ಬಿದ್ದಿದೆ.