ದೇಶ ಬಿಡ್ತಾರಾ ಅಂಬಾನಿ..? ಕಂಗಾಲು ಆಯ್ತು ಮುಂಬೈ..!


ಮುಂಬೈ: ದೇಶದ ಶ್ರೀಮಂತ ಉದ್ಯಮಿ ರಿಲಯನ್ಸ್​ ಲಿಮಿಟೆಡ್​​ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ತಮ್ಮ ಕುಟುಂಬಕ್ಕಾಗಿ ಲಂಡನ್​​​ನಲ್ಲಿ ಮನೆ ಮಾಡಲು ಮುಂದಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು. ಮೂಲಗಳ ಮಾಹಿತಿ ಅನ್ವಯ ಅಂಬಾನಿ, ಲಂಡನ್​​ನಲ್ಲಿ ಇತ್ತೀಚೆಗೆ ಖರೀದಿ ಮಾಡಿದ್ದ 300 ಎಕರೆ ವಿಸ್ತೀರ್ಣದಲ್ಲಿ ನಿವಾಸ ಮಾಡಲು ಮುಂದಾಗಿದ್ದರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಿಲಯನ್ಸ್ ಸಂಸ್ಥೆ ಅಂತಹ ಯಾವುದೇ ಪ್ಲಾನ್​​ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೊರೋನಾ ಲಾಕ್​​ಡೌನ್​​ ಹಾಗೂ ಸೋಂಕಿನ ತೀವ್ರತೆ ಹೆಚ್ಚಿದ್ದ ಸಮಯದಲ್ಲಿ ಅಂಬಾನಿ ಕುಟುಂಬ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದ್ದ ಐಷಾರಾಮಿ ಆಂಟಿಲಿಯಾ ನಿವಾಸದಲ್ಲೇ ಕಳೆದಿದ್ದರು. ಈ ವೇಳೆ ಕುಟುಂಬಸ್ಥರಿಗೆ ತಮಗೆ ಅಂತ ಮತ್ತೊಂದು ನಿವಾಸದ ಅಗತ್ಯವಿತ್ತು ಎಂಬ ಭಾವನೆ ಮೂಡಿತ್ತಂತೆ. ಈ ಹಿನ್ನೆಲೆಯಲ್ಲಿ ಹೊಸ ನಿವಾಸದ ನಿರ್ಮಾಣಕ್ಕೆ ಅಂಬಾನಿ ಮುಂದಾಗಿದ್ದಾರಂತೆ ಎಂದು ವರದಿಯಾಗಿತ್ತು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರೋ ರಿಲಯನ್ಸ್ ಸಂಸ್ಥೆ ಮುಖ್ಯಸ್ಥರು, ಲಂಡನ್ ಅಥವಾ ವಿಶ್ವದ ಬೇರೆ ಯಾವುದೇ ಸ್ಥಳಕ್ಕೆ ರಿಲೋಕೇಟ್ ಆಗುವ​ ಯಾವ ಚಿಂತನೆಯೂ ಇಲ್ಲ. ಅಲ್ಲದೇ ನಮ್ಮ ರಿಲಿಯನ್ಸ್​​ ಸಂಸ್ಥೆ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ. ಭಾರತದ ಖ್ಯಾತಿಯನ್ನು ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಪಸರಿಸಲು ಕಾರ್ಯನಿರ್ವಹಿಸುತ್ತಿದೆ. ಲಂಡ್​​ನಲ್ಲಿ ಖರೀದಿ ಮಾಡಲಾದ ಜಾಗದಲ್ಲಿ ಸ್ಪೋರ್ಟ್ಸ್​ ಕ್ಲಬ್ ಒಂದು ನಿರ್ಮಾಣ ಮಾಡಲಿದ್ದೇವೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

The post ದೇಶ ಬಿಡ್ತಾರಾ ಅಂಬಾನಿ..? ಕಂಗಾಲು ಆಯ್ತು ಮುಂಬೈ..! appeared first on News First Kannada.

News First Live Kannada


Leave a Reply

Your email address will not be published. Required fields are marked *