ತೆಳ್ಳಗೆ ಇರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಬೆಳಗ್ಗೆದ್ದು ಒಂದು ಲೋಟ ಚಹಾ ಕುಡಿಯದೇ ಇರುವುದು ಸಾಧ್ಯವೇ ಇಲ್ಲ. ಗ್ರೀನ್‌ ಟೀ ಇಷ್ಟವಾಗೋದಿಲ್ಲ ಎನ್ನುವವರಿಗೂ ಒಂದು ದಾರಿಯಿದೆ. ಅದುವೇ ದೇಹದ ತೂಕ ಇಳಿಸುವ ಆರೋಗ್ಯಕರ ಚಹಾ. ದೇಹದ ತೂಕ ಇಳಿಸಲು ಕಪ್ಪು, ಹಸುರು, ಗಿಡಮೂಲಿಕೆಗಳಿರುವ ಚಹಾ ಉತ್ತಮವೆಂದು ಕೇಳಿದ್ದೇವೆ.

ಇದನ್ನೂ ಓದಿ:ಲಾಲ್ ಭಾಗ್ ಬಳಿ ಯುವಕನ ಮೇಲೆ ಹಲ್ಲೆ ಪ್ರಕರಣ: ಓರ್ವ ಅಪ್ರಾಪ್ತ ವಯಸ್ಕ ಸೇರಿ ಮೂವರ ಬಂಧನ

ಮುಖ್ಯವಾಗಿ ಹಾಲು ಹಾಕಿ ಮಾಡಿದ ಚಹಾದಲ್ಲಿ ತೂಕ ಇಳಿಸುವವರು ಸೇವಿಸುವುದಿಲ್ಲ. ಕಾರಣ ಹಾಲಿನಲ್ಲಿ ಕೊಬ್ಬಿನಾಂಶವಿರುತ್ತದೆ. ಆದರೆ ಹಾಲು ಹಾಕಿದ ಚಹಾದಿಂದಲೂ ದೇಹದ ತೂಕ ಇಳಿಸುವ ಚಹಾವಾಗಿ ಪರಿವರ್ತಿಸಲು ಸಾಧ್ಯವಿದೆ. ಅದಕ್ಕಾಗಿ ಚಹಾ ಮಾಡುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು.

ಚಹಾ ತಯಾರಿಸುವ ವಿಧಾನ ಒಂದು ಕಪ್‌ ನೀರಿಗೆ ಒಂದು ಚಮಚ ಕೋಕೋ ಪೌಡರ್‌, ಅರ್ಧ ಚಮಚ ಚಹಾ ಹುಡಿ, ಅರ್ಧ ಇಂಚಿನಷ್ಟು ಶುಂಠಿ, ಅರ್ಧ ಇಂಚಿನಷ್ಟು ದಾಲ್ಚಿನ್ನಿ ತೊಗಟೆ, ಅರ್ಧ ಚಮಚ ಬೆಲ್ಲ 2- 3 ಚಮಚ ಹಾಲು ಸೇರಿಸಿ ಚಹಾ ಮಾಡಿಕೊಳ್ಳಬೇಕು ಈ ಚಹಾ ದೇಹದ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮಾತ್ರವಲ್ಲ ಇದು ಆರೋಗ್ಯಕರ ಪೇಯವೂ ಹೌದು.

ಸಾಮಾನ್ಯವಾಗಿ ನಾವು ಚಹಾ ಮಾಡುವಾಗ ಹೆಚ್ಚಿನ ಪ್ರಮಾಣದ ಹಾಲು ಸೇರಿಸುತ್ತೇವೆ ಮತ್ತು ಕಡಿಮೆ ನೀರು ಬಳಸುತ್ತೇವೆ. ಇದಲ್ಲದೆ ಸಕ್ಕರೆಯ ಅಂಶವೂ ಹೆಚ್ಚಾಗಿರುತ್ತದೆ. ಆದರೆ ಈ ಚಹಾದಲ್ಲಿ ಹಾಲು ಕಡಿಮೆ ಇರುತ್ತದೆ. ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸಲಾಗುತ್ತದೆ. ಜತೆಗೆ ಕೆಲವು ಮಸಾಲೆಗಳನ್ನು ಒಳಗೊಂಡಿರುತ್ತದೆ.

ದಿನಕ್ಕೆರಡು ಬಾರಿ ಈ ಚಹಾವನ್ನು ಸೇವಿಸಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದಲ್ಲ. ಊಟದ ಸಮಯ ಹತ್ತಿರ ಇದನ್ನು ಸೇವಿಸಬಹುದು. ಶುಂಠಿ ಮತ್ತು ದಾಲ್ಚಿನ್ನಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ದೇಹದ ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಅಲ್ಲದೇ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೋಕೋ ಪೌಡರ್‌ನಲ್ಲಿ ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿದೆ. ಆದರೆ ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಿ ಹೊಟ್ಟೆ ತುಂಬಿದಂತೆ ಮಾಡುತ್ತದೆ. ಹಾಲು ಹಸಿವನ್ನು ಕಡಿಮೆ ಮಾಡುತ್ತದೆ. ಬೆಲ್ಲ ಹೊಟ್ಟೆಯ ಕೊಬ್ಬು ಕರಗಿಸಲು ನೆರವಾಗುತ್ತದೆ. ಹೀಗಾಗಿ ದೇಹದ ತೂಕ ಇಳಿಸಬೇಕು ಎಂದುಕೊಳ್ಳುವವರಿಗೆ ಈ ಚಹಾ ಅತ್ಯುತ್ತಮ ಆಯ್ಕೆಯಾಗಿದೆ.

ಆರೋಗ್ಯ – Udayavani – ಉದಯವಾಣಿ
Read More