ದೊಡ್ಡಗುಬ್ಬಿ ಕೆರೆಯಲ್ಲಿ ನೀರು ಪಾಲಾಗಿದ್ದ ಮೂವರು ಬಾಲಕರು; ಓರ್ವ ಯುವಕನ ಶವ ಪತ್ತೆ | Three Youths missing who went for swimming in doddagubbi lake case one boy body found


ದೊಡ್ಡಗುಬ್ಬಿ ಕೆರೆಯಲ್ಲಿ ನೀರು ಪಾಲಾಗಿದ್ದ ಮೂವರು ಬಾಲಕರು; ಓರ್ವ ಯುವಕನ ಶವ ಪತ್ತೆ

ಸಾಂಧರ್ಬಿಕ ಚಿತ್ರ

ಡ್ಡಗುಬ್ಬಿ ಕೆರೆಯಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನ ಶವ ಪತ್ತೆಯಾಗಿದೆ.

ಬೆಂಗಳೂರು: ದೊಡ್ಡಗುಬ್ಬಿ ಕೆರೆಯಲ್ಲಿ (Doddagubbi lake) ಮೂವರು ಬಾಲಕರು ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನ ಶವ ಪತ್ತೆಯಾಗಿದೆ. ನೀರುಪಾಲಾಗಿದ್ದ ಬಾಲಕ ಸಾಹಿಲ್ ಶವ ಪತ್ತೆಯಾಗಿದೆ. ೨ ಎಸ್ ಡಿ ಆರ್ ಎಫ್ (SDRF) ೧ ಅಗ್ನಿಶಾಮಕ  ಸಿಬ್ಬಂದಿಯಿಂದ (Fire Department) ಶೋಧ ಕಾರ್ಯ ನಡೆಸುತ್ತಿದ್ದಾರೆ. ನೀರುಪಾಲಾದ ಇಮ್ರಾನ್ ಮತ್ತು ಮುಬಾರಕ್​ಗಾಗಿ ಶೋಧ ಕಾರ್ಯ ಆರಂಭಗೊಂಡಿದೆ. ನಿನ್ನೆ ಮಧ್ಯಾಹ್ನ ಕೆರೆಯಲ್ಲಿ ಈಜಲು ತೆರಳಿದ್ದಾಗ ನೀರುಪಾಲಾಗಿದ್ದರು.  ಸದ್ಯ ದೊಡ್ಡಗುಬ್ಬಿ ಕೆರೆಯಲ್ಲಿ  ಇಮ್ರಾನ್, ಮುಬಾರಕ್ ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದನ್ನು ಓದಿ: ಮುಸ್ಲಿಂ ಯುವತಿಯನ್ನು ಪ್ರೀತಿಸಿದಕ್ಕೆ ದಲಿತ ಯುವಕನ ಕೊಲೆ; ಯುವತಿ ಸಹೋದರ ಸೇರಿ ಇಬ್ಬರು ಅರೆಸ್ಟ್

ನಿನ್ನೆ (ಮೇ 26)ರಂದು ಮಧ್ಯಾಹ್ನ ಮೂವರು ಯುವಕರು ನಾಗವಾರದ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ  ಮೂವರು ಯುವಕರು ನಾಪತ್ತೆಯಾಗಿದ್ದರು. ಮಧ್ಯಾಹ್ನ 1 ಗಂಟೆಯಿಂದ ಇಮ್ರಾನ್(17), ಮುಭಾರಕ್ (17), ಸಾಹಿಲ್(15) ನಾಪತ್ತೆಯಾದವರು. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ: 20 ನಿಮಿಷ ಮೊದಲೇ ರೈಲು ನಿಲ್ದಾಣ ತಲುಪಿದ್ದಕ್ಕೆ ಪ್ಲಾಟ್​ಫಾರ್ಮ್​ನಲ್ಲೇ ಡ್ಯಾನ್ಸ್​ ಮಾಡಿದ ಪ್ರಯಾಣಿಕರು; ವಿಡಿಯೋ ವೈರಲ್

ಘಟನೆ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಯೂ.ಡಿ.ಆರ್ ದಾಖಲಾಗಿದೆ. ಸರಾಯಿಪಾಳ್ಯದ ಫಾತಿಮಾ ಲೇಔಟ್ ನಿವಾಸಿ ಇಮ್ರಾನ್ ಪಾಷ (17) ಎಲಿಮೆಂಟ್ಸ್ ಮಾಲ್ ಪಿವಿಆರ್ ನಲ್ಲಿ ಹೆಲ್ಪರ್ ಕೆಲಸ ಮಾಡುತಿದ್ದ. ಮುಬಾರಕ್ (17) ಫಾತೀಮಾ ಲೇಔಟ್ ನ ಅಬೂಬ್ ಕರ್ ಮಸೀದಿ ರಸ್ತೆ ಬಳಿ ವಾಸವಾಗಿದ್ದು ವೆಲ್ಡಿಂಗ್ ಕೆಲಸ ಮಾಡುತಿದ್ದ. ಸಾಹಿಲ್ (15) ಫಾತೀಮಾ ಲೇಔಟ್ ನ ಅಬೂಬ್ ಕರ್ ಮಸೀದಿ ರಸ್ತೆ, ಫಾತೀಮಾ ಲೇಔಟ್ ನಲ್ಲಿ ವಾಸವಾಗಿದ್ದ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *