ದೊಡ್ಡಬಳ್ಳಾಪುರ: ಕೊರೊನಾ ಸಾಂಕ್ರಾಮಿಕ ಹೆಚ್ಚಾಗಿದ್ದು ಜನರು ತತ್ತರಿಸಿದ್ದಾರೆ. ಪೊಲೀಸ್​ ಇಲಾಖೆ ಸಿಬ್ಬಂದಿ ಕೊರೊನಾ ವಾರಿಯರ್ಸ್​ ಆಗಿ ಸೋಂಕಿನ ರಿಸ್ಕ್​​ನಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹೆನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಪಿಪಿಇ‌ ಕಿಟ್ ಧರಿಸಿ  ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಪೊಲೀಸ್​ ಸಿಬ್ಬಂದಿ ಸೋಂಕಿಗೀಡಾಗುತ್ತಿದ್ದು ಕ್ವಾರಂಟೈನ್ ಹಾಗೂ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರಲ್ಲಿ ಆರಕ್ಷಕರು ಈಗ ಪಿಪಿಇ ಕಿಟ್​ ಧರಿಸಿ ಕರ್ತವ್ಯಕ್ಕೆ ಹಾಜರಾಗ್ತಿದ್ದಾರೆ. ಸದ್ಯ, ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಅನಗತ್ಯ ಭೇಟಿ ನಿಷೇಧಿಸಲಾಗಿದೆ. ದೂರು ಸಲ್ಲಿಸಲು ಬರುವವರಿಗೆ ಮಾತ್ರ ಪ್ರವೇಶವಿದೆ. ಅಹವಾಲನ್ನು ಮುಖ್ಯದ್ವಾರದಲ್ಲಿ ಸ್ವೀಕರಿಸಲಾಗ್ತಿದೆ.

The post ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪಿಪಿಇ‌ ಕಿಟ್ ಧರಿಸಿ ಸಿಬ್ಬಂದಿ ಕರ್ತವ್ಯ appeared first on News First Kannada.

Source: newsfirstlive.com

Source link