ದೊಡ್ಡಬಳ್ಳಾಪುರ: ಭಾರಿ ಮಳೆಯಿಂದ ಮೇಡಹಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು; ವಸ್ತುಗಳು ಜಲಾವೃತ | Heavy rain causes several effects in Bengaluru rural district Doddaballapur and Devanahalli talluk villages

ದೊಡ್ಡಬಳ್ಳಾಪುರ: ಭಾರಿ ಮಳೆಯಿಂದ ಮೇಡಹಳ್ಳಿಯಲ್ಲಿ ಮನೆಗಳಿಗೆ ನುಗ್ಗಿದ ನೀರು; ವಸ್ತುಗಳು ಜಲಾವೃತ

ಮನೆಗೆ ನುಗ್ಗಿರುವ ನೀರನ್ನು ಹೊರಹಾಕುತ್ತಿರುವ ಜನರು

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ರಾತ್ರಿ ಇಡೀ ಆತಂಕದಲ್ಲಿ ಜನರು ಕಾಲ ಕಳೆದಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲ ಜಲಾವೃತಗೊಂಡಿದೆ. ಮಳೆ ನೀರನ್ನು ಮನೆಯಿಂದ ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರು ಸಮಪರ್ಕ ಚರಂಡಿ ವ್ಯವಸ್ಥೆ ಮಾಡದ ಕಾರಣ ಅವ್ಯವಸ್ಥೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತ ವಿಡಿಯೊ ವರದಿ ಇಲ್ಲಿದೆ:

ಕೋರಮಂಗಲ ಗ್ರಾಮದಲ್ಲಿ ಮಳೆಗೆ ತುಂಬಿ ಹರಿದ ರಾಜಕಾಲುವೆ, ಹಳ್ಳಗಳು; ಸಂಚರಿಸಲು ಜನರ ಪರದಾಟ:
ಕಳೆದ ಎರಡು ದಿನಗಳಿಂದ ಸುರಿದಯುತ್ತಿರುವ ಭಾರಿ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋರಮಂಗಲ ಗ್ರಾಮದಲ್ಲಿ ರಾಜಕಾಲುವೆ ಮತ್ತು ಹಳ್ಳಗಳು ತುಂಬಿ ಹರಿದಿವೆ. ಇದರಿಂದಾಗಿ ಗ್ರಾಮಸ್ಥರಿಗೆ ತೋಟದ ಮನೆಗಳಿಂದ ಮತ್ತೊಂದೆಡೆಗೆ ಸಂಚರಿಸಲು ಸಾಧ್ಯವಾಗದೇ ಪರದಾಟ ನಡೆಸಿದ್ದಾರೆ. ಕೊನೆಗೆ ಸ್ಥಳೀಯರ ಸಹಾಯದಿಂದ ಕಾಲುವೆಗೆ ಅಡ್ಡಲಾಗಿ ಹಗ್ಗ ಕಟ್ಟಿ, ಹಗ್ಗದ ಮೂಲಕ ಜನರು ಹಳ್ಳ‌ ದಾಟಿದ್ದಾರೆ. ಈ ಕುರಿತ ವಿಡಿಯೊ ವರದಿ ಇಲ್ಲಿದೆ.

Rain effect in Doddaballapur

ಸ್ಥಳೀಯರ ಸಹಾಯದಿಂದ ಕಾಲುವೆ ದಾಟುತ್ತಿರುವ ಜನರು

ಇದನ್ನೂ ಓದಿ:

ಬೆಂಗಳೂರಲ್ಲಿ ಬಿಬಿಎಂಪಿ ಎಡವಟ್ಟಿಗೆ 9 ವರ್ಷದ ಬಾಲಕ ಬಲಿ!

ಸಿಎಂ ಬಸವರಾಜ ಬೊಮ್ಮಾಯಿ ಅಕ್ಟೋಬರ್ 11ರಂದು ತಿರುಪತಿಯಲ್ಲಿ ವಾಸ್ತವ್ಯ, ತಿಮ್ಮಪ್ಪನ ದರ್ಶನ

ಸುದೀಪ್​ಗೆ ವಯಸ್ಸು ಆಗೋದೇ ಇಲ್ವಾ? ನಟಿ ರಮ್ಯಾ ನೇರ ಪ್ರಶ್ನೆ: ‘ಕೋಟಿಗೊಬ್ಬ 3’ ಟ್ರೇಲರ್​ಗೆ ಮೆಚ್ಚುಗೆ

TV9 Kannada

Leave a comment

Your email address will not be published. Required fields are marked *