ನವದೆಹಲಿ: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಸಿಲುಕಿ ದೇಶ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ವಾಯುಸೇನೆಯ ನೆರವು ಪಡೆದುಕೊಂಡಿದ್ದು, ಕೊರೊನಾ ವಿರುದ್ಧದ ಯುದ್ಧವನ್ನು ತೀವ್ರಗೊಳಿಸಿದೆ.

ಹಲವು ದೇಶಗಳಿಂದ, ನಗರಗಳಿಂದ ಸತತ ಹಾರಾಟ ನಡೆಸುತ್ತಿರುವ ವಾಯು ಪಡೆಯ ವಿಮಾನಗಳು ಬೃಹತ್​ ಗ್ರಾತ್ರದ ಆಕ್ಸಿಜನ್ ಟ್ಯಾಂಕರ್​ಗಳು, ಆಕ್ಸಿಜನ್ ಜನರೇಟರ್, ಆಕ್ಸಿಜನ್ ಕಲೆಕ್ಟರ್, ಮಾಸ್ಕ್, ಪಿಪಿಇ ಕಿಟ್​ಗಳು, ರೆಮ್​ಡೆಸಿವಿರ್ ಹಾಗೂ ವೈದ್ಯಕೀಯ ಪರಿಕರಗಳನ್ನು ಏರ್ ಲಿಫ್ಟ್ ಮಾಡುತ್ತಿವೆ.

ಯಾವೆಲ್ಲ ವಿಮಾನ ಕೊರೊನಾ ಯುದ್ಧಕ್ಕೆ ಬಳಕೆಯಾಗ್ತಿವೆ? ವಿಮಾನಗಳು ಎಷ್ಟು ದೂರ.. ಎಷ್ಟು ತೂಕ ಹೊತ್ತು ಹಾರುತ್ತವೆ? ಎಂಬುದನ್ನು ನೋಡುವುದಾದರೇ;

 • 1) C-17: ರೇಂಜ್ -4,480 ಕಿ.ಮೀ
  ಗೂಡ್ಸ್​ ತೂಕ: 77 ಟನ್​
 • 2) IL -76: ರೇಂಜ್ -4,000 ಕಿ.ಮೀ
  ಗೂಡ್ಸ್​ ತೂಕ: 48 ಟನ್
 • 3) C-130 J: ರೇಂಜ್ -3,300 ಕಿ.ಮೀ
  ಗೂಡ್ಸ್​ ತೂಕ: 19 ಟನ್​

 • 4) Chinook: ರೇಂಜ್ -740 ಕಿ.ಮೀ
  ಗೂಡ್ಸ್​ ತೂಕ: 10 ಟನ್​
 • 5) AN-32: ರೇಂಜ್ -2,500 ಕಿ.ಮೀ
  ಗೂಡ್ಸ್​ ತೂಕ: 6.5 ಟನ್​
 • 6) AVRO: ರೇಂಜ್ -1,715ಕಿ.ಮೀ
  ಗೂಡ್ಸ್​ ತೂಕ: 5 ಟನ್​
 • 7) MI-17: ರೇಂಜ್ -800 ಕಿ.ಮೀ
  ಗೂಡ್ಸ್​ ತೂಕ: 4 ಟನ್​

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ರಕ್ಷಣಾ ಸಂಸ್ಥೆಗಳಿಗೆ ನಿರ್ದೇಶನಗಳನ್ನು ನೀಡಿದ್ದು, ದೇಶಾದ್ಯಂತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಲು ಅಧಿಕಾರಿಗಳು ಕೆಲಸ ಮಾಡಬೇಕೆಂದು ಸೂಚಿಸಿದ್ದರು. ಇತ್ತ ದೆಹಲಿಯಲ್ಲಿ ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಕೋವಿಡ್ -19 ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಲು ಐಎಎಫ್ ಕೊಚ್ಚಿ, ಮುಂಬೈ, ವಿಜಯವಾಡ ಮತ್ತು ಬೆಂಗಳೂರಿನಿಂದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ರವಾನೆ ಮಾಡಿದೆ.

The post ದೊಡ್ಡ ದೊಡ್ಡ ಟ್ಯಾಂಕರ್​ಗಳೂ ಏರ್​ಲಿಫ್ಟ್​​.. ಏರ್​ಫೋರ್ಸ್​​ನ ಪವರ್​ಫುಲ್ ವಿಮಾನಗಳ ಬಗ್ಗೆ ತಿಳಿಲೇಬೇಕು appeared first on News First Kannada.

Source: newsfirstlive.com

Source link