ದೊಡ್ಡ ಪ್ರಮಾದ ಮಾಡಿಬಿಡ್ತಾ ಆಯ್ಕೆ ಸಮಿತಿ..? ‘ತಲೆದಂಡ’ ಪಕ್ಕಾ ಅಂತಿವೆ ಸಾಲು ಸಾಲು ಪ್ರಶ್ನೆಗಳು..!


ಸೌತ್​ ಆಫ್ರಿಕಾ ‘ಎ’ ತಂಡದ ವಿರುದ್ಧ ಸೆಣಸಾಟಕ್ಕೆ, ಭಾರತ ‘ಎ’ ತಂಡ.. ಮತ್ತು ಕಿವೀಸ್​ ಟೆಸ್ಟ್​​ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಆದರೆ ಈ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಸೆಲೆಕ್ಷನ್​ ಕಮಿಟಿ ಮಾಡಿದ ಈ ಪ್ರಮಾದಗಳಿಂದ, ತಂಡ ಬೆಲೆತೆರುವ ಸಾಧ್ಯತೆ ಕೂಡ ಇದೆ.

ನ್ಯೂಜಿಲೆಂಡ್​​ ಟೆಸ್ಟ್​​​ ಸರಣಿಗೆ ಭಾರತ ತಂಡ ಪ್ರಕಟಗೊಂಡ ಬೆನ್ನಲ್ಲೇ, ಸೆಲೆಕ್ಷನ್​ ಕಮಿಟಿ ವಿರುದ್ಧ ಟೀಕ ಪ್ರಹಾರ ವ್ಯಕ್ತವಾಗಿದೆ. T20 ವಿಶ್ವಕಪ್​​ಗೆ ತಂಡದ​ ಆಯ್ಕೆಯಲ್ಲಿ ಮಾಡಿದ್ದ ಪ್ರಮಾದವನ್ನೇ ಸೆಲೆಕ್ಷನ್​ ಕಮಿಟಿ, ಕಿವೀಸ್​ ಸರಣಿಗೂ ಮಾಡಿದೆ. ಫಾರ್ಮ್​​​ನಲ್ಲಿದ್ದ ಆಟಗಾರರನ್ನ ಕೈಬಿಟ್ಟು, ಔಟ್ ಆಫ್ ​ಫಾರ್ಮ್​ ಆಟಗಾರರಿಗೆ ಅವಕಾಶ ನೀಡಿದ್ದು, ಎಷ್ಟು ಎಂಬ ಪ್ರಶ್ನೆ ಉದ್ಭವಿಸಿದೆ. ಹಾಗಾಗಿ ಕ್ರಿಕೆಟ್​ ವಲಯದಲ್ಲಿ ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಟೀಕೆಯ ಬೆನ್ನಲ್ಲೆ ವಿಹಾರಿಯನ್ನ ‘ಎ’ ತಂಡಕ್ಕೆ ಆಯ್ಕೆ ಮಾಡಿದ್ದೇಕೆ..?
ಸಿಡ್ನಿ ಟೆಸ್ಟ್​​​​ನಲ್ಲಿ ಟೀಮ್​ ಇಂಡಿಯಾಗೆ ಸಂಜೀವಿನಿಯಾಗಿದ್ದ ಹನುಮ ವಿಹಾರಿ ಆಟಕ್ಕೆ ಇಡೀ ವಿಶ್ವವೇ ಬೆರಗಾಗಿತ್ತು. ಆದರೀಗ ಆತನನ್ನೇ ತಂಡದಿಂದ ಕೈಬಿಡಲಾಗಿದೆ. ಇದರಿಂದ ಜಾಲತಾಣದಲ್ಲಿ ನೆಟ್ಟಿಗರು ಆಯ್ಕೆ ಸಮಿತಿ ವಿರುದ್ಧ ಗುಡುಗಿದ್ರು. ಇದರಿಂದ ಕೂಡಲೇ ಎಚ್ಚೆತ್ತ ಆಯ್ಕೆ ಸಮಿತಿ, ಭಾರತ ‘ಎ’ ತಂಡಕ್ಕೆ ವಿಹಾರಿಯನ್ನ ಸೇರಿಸಿ ಪರಿಷ್ಕೃತ ತಂಡವನ್ನ ಪ್ರಕಟಿಸಿದೆ.

ಫಾರ್ಮ್​​ನಲ್ಲಿದ್ದ ಕೆ.ಗೌತಮ್​ರ​​​ನ್ನ ಕೈಬಿಟ್ಟು ಜಯಂತ್​​​ ಆಯ್ಕೆ ಸರಿನಾ..?
4 ವರ್ಷಗಳ ಬಳಿಕ ಸ್ಥಾನ ಗಿಟ್ಟಿಸಿಕೊಂಡ ಜಯಂತ್​​ ಯಾದವ್​ ಆಯ್ಕೆಯಲ್ಲೂ, ಸೆಲೆಕ್ಟರ್ಸ್ ತಪ್ಪು ಮಾಡಿದ್ದಾರೆ. ಇತ್ತೀಚೆಗೆ ಜಯಂತ್​​​, ಬ್ಯಾಟಿಂಗ್​​-ಬೌಲಿಂಗ್​​ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ. ಇಷ್ಟಾದರೂ ತಂಡಕ್ಕೆ ಮರಳಿ ಕರೆ ತಂದಿದ್ದು ಅಚ್ಚರಿ ಮೂಡಿಸಿದೆ. ಆದರೆ ಅದ್ಭುತ ಫಾರ್ಮ್​​ನಲ್ಲಿದ್ದ ಕೆ.ಗೌತಮ್,​ ಆಯ್ಕೆ ಸಮಿತಿ ಕಣ್ಣಿಗೆ ಕಾಣಲಿಲ್ಲವೇಕೆ.? ಇದೇನಾ ನ್ಯಾಯ ಬದ್ಧತೆ ಎಂದು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:‘ಬಿಟ್​​ ಕಾಯಿನ್’ ಕೇಸ್​ ಗಂಭೀರ ಅರಿತ ಮೋದಿ; ಕ್ರಿಪ್ಟೋ ಕರೆನ್ಸಿ ಸಂಬಂಧ ರಾತ್ರೋರಾತ್ರಿ ದಿಢೀರ್​ ಸಭೆ

ಮನ್‌ದೀಪ್ ಸಿಂಗ್​, ಶೆಲ್ಡನ್​​ ಜಾಕ್ಸನ್​ಗೆ ಚಾನ್ಸ್​ ಏಕೆ ಕೊಟ್ಟಿಲ್ಲ..?
ರಣಜಿಯಲ್ಲಿ ನೀಡಿದ ಪ್ರದರ್ಶನದ ಮೇರೆಗೆ ಭಾರತ ‘ಎ’ ತಂಡವನ್ನ ಕಟ್ಟಲಾಗಿದೆ. ಆದರೆ ವೈಫಲ್ಯ ಅನುಭವಿಸಿದ್ದ ಬಾಬಾ ಅಪರಿಜಿತ್​ಗೆ ಚಾನ್ಸ್​ ನೀಡಿ, ಮಂದೀಪ್​ ಸಿಂಗ್​​, ಶೆಲ್ಡನ್​ ಜಾಕ್ಸನ್​ರಂತ ಆಟಗಾರರಿಗೆ ಮೋಸ ಮಾಡಿದ್ದೇಕೆ? ಕಳೆದ ಋತುವಿನಲ್ಲಿ ಅಪರಿಜಿತ್ 8 ಪಂದ್ಯಗಳಲ್ಲಿ 29.20ರ ಸರಾಸರಿಯಲ್ಲಿ 292 ರನ್ ಗಳಿಸಿದ್ರೆ, ಮಂದೀಪ್ 8 ಪಂದ್ಯಗಳಲ್ಲಿ 69.60ರ ಸರಾಸರಿಯಲ್ಲಿ 696 ರನ್ ಗಳಿಸಿದ್ದಾರೆ. ಮತ್ತು ಶೆಲ್ಡನ್ ಜಾಕ್ಸನ್ 10 ಪಂದ್ಯಗಳಲ್ಲಿ 809 ರನ್ ಗಳಿಸಿದ್ರು. ಇತ್ತ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಆದರೂ ಅವರ ಆಯ್ಕೆಗೆ ಒಲವು ತೋರಲಿಲ್ಲವೇಕೆ ಆಯ್ಕೆ ಸಮಿತಿ..?

ಭಾರತ ‘ಎ’ ತಂಡದಲ್ಲಿ 2ನೇ ವಿಕೆಟ್​ ಕೀಪರ್​ನನ್ನ ಏಕೆ ಮಾಡಲಿಲ್ಲ..?
ಭಾರತ ‘ಎ’ ತಂಡಕ್ಕೆ ಏಕೈಕ ವಿಕೆಟ್​ ಕೀಪರ್​ನನ್ನ ಆಯ್ಕೆ ಮಾಡಲಾಗಿದೆ. 2ನೇ ವಿಕೆಟ್​ ಕೀಪರ್​ ಆಯ್ಕೆ ಅಗತ್ಯವಿದ್ದರೂ, ಪರಿಗಣಿಸಿಲ್ಲ. ಇದು ಸಮಿತಿ ತೆಗೆದುಕೊಂಡ ದೊಡ್ಡ ತಪ್ಪು. ಒಂದು ತಿಂಗಳ ಪ್ರವಾಸದಲ್ಲಿ ರೈಲ್ವೇಸ್‌ನ ವಿಕೆಟ್‌ಕೀಪರ್ ಉಪೇಂದ್ರ ಯಾದವ್, ತಂಡದಲ್ಲಿ ಸ್ಥಾನದಲ್ಲಿ ಪಡೆದಿದ್ದಾರೆ. ಒಂದು ವೇಳೆ ಉಪೇಂದ್ರ ಇಂಜುರಿಗೆ ಒಳಗಾದ್ರೆ, ಯಾರು ರೀಪ್ಲೇಸ್ ಮಾಡ್ತಾರೆ ಅನ್ನೋದು ಕೂಡ ಕುತೂಹಲ. ಹಾಗಾದ್ರೆ

ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್​​ ಫೈನಲ್; ಯಾವ ತಂಡಕ್ಕೆ ಗೆಲುವಿನ ಹೆಚ್ಚು ಚಾನ್ಸ್​​ ಇದೆ ಗೊತ್ತಾ..?

ಬ್ಯಾಕಪ್​ ವಿಕೆಟ್​​ ಕೀಪರ್​ ಆಯ್ಕೆಗೆ ದೇಶದಲ್ಲಿ​​ ಕೀಪರ್​​ಗಳೇ ಇಲ್ಲವೇ..?
ಶ್ರೇಯಸ್​ ಅಯ್ಯರ್​ ಆಯ್ಕೆಯ ಹಿಂದಿರುವ ಬಲವಾದ ಕಾರಣವೇನು?

ಟೆಸ್ಟ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಆಯ್ಕೆಗೆ ಕಾರಣ, ಪೂಜಾರ-ರಹಾನೆಗೆ ಬ್ಯಾಕಪ್​​ ಪ್ಲೇಯರ್​​ ಎಂದು ಹೇಳಲಾಗ್ತಿದೆ. ಆದರಿದು ಪರೋಕ್ಷವಾಗಿ ರಹಾನೆ-ಪೂಜಾರಗೆ ಬಿಸಿಸಿಐ ಸಂದೇಶ ರವಾನಿಸಿದೆ. ಇಬ್ಬರಲ್ಲಿ ಒಬ್ಬರನ್ನು ಕೈಬಿಡುವ ಯೋಜನೆ ಕೂಡ, ಇದರ ಹಿಂದಿದೆ ಎನ್ನಲಾಗ್ತಿದೆ. ಆದರೆ ನೀಡುವ ಪ್ರದರ್ಶನದ ಮೇಲೆ ರಹಾನೆ-ಪೂಜಾರ ಭವಿಷ್ಯ ನಿಂತಿದೆ. ಹಾಗಾದರೆ ಇಷ್ಟು ದಿನಗಳ ತಂಡಕ್ಕೆ ಗೋಡೆಯಂತಿದ್ದ ಈ ಇಬ್ಬರ ಕೊಡುಗೆ ಲೆಕ್ಕಕ್ಕಿಲ್ಲವೇ..?

ಇದನ್ನೂ ಓದಿ: ಸೇನಾಧಿಕಾರಿ, ಪತ್ನಿ, ಮಗು ಸೇರಿ 4 ಯೋಧರು ಹುತಾತ್ಮ; ರಕ್ಕಸ ದಾಳಿಯ ಹೊಣೆ ಹೊತ್ತ PLA, MNPF

ಇದನ್ನೂ ಓದಿ: ದೆಹಲಿಯಲ್ಲಿ 1 ದಿನ ಉಸಿರಾಡೋದು 20 ಸಿಗರೇಟ್ ಸೇವನೆಗೆ ಸಮ -ಲಾಕ್​ಡೌನ್​​ ಬಗ್ಗೆ ಕೇಜ್ರಿವಾಲ್ ಏನಂದ್ರು..?

ಇದನ್ನೂ ಓದಿ: ಆಯ್ಕೆ ಸಮಿತಿ ವಿರುದ್ಧ ಶಾಸ್ತ್ರಿ ಹೊಸ ಬಾಂಬ್; ಗಂಗೂಲಿ ಆಡಳಿತದ ಅವಧಿಯಲ್ಲೇ ಹೀಗ್ಯಾಕೆ ಆಯ್ತು..?

ಇದನ್ನೂ ಓದಿ: 26 ನಕ್ಸಲರಲ್ಲಿ ಭೀಮಾ ಕೋರೆಗಾಂವ್ ಆರೋಪಿಯೂ ಎನ್​​ಕೌಂಟರ್; ಮಿಲಿಂದ್ ಕೊಂದವ್ರಿಗೆ ಸಿಕ್ತು ₹25 ಲಕ್ಷ

News First Live Kannada


Leave a Reply

Your email address will not be published. Required fields are marked *