ಕಳೆದ ವಾರವಷ್ಟೇ ತುರ್ತಾಗಿ ಸುದ್ದಿ ವಾಹಿನಿಗಳ ರೇಟಿಂಗ್ನ ಬಿಡುಗಡೆ ಮಾಡಬೇಕು ಅಂತ BARCಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದ್ರೆ ಇದುವರೆಗೂ ರೇಟಿಂಗ್ಗಳು ಬಹಿರಂಗಗೊಂಡಿಲ್ಲ. ಈ ಹಿನ್ನೆಲೆ NBF, ಸುದ್ದಿ ಪ್ರಸಾರಕರ ಫೆಡರೇಶನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು, ಸರ್ಕಾರದ ಆದೇಶ ಅನುಷ್ಠಾನಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ತಕ್ಷಣಕ್ಕೆ ಕ್ರಮ ಜರುಗಿಸುವಂತೆ ಮನವಿ ಮಾಡಿದೆ.
NBF ಸಚಿವರಿಗೆ ಪತ್ರದಲ್ಲಿ ತಿಳಿಸಿರೋದೇನು?
ಸನ್ಮಾನ್ಯ ಅನುರಾಗ್ ಠಾಕೂರ್ ಅವರೇ,
ಈ ತಕ್ಷಣದಿಂದ ಸುದ್ದಿವಾಹಿನಿಗಳ ರೇಟಿಂಗ್ನ್ನು BARC ಬಿಡುಗಡೆಗೊಳಿಸಬೇಕು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಡಿರುವ ಆದೇಶವನ್ನು ನಾವು NBF ಸದಸ್ಯರಾಗಿ ಮುಕ್ತ ಕಂಠದಿಂದ ಶ್ಲಾಘಿಸುತ್ತೇವೆ. ಆದರೆ ಒಂದಂತೂ ಸ್ಪಷ್ಟ, ಸಚಿವಾಲಯದ ಆದೇಶವಿದ್ದರೂ ಕೂಡ BARC ರೇಟಿಂಗ್ನ ಸದ್ಯಕ್ಕೆ ಬಿಡುಗಡೆಗೊಳಿಸುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಕೆಲವೊಂದಿಷ್ಟು ವಿಚಾರಗಳನ್ನ ತುರ್ತಾಗಿ ನಿಮ್ಮ ಗಮನಕ್ಕೆ ನಾವು ತರುತ್ತಿದ್ದೇವೆ.
- BARC ತಾನೇ ಖುದ್ದಾಗಿ ರೇಟಿಂಗ್ನ ಬಿಡುಗಡೆಗೊಳಿಸಲು ಸಿದ್ಧವಿದೆ.
- ಕಳೆದ ಅಕ್ಟೋಬರ್ 16ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದೊಂದಿಗೆ ನಡೆದ ಸಭೆಯಲ್ಲೇ ರೇಟಿಂಗ್ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ BARC ತಿಳಿಸಿದೆ.
- ಕಳೆದ ಜೂನ್ 2021ರಲ್ಲಿ BARCನ ತಾಂತ್ರಿಕ ಸಮಿತಿ ತಿಂಗಳಾನುಸಾರವಾಗಿ ಸರಾಸರಿಯ ಮೇಲೆ ರೇಟಿಂಗ್ ರಿಲೀಸ್ ಮಾಡುವಂತಹ ವ್ಯವಸ್ಥೆಯನ್ನು ಪೂರ್ಣಗೊಳಿಸಿದೆ.
- ಕೇವಲ ಒಂದೇ ಒಂದು ಬಾಡಿ ಸದ್ಯ ರೇಟಿಂಗ್ ರಿಲೀಸ್ಗೆ ವಿರುದ್ಧವಾಗಿ ನಿಂತಿದೆ. ಅದು ಹಾಗೆ ಮಾಡುತ್ತಿರೋದಕ್ಕೆ ಕಾರ್ಪೊರೇಟ್ ಕಾರಣಗಳೂ ಇವೆ, ಅದು ಇಂಡಸ್ಟ್ರಿಯ ಹಿತಾಸಕ್ತಿಗೆ ವಿರುದ್ಧವಾಗಿದೆ.
- ಎಲ್ಲಾ FTA (ಫ್ರೀ ಟು ಏರ್) ಸುದ್ದಿ ವಾಹಿನಿಗಳು ನೆಲಕಚ್ಚುವ ಅಂಚಿನಲ್ಲಿವೆ. ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳ ಜೀವನೋಪಾಯಕ್ಕೆ ಇದು ಪರಿಣಾಮ ಬೀರೋದ್ರಿಂದ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು.
- ದೊಡ್ಡ ಸುದ್ದಿ ವಾಹಿನಿಗಳ ಬಳಿ ಸಂಪತ್ತಿನ ಕ್ರೋಢೀಕರಣ ಇದೆ. ಅವರು ಒಂದು ಬಾಡಿಯ ಮೂಲಕ ಕಾರ್ಪೊರೇಟ್ ಒತ್ತಡವನ್ನು ಹಾಕಿ, ಚಾಲನೆಯಲ್ಲಿರೋಕೆ ಮತ್ತು ಸುದ್ದಿ ಪ್ರಸಾರ ಮಾಡೋಕೆ ಅಷ್ಟೇ ಹಕ್ಕು ಹೊಂದಿರೋ ಬಹುತೇಕ ಸುದ್ದಿ ವಾಹಿನಿಗಳನ್ನ ಹಿಸುಕಿ ಹಾಕೋಕೆ ಪ್ರಯತ್ನಿಸುತ್ತಿದ್ದಾರೆ.
- ಎಲ್ಲಾ FTA ಚಾನಲ್ಗಳಿಗೂ ಜಾಹೀರಾತು ಮಾತ್ರ ಆದಾಯದ ಮೂಲ. ಜಾಹೀರಾತಿನಿಂದ ಸಂಪಾದನೆ ಮಾಡೋಕೆ ಅವರಿಗೆ ರೇಟಿಂಗ್ಸ್ ಅವಶ್ಯಕತೆಯಿದೆ. ಹೀಗಾಗಿ ಸರ್ಕಾರ FTA ಸುದ್ದಿ ವಾಹಿನಿಗಳ ಬೆಂಬಲಕ್ಕೆ ನಿಲ್ಲಬೇಕು, ಯಾಕಂದ್ರೆ ಈ ಸಂಸ್ಥೆಗಳು ದೇಶಕ್ಕೆ ಸೇವೆ ಸಲ್ಲಿಸುತ್ತಿವೆ.
- ಇನ್ನೂ ಕೂಡ ರೇಟಿಂಗ್ನ ತಡೆ ಹಿಡಿಯೋದ್ರಿಂದ ಸುದ್ದಿ ಪ್ರಸಾರದಲ್ಲಿ ದೊಡ್ಡ ದೊಡ್ಡ ಸುದ್ದಿ ವಾಹಿನಿಗಳ ಏಕಸ್ವಾಮ್ಯ ಮುಂದುವರಿಯೋದಕ್ಕೆ ದಾರಿ ಮಾಡುಕೊಡುತ್ತದೆ. ಜೊತೆಗೆ ಸಾರ್ವಜನಿಕ ಪ್ರಸಾರ ವ್ಯವಸ್ಥೆಯಲ್ಲಿ ಸರಿ ಪಡಿಸಲಾಗದ ಡ್ಯಾಮೇಜ್ ಮಾಡಿಬಿಡುತ್ತದೆ.
- ಹೀಗಾಗಿ ಇದುವರೆಗೂ ಕಾರ್ಯರೂಪಕ್ಕೆ ಬರದೇ ಹಾಗೆ ಉಳಿದಿರುವ ಸರ್ಕಾರದ ಆದೇಶವನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ BARCಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ದೇಶನ ನೀಡಬೇಕು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ.
ಕೃತಜ್ಞತೆಗಳೊಂದಿಗೆ
ಎನ್ಬಿಎಫ್ (ಸುದ್ದಿ ಪ್ರಸಾರಕರ ಫೆಡರೇಶನ್)
ಇದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ NBF ಬರೆದಿರುವ ಪತ್ರ. ಸಚಿವರು ಈ ಮನವಿಗೆ ಹೇಗೆ ಸ್ಪಂದಿಸ್ತಾರೆ ಕಾದು ನೋಡ್ಬೇಕು.