ಅಪ್ಪು ನಮ್ಮೊಂದಿಗಿಲ್ಲ ಅಂತ ಯಾರು ಇವತ್ತಿಗೂ ಅಂದುಕೊಂಡಿಲ್ಲ.. ಅಜಾತ ಶತ್ರು ಅಪ್ಪು ಅವರನ್ನ ಅಭಿಮಾನಿಗಳು ತಮ್ಮ ಮನೆ ಮನದಲ್ಲಿ ಇಟ್ಟು ಪೂಜಿಸುತ್ತಿದ್ದಾರೆ ಅಭಿಮಾನದಿಂದ ಆರಾಧಿಸುತ್ತಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲಿ ಮನುಷ್ಯ ಕುಲದ ಸರ್ವಶ್ರೇಷ್ಠ ತಾಯಿ ಪಟ್ಟಕ್ಕೆ ನಟಿ ಅಮೂಲ್ಯ ಏರಲಿದ್ದಾರೆ.. ಈ ಸಂದರ್ಭದಲ್ಲಿ ರಾಜರತ್ನನ ಆರ್ಶಿವಾದವನ್ನ ಅಮ್ಮು ಪಡೆದಿದ್ದಾರೆ.. ಅದು ಹೇಗೆ ಅನ್ನೋದೆ ಒಂದು ಸ್ವಾರಸ್ಯ ಅಭಿಮಾನದ ಕಥೆ ಇದು..
‘ರಾಜರತ್ನ’ ಅಪ್ಪು ಆಶೀರ್ವಾದ ಪಡೆದ ಅಮ್ಮು
ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಅಭಿಮಾನದ ಅರಮನೆ.. ನಾವು ಕಲಾವಿದರೆಲ್ಲ ಒಂದೇ ಕುಟುಂಬದವರು ಅಂತ ಸದಾ ಹೇಳುತ್ತಾ ಮಾತಿನಂತೆ ನಡೆದುಕೊಂಡು ಬಾಳುತ್ತಿದ್ದವರು ಡಾ.ರಾಜ್ ಕುಮಾರ್.. ಅಣ್ಣಾವ್ರಂತೆ ಅವರ ಮಕ್ಕಳು ಕೂಡ ಕಲಾವಿದರನ್ನ ಪ್ರೀತಿಯಿಂದ ತಮ್ಮದೆ ಕುಟುಂಬದವರಂತೆ ಕಾಣುತ್ತಿದ್ದಾರೆ. ಆ ಪ್ರೀತಿ ವಿಶ್ವಾಸದ ಅನುಸಾರ ತನ್ನ ಮಡಿಲಿನಲ್ಲಿ ಮಗುವನ್ನ ಆಡಿಸೋ ಮುನ್ನ ದೊಡ್ಮನೆಯ ಆಶೀರ್ವಾದ ಪಡೆದು ಬಂದಿದ್ದಾರೆ ಅಮೂಲ್ಯ..
ನಟಿ ಅಮೂಲ್ಯಗೆ ಮೊದಲಿನಿಂದಲೂ ಪುನೀತ್ ರಾಜ್ ಕುಮಾರ್ ಅಂದ್ರೆ ಪ್ರೀತಿ ಮತ್ತು ಅಭಿಮಾನ. ಅಪ್ಪು ಇಲ್ಲ ಎಂಬ ನೋವಿದ್ದರೂ ರಾಜರತ್ನನ ಆಶೀರ್ವಾದಕ್ಕಾಗಿ ದೊಡ್ಮನೆಗೆ ಹೋಗಿ ಬಂದಿದ್ದಾರೆ. ಅಪ್ಪು ಅಂದ್ರೆ ಎನರ್ಜಿ, ಅಪ್ಪು ಅಂದ್ರೆ ಜೋಶ್ ಎನ್ನುವುದು ಬರಿ ಮಾತಲ್ಲ. ಪುನೀತ್ ಜೊತೆಯಲ್ಲಿದ್ದವರಿಗೆಲ್ಲಾ ಗೊತ್ತು ಆ ಪವರ್ ಎಂಥದ್ದು ಅಂತ. ಈಗ ಪವರ್ಸ್ಟಾರ್ ಮನೆಗೆ ಹೋಗಿದ್ದ ಅಮೂಲ್ಯ ಸಹ ವಾಪಸ್ ಬರುವಾಗ ಪವರ್ಫುಲ್ ವೈಬ್ಸ್ ತಗೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಅಮ್ಮುಗೆ ಆಲ್ ದಿ ಬೆಸ್ಟ್ ಹೇಳಿದ ಸ್ಟಾರ್ಸ್
ಈ ಹಿಂದೆ ಶಾಸ್ತ್ರೋಕ್ತವಾಗಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮ ನೆರವೇರಿತ್ತು. ಈಗ ಮಾರ್ಡನ್ ಟ್ರೆಂಡ್ನಂತೆ ಬೇಬಿ ಶೆವರ್ ಇವೆಂಟ್ ಆಯೋಜಿಸಿ ಅಮೂಲ್ಯಗೆ ಸಂಭ್ರಮ ಹೆಚ್ಚಿಸಿದ್ದಾರೆ ಅವರ ಬೆಸ್ಟ್ ಫ್ರೆಂಡ್ಸ್. ಲವ್ಲಿ ಸ್ಟಾರ್ ಪ್ರೇಮ್ ದಂಪತಿ, ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಮತ್ತು ಕೀರ್ತಿ ದಂಪತಿ, ರಾಧಿಕಾ ಪಂಡಿತ್, ಸೋನು ಗೌಡ, ಸುಧಾರಾಣಿ ಮತ್ತು ಮಗಳು, ಹರಿಪ್ರಿಯಾ, ಕಾರುಣ್ಯ ರಾಮ್, ಪ್ರಿಯಾಂಕಾ ಉಪೇಂದ್ರ, ಶಿಲ್ಪಾ ಗಣೇಶ್ ಎಲ್ಲರೂ ಈ ಹ್ಯಾಪಿ ಮೂಮೆಂಟ್ ಶೇರ್ ಮಾಡಿದ್ದಾರೆ.
ಅಂದ್ಹಾಗೆ, ಅಮೂಲ್ಯ ಅವರಿಗೀಗ 8ನೇ ತಿಂಗಳು. ಶೀಘ್ರದಲ್ಲೇ ಅಮೂಲ್ಯ ಮಡಿಲಿಗೆ ಬೇಬಿ ಅಮೂಲ್ಯ ಅಥವಾ ಬೇಬಿ ಜಗದೀಶ್ ಬರಲಿದೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿಗೆ ಚೊಚ್ಚಲ ಹೆರಿಗೆಯೂ ಸುಸುತ್ರವಾಗಿ ಆಗಲಿ ಎಂದು ವಿಶ್ ಮಾಡೋಣ.