ಬೆಂಗಳೂರು: ಕೋವಿಡ್‍ನಿಂದಾಗಿ ಸ್ಥಗಿತಗೊಂಡಿದ್ದ ಬಿಗ್‍ಬಾಸ್ ರಿಯಾಲಿಟಿ ಶೋ ಇದೀಗ ಮತ್ತೆ ಆರಂಭವಾಗಿದೆ. ಕಾರ್ಯಕ್ರಮದ ಮೊದಲ ಹಂತದಲ್ಲಿಯೇ ಕಿಚ್ಚ ಸುದೀಪ್ ದಿವ್ಯಾ ಉರುಡುಗಗೆ ಬಿಗ್‍ಬಾಸ್ ಮನೆಯಲ್ಲಿ ಟೂ ವಿಲರ್ ಮಾತ್ರವಿಲ್ಲ ಎಂದು ಟಾಂಗ್ ನೀಡಿದ್ದಾರೆ.

ವೇದಿಕೆ ಮೇಲೆ ದಿವ್ಯಾ ಉರುಡುಗ ನಂತರ ದಿವ್ಯಾ ಸುರೇಶ್‍ರನ್ನು ಬರಮಾಡಿಕೊಂಡ ಸುದೀಪ್, ಹೊರಗಡೆ ಹೋಗಿ ಪ್ರಪಂಚ ನೋಡಿಕೊಂಡು ಬಂದು ಸೀಸನ್ ಹೇಗೆ ನಡೆಯಿತು. ಯಾರು ಎಷ್ಟು ಪಾಪ್ಯುಲರ್, ನೀವೆಲ್ಲಿ ತಪ್ಪಿದ್ರಿ, ಬೇರೆಯವರು ಏನು ಮಾತಡಿದರು ಎಲ್ಲ ಕೂಡ ಗೊತ್ತಾಗಿರುತ್ತದೆ. ಈ ಬಾರಿ ಒಳಗಡೆ ಹೋದ ಮೇಲೆ ಯಾವ ತಪ್ಪನ್ನು ಸರಿ ಮಾಡಿಕೊಳ್ಳಬೇಕು ಅಂತೀರಿ ಎಂದು ಪ್ರಶ್ನಿಸುತ್ತಾರೆ.

ಅದಕ್ಕೆ ದಿವ್ಯಾ ಸುರೇಶ್, ಮನೆಯೊಳಗೆ ನನ್ನ ತರ್ಲೆಗಳಾಗಿರಬಹುದು, ಮಾತಕತೆಯಾಗಿರಬಹುದು, ಒಂದೇ ವ್ಯಕ್ತಿಗೆ ಇಷ್ಟು ದಿನ ಸೀಮಿತವಾಗಿತ್ತು. ಅಷ್ಟೇಲ್ಲಾ ಏಕಾಂಗಿಯಾಗಿ ಆಟದಲ್ಲಿ ಎಫರ್ಟ್ ಹಾಕಿದರೂ ಕೂಡ ಎಲ್ಲೋ ಒಂದು ಕಡೆ ಆ ಒಂದು ಪಾಯಿಂಟ್ ನಿಂದ ಕೆಳಗಡೆ ಹೋಗಿ ಬಿಟ್ನಾ ಎಂಬುವುದು ನನ್ನ ತಲೆಯಲ್ಲಿದೆ. ಆದರೀಗ ಆ ತಪ್ಪನ್ನು ಸರಿ ಮಾಡಿಕೊಂಡು ಎಲ್ಲರ ಜೊತೆ ಬೆರೆತು ಮೊದಲೆರಡು ವಾರದಲ್ಲಿ ಹೇಗಿದ್ದೆ, ಹಾಗೇ ಇರಬೇಕೆಂದು ಇಷ್ಟ ಪಡುತ್ತೇನೆ ಎಂದು ಹೇಳುತ್ತಾರೆ.

ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಉರುಡುಗೆ ಅರ್ಥವಾಯಿತಾ ಅವರು ಏನು ಹೇಳಿದ್ರು ಎಂದು ಕೇಳುತ್ತಾರೆ. ಆಗ ದಿವ್ಯಾ ಉರುಡುಗ ಹೌದು ಸರ್ ಎನ್ನುತ್ತಾರೆ. ಇದಕ್ಕೆ ಸುದೀಪ್ ಟೂ ವಿಲರ್ ಮಾತ್ರವಲ್ಲ, ಪ್ರಪಂಚದಲ್ಲಿ ಥ್ರೀ ವಿಲರ್ಸ್ ಇದೆ, ಫೋರ್ ವಿಲರ್ಸ್ ಇದೆ, ಬರೀ ನಡೆದುಕೊಂಡು ಹೋಗುವವರು ಇದ್ದಾರೆ, ಮರೆಯಬೇಡಿ ಅಂತ ಅವರ ಮೂಲಕ ನಿಮಗೂ ಗೊತ್ತಾಯ್ತು ಅಲ್ವಾ ಎಂದು ಹೇಳಿ ಕಾಲೆಳೆದಿದ್ದಾರೆ. ಇದನ್ನೂ ಓದಿ:  ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

The post ದೊಡ್ಮನೆಯಲ್ಲಿ ಟೂ ವಿಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್ appeared first on Public TV.

Source: publictv.in

Source link