ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಲವಾರು ಪ್ರತಿಭೆಗಳಲ್ಲಿ ಶಮಂತ್ ಕೂಡ ಒಬ್ಬರು. ಫಸ್ಟ್ ಇನ್ನಿಂಗ್ಸ್‍ನಲ್ಲಿ ಅಷ್ಟೇನೂ ಸದ್ದು ಮಾಡದೇ ಇದ್ದರೂ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಅದರ ಎರಡರಷ್ಟು ಆ್ಯಕ್ಟಿವ್ ಆಗಿರುವುದರ ಜೊತೆಗೆ ಮನೆಯಲ್ಲಿ ತಮ್ಮ ಹಾಡಿನ ಮೂಲಕ ಮೈನ್ ಆಫ್ ದಿ ಆಟ್ರ್ಯಾಕ್ಷನ್ ಆಗುತ್ತಿದ್ದಾರೆ.

ಕಳೆದ ವಾರ ಕಿಚ್ಚ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಮಧ್ಯೆ ಸಿಲುಕಿಕೊಂಡಿರುವ ಶಮಂತ್‍ರವರ ಪರಿಸ್ಥಿತಿ ಯಾವ ರೀತಿ ಇದೆ ಎಂದು ಹಾಡನ್ನು ಬರೆದು ಮುಂದಿನ ವಾರ ಹೇಳಬೇಕೆಂದು ಸೂಚಿಸಿದ್ದರು. ಅದರಂತೆ ಶಮಂತ್ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತಾವು ಬರೆದಿರುವ ಹಾಡನ್ನು ಕಿಚ್ಚನ ಎದುರಿಗೆ ಹಾಡಿ ಮಿಂಚಿದ್ದಾರೆ.

ಅಯ್ಯಯ್ಯೋ ನೋಡು ದೇವ್ರೆ, ಸಿಕ್ಕಾ ಪಟ್ಟೆ ಕಷ್ಟ ಮಾರ್ರೆ, ಇತ್ತ ಮಳ್ಳ, ಅತ್ತ ಸುಳ್ಳ, ಮಧ್ಯ ನಾನು ಕಳ್ಳ ಅಲ್ಲ. ಅಲ್ಲಿ ಮಳ್ಳಿ, ಇಲ್ಲಿ ಕುಳ್ಳಿ, ನಾನು ಈಗ ಎಲ್ಲಿ ಹೋಗ್ಲಿ, ನನ್ನ ಪಾಡಿಗೆ ನಾನು ಕೂತಿದ್ರು ನನ್ನ ಬುಡಕ್ಕೆ ಬರ್ತಾರೆ. ಇನ್ನೇನು ಕಿರಿಕ್ ಸ್ಟಾರ್ಟ್ ನಾನು ಓಡಬೇಕಿದೆ, ಅಲ್ಲಿದ್ದ ತಪ್ಪಿಗೆ ಸಾಕ್ಷಿ ಹೇಳಬೇಕಾಗಿದೆ. ಅಯ್ಯಪ್ಪ ಸ್ಯಾಂಡ್‍ವಿಚ್ ಬಾಳು ನಂದು ಆಗಿ ಹೋಗಿದೆ, ಸಾಕಾಗೋಗಿದೆ.. ಸಾಕಾಗೋಗಿದೆ.. ಎಂದು ಹಾಡು ಹೇಳಿದ್ದಾರೆ.

ಹಾಡಿನ ನಂತರ ಲಿರಿಕ್‍ನಲ್ಲಿ ಮಳ್ಳ-ಸುಳ್ಳ ಎಂದು ಬಂತು ಅದು ಯಾರು ಎಂದು ಸುದೀಪ್ ಕೇಳಿದಾಗ, ಹಾಗೆ ಸುಮ್ಮನೆ ಬರೆದೆ ಎಂದು ಶಮಂತ್ ಹೇಳುತ್ತಾರೆ. ಆಗ ಸುದೀಪ್ ಹೋಗ್ಲಿ ಬಿಡಿ ಯಾಕೆ, ಆಮೇಲೆ ನಾನು ನಿಮ್ಮನ್ನು ಸ್ಯಾಂಡ್‍ವಿಚ್ ಮಾಡುವುದು ಎಂದು ರೇಗಿಸುತ್ತಾರೆ.

ಒಟ್ಟಾರೆ ಶಮಂತ್ ಪ್ರತಿಭೆ ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

The post ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್ appeared first on Public TV.

Source: publictv.in

Source link