ಸ್ಯಾಂಡಲ್ವುಡ್ನ ಸರಳತೆಯ ಸಾಮ್ರಾಟ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನೆಲ್ಲ ಅಗಲಿ ಇಂದಿಗೆ 11ನೇ ದಿನ. ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ. ಇಂದು ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಡಾ.ರಾಜ್ಕುಮಾರ್ ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋದಲ್ಲಿ (ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋಗೆ ನಟ ರಂಗಾಯಣ ರಘು ಆಗಮಿಸಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದಾರೆ. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಣ್ಣಾವ್ರ ಕುಟುಂಬದವರು ದೇವರ ಬಳಿ ಕಷ್ಟವನ್ನ ಅಭಿಮಾನಿ ದೇವರಿಗೆ ಕೊಡೋ ಬದಲು ನಮಗೆ ಕೊಡು ಎಂದು ಬೇಡಿಕೊಂಡಿದ್ದರೆನೋ. ಹೀಗಾಗಿ ಅವರಿಗೆಯೇ ದೇವರ ಒಂದಾದ ಮೇಲೊಂದು ಕಷ್ಟ ಕೊಡುತ್ತಿದ್ದಾನೆ.
ನಾನು ದೇವರಲ್ಲಿ ಬೇಡಿಕೊಳ್ಳೊದು ಇಷ್ಟೇ ಡಾ. ರಾಜ್ ಕುಟುಂಬಕ್ಕೆ ಅಪ್ಪು ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಬೇಕು. ಈ ನಿಟ್ಟಿನಲ್ಲಿ ಕನ್ನಡದ ಅಭಿಮಾನಿಗಳಾದ ನಾವೆಲ್ಲರು ದೇವರಿಗೆ ಪ್ರಾರ್ಥಿಸಬೇಕೆಂದು ರಂಗಾಯಣ ರಘು ಹೇಳಿದರು.