ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತೆ ಇರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆ ಸಣ್ಣ ಜಗಳ ನಡೆದಿದೆ. ಹೀಗಾಗಿ ಅರವಿಂದ್ ದಿವ್ಯಾ ಉರುಡುಗ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾರೆ.

ದೊಡ್ಮನೆಯ ಎಲ್ಲಾ ಕಡೆ ಕ್ಯಾಮೆರಾ ಮುಂದೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ದಿವ್ಯಾ ಹಾಗೂ ಅರವಿಂದ್ ಎಷ್ಟೇ ಕ್ಲೋಸ್ ಆಗಿದ್ದರೂ, ಟಾಸ್ಕ್ ವಿಚಾರಕ್ಕೆ ಬಂದರೆ ಇಬ್ಬರು ತಮ್ಮದೇ ಆದ ಭಿನ್ನ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಹಾಗೂ ಎಲ್ಲಾ ಟಾಸ್ಕ್‌ಗಳಲ್ಲಿ ಕೂಡ ಏಕಾಂಗಿಯಾಗಿ ಆಟ ಆಡಿ ಗೆಲ್ಲಲು ಪ್ರಯತ್ನಿಸುತ್ತಾರೆ.

ಸದ್ಯ ಬಿಗ್‍ಬಾಸ್ ನೀಡಿದ್ದ ಮುತ್ತು ಹುಡುಕುವ ಟಾಸ್ಕ್ ವೇಳೆ ವಿಸಿಲ್ ಹಾಕುವುದಕ್ಕೂ ಮುನ್ನವೇ ಶುಭಾ ಪೂಂಜಾ, ದಿವ್ಯಾ ಉರುಡುಗ ಹಾಗೂ ವೈಷ್ಣವಿ ಗೌಡ ಗ್ಲೌಸ್‍ಗಾಗಿ ಕಾದು ನಿಂತಿರುತ್ತಾರೆ. ಈ ವೇಳೆ ಗಾರ್ಡನ್ ಏರಿಯಾದಲ್ಲಿಯೇ ಕುಳಿತಿದ್ದ ಅರವಿಂದ್, ಬೇರೆ ಕಡೆ ಯಾವುದು ಸರಿ, ಯಾವುದು ತಪ್ಪು ಎಂದು ಮಾತನಾಡುತ್ತೀರಾ, ಆದರೆ ಇಲ್ಲಿ ಮಾತ್ರ ಟಾಸ್ಕ್ ಮುನ್ನವೇ ಹೋಗಿ ನಿಂತುಕೊಂಡು ಗ್ಲೌಸ್‍ಗೆ ಕಾಯುತ್ತಿದ್ದೀರಾ. ಬೇರೆ ಕಡೆ ಇದು ಒಳ್ಳೆಯದು, ಇದು ತಪ್ಪು ಅಂತ ಹೇಳುವುದಕ್ಕೆ ಆಗುತ್ತದೆ. ಈಗ ಅಲ್ಲಿ ನಿಂತಿರುವುದು ಮಾತ್ರ ಸರಿನಾ ಎಂದು ಪ್ರಶ್ನಿಸುತ್ತಾರೆ.

ಈ ವೇಳೆ ಶುಭಾ ಬಿಟ್ಟು ಕೊಡೋಣಾ ಎಂದು ದಿವ್ಯಾ ಉರುಡುಗರನ್ನು ಕೇಳುತ್ತಾರೆ. ಆಗ ದಿವ್ಯಾ ಉರುಡುಗ ನಾನು ಬಿಟ್ಟು ಕೊಡುವುದಿಲ್ಲ. ನಾನು ಯಾಕೆ ಬಿಟ್ಟು ಕೊಡಬೇಕು, ಬೇಕಾದರೆ ಅವರು ಬಂದು ಆಡಲಿ ಎಂದು ಹೇಳುತ್ತಾರೆ. ಆಗ ಅರವಿಂದ್ ಏನು ಸ್ವಲ್ಪ ಜೋರಾಗಿ ಹೇಳು ಎಂದು ಕೇಳುತ್ತಾರೆ. ಅದಕ್ಕೆ ದಿವ್ಯಾ ಉರುಡುಗ ಬಿಟ್ಟು ಕೊಡು ಎಂದು ಹೇಳಿದರು. ಆದರೆ ನಾನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದೆ ಎನ್ನುತ್ತಾರೆ.

ಇದರಿಂದ ಬೇಸರಗೊಂಡ ಅರವಿಂದ್, ದಿವ್ಯಾ ಉರುಡುಗ ಜೊತೆ ಎಷ್ಟೋ ಹೊತ್ತಿನವರೆಗೂ ಮಾತನಾಡಿರಲಿಲ್ಲ. ಕೊನೆಗೆ ದಿವ್ಯಾ ಉರುಡುಗ ಅರವಿಂದ್ ಬಳಿ ಹೋಗಿ ಏನಾಯಿತು ಎಂದಾಗ ಏನೂ ಇಲ್ಲ ಎಂದು ಅರವಿಂದ್ ಹೇಳುತ್ತಾರೆ. ಮತ್ತೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ, ನಾನು ನನಗೆ ಟೈಮ್ ಕೊಟ್ಟುಕೊಂಡಿದ್ದೇನೆ. ಆರಾಮಾಗಿ ಯೋಚಿಸುತ್ತಾ ಕುಳಿತುಕೊಂಡಿದ್ದೇನೆ ಎನ್ನುತ್ತಾರೆ. ಹಾಗಾದರೆ ಇಷ್ಟ ಇಲ್ವಾ ಮಾತನಾಡಲು ಅಂತ ದಿವ್ಯಾ ಎಂದಾಗ ಅರವಿಂದ್ ಸದ್ಯಕ್ಕೆ ಇಷ್ಟ ಇಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡು ದಿವ್ಯಾ ಉರುಡುಗ ಏನು ಮಾತನಾಡದೇ ಎದ್ದು ಬೆಡ್ ರೂಮ್ ಕಡೆಗೆ ಹೋಗುತ್ತಾರೆ.

The post ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್ appeared first on Public TV.

Source: publictv.in

Source link