ಪ್ರತಿದಿನ ಮನೆಯ ಸ್ಪರ್ಧಿಗಳಿಗೆ ಹುರಿದುಂಬಿಸಲು ಬಿಗ್‍ಬಾಸ್ ಒಂದೊಂದು ಹಾಡುಗಳನ್ನು ಹಾಕುತ್ತಿದ್ದರು. ಸದ್ಯ ಬಿಗ್‍ಬಾಸ್ ಮನೆಯ ಕೊನೆಯ ದಿನದಂದು ಮನೆಮಂದಿಗೆ ಅರ್ಥಪೂರ್ಣವಾದ ಹಾಡನ್ನು ಹಾಕಿದ್ದಾರೆ.

ಕೊರೊನಾದಿಂದ ರಾಜ್ಯಾದ್ಯಂತ ಸರ್ಕಾರ ಲಾಕ್‍ಡೌನ್ ಘೋಷಿಸಿದ್ದು, ಇದೀಗ ಕಿರುತೆರೆಯ ಎಲ್ಲ ರಿಯಾಲಿಟಿ ಶೋ, ಧಾರಾವಾಹಿಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಕನ್ನಡಿಗರ ಅಚ್ಚುಮೆಚ್ಚಿನ ಕಾರ್ಯಕ್ರಮ ಬಿಗ್‍ಬಾಸ್ ಕೂಡ ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, 71ನೇ ದಿನ ಬಿಗ್‍ಬಾಸ್ ಮನೆ ಮಂದಿಗೆ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಹಾಡನ್ನು ಹಾಕಿದ್ದಾರೆ. ಅಲ್ಲದೆ ಕೊನೆಯಲ್ಲು ನಿಂತಾಗ ಬುಗುರಿಯ ಆಟ ಎಲ್ಲರೂ ಒಂದೇ ಓಟ ಕಾಲ ಕ್ಷಣಿಕ ಕಣೋ ಎಂದು ಹೇಳಿದ್ದಾರೆ.

ಪ್ರತಿದಿನ ಬೆಳಗ್ಗೆ ಸಾಂಗ್ ಪ್ಲೇ ಮಾಡಿದ ನಂತರ ಎಂದು ಕೂಡ ಮಾತನಾಡದ ಬಿಗ್‍ಬಾಸ್, ಕೊನೆಯ ದಿನ ಈ ಸಾಲುಗಳನ್ನು ಹೇಳಿದ್ದು, ಮನೆಮಂದಿಗೆ ಬಹಳ ಕೂತುಹಲ ಮೂಡಿಸಿತ್ತು. ಮಂಜು ಈ ಸಾಂಗ್‍ನನ್ನು ಮತ್ತೆ ಹಾಕುವಂತೆ ಕೇಳಿದರೆ, ಕೊನೆಯಲ್ಲಿ ಬಿಗ್‍ಬಾಸ್ ಮಾತನಾಡಿದ್ದಾರೆ ಎಂದು ಶಮಂತ್ ಚಕ್ರವರ್ತಿಗೆ ಹೇಳುತ್ತಾರೆ.

ಸಾಂಗ್ ಓಕೆ ಆದರೆ ಬಿಗ್‍ಬಾಸ್ ಏನಕ್ಕೆ ಹೇಳಿರಬಹುದು ಎಂದು ರಘು ತಲೆಕೆಡಿಸಿಕೊಳ್ಳುತ್ತಾರೆ. ಆಗ ಮನೆಯಿಂದ ಈ ಕಡೆಗೆ ಬಂದ ಶುಭಾ ಈ ಬಾರಿ ಟಿಟಿ ಫಿಕ್ಸ್ ಆಗಿದೆ ಎಂದರೆ, ಈ ವೇಳೆ ಮಂಜು ಶೇರ್ ಆಟೋ ಫಿಕ್ಸ್ ಆಗಿದೆ. ಕಾಲ ಕ್ಷಣಿಕ ಕಾನೋ ಅಂದು ಬಿಟ್ಟರಲ್ಲ. ಏನಪ್ಪಾ ಇದು ಎಂದು ಶುಭಾಗೆ ಕೇಳುತ್ತಾರೆ.

ಬಿಗ್‍ಬಾಸ್ ಮಾತನ್ನು ಕೇಳಿ ರಘು ತಮಗೆ ಗೊತ್ತಿಲ್ಲದೆಯೇ ಎಲ್ಲರನ್ನು ಒಟ್ಟಿಗೆ ಮನೆಯಿಂದ ಹೋಗಿ ಎಂದು ಹೇಳಿ ಬಿಡುತ್ತಾರಾ ಎನ್ನುತ್ತಾರೆ. ಒಟ್ಟಾರೆ ಕೊರೊನಾ ಮಾನವರಿಗೆ ಒಂದು ರೀತಿ ಜೀವನ ಪಾಠ ಕಲಿಸುತ್ತಿದ್ದು, ಬಿಗ್‍ಬಾಸ್ ಕೂಡ ಮನೆ ಮಂದಿಗೆ ಇಂದು ನಿಮ್ಮೆಲ್ಲರ ಪಯಣ ಬಿಗ್‍ಬಾಸ್ ಮನೆಯಲ್ಲಿ ಕೊನೆಯ ದಿನ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

The post ದೊಡ್ಮನೆ ಮಂದಿಗೆ ‘ಕಾಲ ಕ್ಷಣಿಕ ಕಣೋ’ ಅಂದ ಬಿಗ್‍ಬಾಸ್ appeared first on Public TV.

Source: publictv.in

Source link