ದೊಡ್ಮನೆ ಮಗಳ ಚಿತ್ರ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? ಒಂದೇ ಫ್ರೇಮ್​ನಲ್ಲಿ ಶಿವಣ್ಣ, ರಾಘಣ್ಣ, ಪುನೀತ್​ | Raghavendra Rajkumar Shivarajkumar Puneeth watched Dhanya Ramkumar starrer Ninna Sanihake Movie

ಧನ್ಯಾ ರಾಮ್​ಕುಮಾರ್​ ಮತ್ತು ಸೂರಜ್​ ಗೌಡ ಮುಖ್ಯಭೂಮಿಕೆ ನಿಭಾಯಿಸಿರುವ ‘ನಿನ್ನ ಸನಿಹಕೆ’ ಸಿನಿಮಾ ಇಂದು (ಅ.8) ಬಿಡುಗಡೆ ಆಗಿದೆ. ಅ.7ರ ರಾತ್ರಿ ಚಿತ್ರದ ಪ್ರೀಮಿಯರ್ ಶೋಗೆ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​, ಪುನೀತ್​ ರಾಜ್​ಕುಮಾರ್​, ರಾಮ್​ಕುಮಾರ್​ ಮುಂತಾದವರು ಹಾಜರಿ ಹಾಕಿದ್ದರು. ಡಾ. ರಾಜ್​ ಫ್ಯಾಮಿಲಿಯಿಂದ ಬಂದ ಮೊದಲ ಹೀರೋಯಿನ್​ ಎನಿಸಿಕೊಂಡಿರುವ ಧನ್ಯಾ ಅವರ ಮೊದಲ ಚಿತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರಕ್ಕೆ ಸೂರಜ್​ ಗೌಡ ನಿರ್ದೇಶನ ಮಾಡಿದ್ದಾರೆ.

‘ನಟನೆ ಎನ್ನುವುದು ನಮ್ಮ ಕುಟುಂಬದ ರಕ್ತದಲ್ಲೇ ಇದೆ. ಅದು ಎಲ್ಲೂ ಹೋಗುವುದಿಲ್ಲ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚೆನ್ನಾಗಿ ಧನ್ಯಾ ನಟನೆ ಮಾಡಿದ್ದಾಳೆ. ಧ್ವನಿ ಏರಿಳಿತ ಚೆನ್ನಾಗಿದೆ. ಸೂರಜ್​ ಗೌಡ ಕೆಲಸ ಅತ್ಯುತ್ತಮವಾಗಿದೆ. ಎಲ್ಲ ಪಾತ್ರಧಾರಿಗಳ ಅಭಿನಯ ಚೆನ್ನಾಗಿದೆ’ ಎಂದು ಶಿವರಾಜ್​ಕುಮಾರ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

TV9 Kannada

Leave a comment

Your email address will not be published. Required fields are marked *