ಬಿಗ್‍ಬಾಸ್ ಮನೆಯಲ್ಲಿ 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಪ್ರಶಾಂತ್ ಸಂಬರ್ಗಿ ಮನೆಯ ಸದಸ್ಯರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಜೊತೆ ಲಿವಿಂಗ್ ಏರಿಯಾದಲ್ಲಿ ಕುಳಿತು ಪ್ರಶಾಂತ್ ಮಾತನಾಡುತ್ತಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ.

ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು ಕಾನ್ಫಿಡೆಂಟ್ ಅಂತ ತೋರಿಸುವ ಭರದಲ್ಲಿ ನೀಚ ಸ್ವಭಾವ ಎಕ್ಸ್‍ಪೋಸ್ ಆಗುತ್ತಿದೆ. ಗೆಲ್ಲವುದೊಂದೇ ಗುರಿ, ಮಾರ್ಗ ಯಾವುದು ಬೇಕಾದರೂ ಆಗಬಹುದು ಎಂದು ಆಟ ಆಡುತ್ತಿದ್ದಾಳೆ ಅಂತ ಪ್ರಶಾಂತ್ ಹೇಳುತ್ತಾರೆ.

ನಂತರ ಡಿಯು ಎಂದಾಗ, ಪ್ರಶಾಂತ್ ಅರವಿಂದನ ಮಡಿಲಿನಲ್ಲಿ ಅವನ ಜೊತೆಗೆ ನಾನು ಸಾಗುವೆ ಎನ್ನುತ್ತಾರೆ. ಮಂಜು ಪಾವಗಡ ಹೆಸರು ಬಂದಾಗ, ದುಷ್ಟ, ಅಹಂಕಾರಿ, ಹಾಸ್ಯ ಬಿಟ್ಟು ಎಲ್ಲ ಮಾಡುತ್ತಿದ್ದಾನೆ. ಇನ್ನೂ ರಘು ಉಸರವಳ್ಳಿ. ಪ್ರಿಯಾಂಕ, ಸುಂದರವಾಗಿದ್ದಿನಿ ಎಂಬ ಜಂಬ, ನಾನು ಡಿಫರೆಂಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಲೋ ಬುದ್ಧಿ, ಲೋ ಹೈಕ್ಯೂ ಇರುವುದರಿಂದ ನಿರ್ಧಾರಗಳು ಕರೆಕ್ಟ್ ಅಂದುಕೊಂಡು ಫೆಲ್ ಆಗುತ್ತಿರುವ ಹುಡುಗಿ ಎನ್ನುತ್ತಾರೆ.

ಟ್ಯಾಲೆಂಟೆಂಡ್, ಕಂಪೆಷನೆಟ್, ಎಕ್ಸ್ ಪ್ರೆಸ್ ಮಾಡದೇ ಇರುವಂತಹ ಹುಡುಗ ಎಂದು ಶಮಂತ್‍ಗೆ ಹೇಳುತ್ತಾರೆ. ಚಕ್ರವರ್ತಿಯವರು ಅವರ ಹೆಸರನ್ನೇ ಸೂಚಿಸಿದಾಗ ಅತೀ ಬುದ್ಧಿವಂತಿಕೆ ಮಾತಿನ ಚಾತುರ್ಯದಿಂದ ಗೆಲ್ಲಬಹುದು ಎಂದು ತಿಳಿದು ಎಲ್ಲರನ್ನು ದುಷ್ಮನ್ ಮಾಡಿಕೊಳ್ಳುತ್ತಿರುವ ವ್ಯಕ್ತಿ ಎಂದು ಪ್ರಶಾಂತ್ ಅಭಿಪ್ರಾಯ ತಿಳಿಸುತ್ತಾರೆ.

ಹಾಗಾದರೆ ಪ್ರಶಾಂತ್ ಸಂಬರ್ಗಿ ಎಂದು ಚಕ್ರವರ್ತಿ ಕೇಳಿದಾಗ, ಶಕ್ತಿ, ಯುಕ್ತಿಗಿಂತ ಮನುಷ್ಯತ್ವ ಮೇಲೂ ಅಂತ ಆಡುತ್ತಿರುವ ಎಮೋಷನಲ್ ಫೂಲ್ ಎಂದು ತಮಗೆ ತಾವೇ ಪ್ರಶಾಂತ್ ಹೇಳಿದ್ದಾರೆ.

The post ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್! appeared first on Public TV.

Source: publictv.in

Source link

Leave a Reply