ಹೆಡ್ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಹೊಂದಾಣಿಕೆ ಸಮಸ್ಯೆಯಿಂದಲೇ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ಪಾಕಿಸ್ತಾನ ಮಾಜಿ ನಾಯಕ ಸಲ್ಮಾನ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಸಲ್ಮಾನ್ ಭಟ್, ಕೋಚ್ ಮತ್ತು ನಾಯಕನ ನಡುವೆ ಸಮನ್ವಯದ ಕೊರತೆ ಕಾಣುತ್ತಿದೆ. ಅದರಲ್ಲೂ ಇಬ್ಬರ ವ್ಯಕ್ತಿತ್ವ ಕೂಡ ಸಾಕಷ್ಟು ವಿಭಿನ್ನವಾಗಿದೆ. ಇದೇ ಕಾರಣಕ್ಕೇ ವಿರಾಟ್ ಕೊಹ್ಲಿ, ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ಹೇಳಿದ್ದಾರೆ.
ಕೊಹ್ಲಿ ಸದಾ ಆಕ್ರಮಣಕಾರಿ ಮನೋಭಾವ, ದ್ರಾವಿಡ್ ಕೂಲ್ ಆ್ಯಂಡ್ ಕಾಮ್ ಆಗಿರುತ್ತಾರೆ. ಆದರೆ ಈ ಹಿಂದಿನ ಕೋಚ್ ರವಿಶಾಸ್ತ್ರಿ – ಕೊಹ್ಲಿಯದ್ದು ಒಂದೇ ವ್ಯಕ್ತಿತ್ವವಾಗಿತ್ತು. ಇದರಿಂದ ಈ ಜೋಡಿ ಭಾರೀ ಯಶಸ್ಸು ಕಂಡಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾವನ್ನು ಕೊಹ್ಲಿ ಉತ್ತಮವಾಗಿ ಮುನ್ನಡೆಸಿದ್ದಲ್ಲದೆ, ಅತ್ಯದ್ಭುತ ಕೊಡುಗೆ ನೀಡಿದ್ದಾರೆ. ಇದೇ ಕಾರಣಕ್ಕೆ ಅವರು ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದರೆ ಕೊಹ್ಲಿ ನಾಯಕತ್ವ ಕಳೆದುಕೊಂಡಿದ್ದು ಆಟಗಾರರಿಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.