‘ದ್ರಾವಿಡ್​​ ಮಗ ನನಗೆ ಬೆದರಿಕೆ ಹಾಕಿದ್ದ’- ಗಂಗೂಲಿ ಹೀಗಂದಿದ್ಯಾಕೆ?


ಮಗನ ಕಾರಣದಿಂದಲೇ ರಾಹುಲ್‌ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆಗಿ ಮಾಡಲಾಯಿತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದರು. ಈ ಸಂಬಂಧ ಮಾತಾಡಿದ ಗಂಗೂಲಿ, ಕೋಚ್‌ ಆಯ್ಕೆಯಲ್ಲಿ ದ್ರಾವಿಡ್‌ ಅವರ ಮಗ ಪ್ರಭಾವ ಬೀರಿದ್ದಾನೆ ಎಂದರು.

‘ದ್ರಾವಿಡ್ ಅವರ ಮಗನಿಂದ ನನಗೆ ಕರೆ ಬಂದಿತ್ತು. ದ್ರಾವಿಡ್​​ ಮನೆಯಲ್ಲಿ ತುಂಬಾ ಸ್ಟ್ರಿಕ್ಟ್​ ಆಗಿದ್ದ. ಹಾಗಾಗಿ ನನಗೆ ಕರೆ ಮಾಡಿ ನನ್ನಪ್ಪನ್ನು ಕೋಚ್​ ಮಾಡಿಬಿಡಿ ಎಂದು ಬೆದರಿಕೆ ಹಾಕಿದ. ಹಾಗಾಗಿ ನಾನು ದ್ರಾವಿಡ್​​ಗೆ ಈಗ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಸಮಯ, ಕೋಚ್‌ ಹುದ್ದೆ ವಹಿಸಿಕೊ ಎಂದೆ ಎನ್ನುವ ಮೂಲಕ ತಮಾಷೆ ಮಾಡಿದರು.

‘ನಾವು ಒಟ್ಟಿಗೆ ಬೆಳೆದವರು, ಒಂದೇ ಸಮಯದಲ್ಲಿ ಕ್ರಿಕೆಟ್‌ ವೃತ್ತಿ ಪ್ರಾರಂಭಿಸಿದವರು. ಹೆಚ್ಚಿನ ಸಮಯವನ್ನು ಒಟ್ಟಿ ಕಳೆದಿದ್ದೇವೆ. ಹಾಗಾಗಿ ನಮ್ಮ ನಡುವೆ ಎಲ್ಲಾವೂ ಓಪನ್​​ ಎಂದರು ಗಂಗೂಲಿ.

ಈ ಹಿಂದೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ನವೆಂಬರ್ 17ರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಪ್ರಾರಂಭಕ್ಕೂ ಮೊದಲು ದ್ರಾವಿಡ್‌ ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ತಂಡವನ್ನು ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ಗೆ ತೆರೆ ಬೆನ್ನಲ್ಲೇ ಪಾಕ್​ಗೆ ಅನ್ಯಾಯ ಆಗಿದೆ ಎಂದು ಕ್ಯಾತೆ ತೆಗೆದ ರಾವಲ್ಪಿಂಡಿ ಎಕ್ಸ್​ಪ್ರೆಸ್​

News First Live Kannada


Leave a Reply

Your email address will not be published. Required fields are marked *