‘ದ್ರಾವಿಡ್​ ಜತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’- ರೋಹಿತ್ ಗುಣಗಾನ​​


ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್​ ಕೋಚ್ ಆಗಿ ನೇಮಕ ಮಾಡಿರುವುದನ್ನು ಉಪನಾಯಕ ರೋಹಿತ್ ಶರ್ಮಾ ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ನಾವು ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಬ್ಯುಸಿ ಆಗಿದ್ದೆವು. ಹೀಗಾಗಿ ದ್ರಾವಿಡ್ ಅವರು ಟೀಮ್​​ ಇಂಡಿಯಾದ ಹೆಡ್ ಕೋಚ್​​ ನೇಮಕವಾದ ವಿಚಾರ ಗಮನಕ್ಕೆ ಬಂದಿರಲಿಲ್ಲ ಎಂದರು.

ಟೀಮ್​​ ಇಂಡಿಯಾಗೆ ವಾಪಸ್ಸಾದ ದ್ರಾವಿಡ್​​ ಅವರಿಗೆ​​ ಅಭಿನಂದನೆಗಳು. ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ರಾಹುಲ್ ದ್ರಾವಿಡ್ ಅವರು ಭಾರತೀಯ ಶ್ರೇಷ್ಠ ಕ್ರಿಕೆಟ್​​​​ ಪ್ಲೇಯರ್​​. ಇವರ ಜತೆ ಕೆಲಸ ಮಾಡುವುದು ಅತ್ಯಂತ ಖುಷಿ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ದ್ರಾವಿಡ್, ಟೀಮ್​​ ಇಂಡಿಯಾದ ಹೆಡ್​​ ಕೋಚ್​ ಆಗಿ ನೇಮಕ ಮಾಡಲಾಗಿದೆ. ನವೆಂಬರ್ 17ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಇವರು ಹೆಡ್​​ ಕೋಚ್​​ ಸೆಕೆಂಡ್​​ ಇನ್ನಿಂಗ್ಸ್​​ ಶುರು ಮಾಡಲಿದ್ದಾರೆ.

ಇದನ್ನೂ ಓದಿ: ಫಿಟ್​​ ಇಲ್ಲದ ಪಾಂಡ್ಯಾಗೆ ಚಾನ್ಸ್​ ಸಿಗ್ತಿರೋದ್ಯಾಕೆ?​ ಗುಟ್ಟು ರಟ್ಟು ಮಾಡಿದ ಮಾಜಿ ಸೆಲೆಕ್ಟರ್

News First Live Kannada


Leave a Reply

Your email address will not be published. Required fields are marked *