ದ್ರಾವಿಡ್​ ಜೊತೆ ಟೀಂ ಇಂಡಿಯಾ ಸೇರೋ ‘ದಿ ವಾಲ್​’ ಆಪ್ತರು ಯಾರ್ಯಾರು?


ವಿಶ್ವಕಪ್​​ ಬಳಿಕ ಕೊಹ್ಲಿ, ವೈಟ್​​​ಬಾಲ್​ ಕ್ರಿಕಟ್​​​​​ ನಾಯಕತ್ವಕ್ಕೆ ಗುಡ್​​ಬೈ ಹೇಳಲಿದ್ದಾರೆ. ಕೋಚ್​ ಶಾಸ್ತ್ರಿ, ಭರತ್​ ಅರುಣ್​, R ಶ್ರೀಧರ್​​, ವಿಕ್ರಮ್​ ರಾಥೋರ್​ ಅಧಿಕಾರವಧಿ ಕೂಡ ಕೊನೆಗೊಳ್ಳಲಿದೆ. ಈ ಖಾಲಿ ಸ್ಥಾನಗಳಿಗೆ ಯಾರನ್ನೆಲ್ಲಾ ಆಯ್ಕೆ ಮಾಡಬೇಕೆಂಬ ಗೊಂದಲ, ಇದೀಗ BCCIಗೆ ಹುಟ್ಟಿದೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ.

ಹೆಡ್​​ ಕೋಚ್​ ಆಗಿ ರಾಹುಲ್​​ ದ್ರಾವಿಡ್​ ಅಧಿಕೃತವಾಗಿ ನೇಮಕವಾಗಿದ್ದಾರೆ. ಇದು ಟೀಮ್​ ಇಂಡಿಯಾಗೆ ಹೊಸ ಯುಗವನ್ನ ಸೂಚಿಸ್ತಿದೆ. ಪ್ರತಿ ಹೆಜ್ಜೆಯಲ್ಲೂ ಹೊಸತನ್ನೇ ಕೆದಕಿ ಸಂಶೋಧಿಸುವ ದ್ರಾವಿಡ್​​, ಕೋಚ್​​ ಆಗಿ ತಂಡಕ್ಕೆ ಏನೆಲ್ಲಾ ಅಗತ್ಯಯಿದೆ ಅನ್ನೋದರ ಬ್ಲೂ ಪ್ರಿಂಟ್​ ಸಿದ್ಧಪಡಿಸಿದ್ದಾರೆ. ಅದರಂತೆ ಕಣಕ್ಕಿಳಿಸಲು ಪ್ಲಾನ್​​ ರೂಪಿಸಿದ್ದಲ್ಲದೆ, ತನ್ನ ತಂಡಕ್ಕೆ ಕ್ಯಾಪ್ಟನ್​​, ಸಹಾಯಕ ಕೋಚ್​​​ಗಳು ಯಾರೆಲ್ಲಾ ಬೇಕು ಅನ್ನೋದನ್ನ ಆಯ್ಕೆ ಮಾಡಿದ್ದಾರೆ.

ವೈಟ್​​​​​ಬಾಲ್​ ಕ್ರಿಕೆಟ್​ಗೆ ರೋಹಿತ್​ ಶರ್ಮಾ ಕ್ಯಾಪ್ಟನ್​..!
ವೈಟ್​ಬಾಲ್​ ಕ್ರಿಕೆಟ್​​ ನಾಯಕತ್ವದಿಂದ ವಿರಾಟ್​ ಕೆಳಗಿಳಿಯೋದು ಕನ್ಫರ್ಮ್​. ಆದ್ರೆ ಕೊಹ್ಲಿ ಕೆಳಗಿಳಿಯುವ ಮುನ್ನವೇ ರೋಹಿತ್​ ಶರ್ಮಾಗೆ ನಾಯಕತ್ವ ವಹಿಸುವಂತೆ ದ್ರಾವಿಡ್​​​ ಸೂಚಿಸಿದ್ದಾರೆ. ಏಕೆಂದ್ರೆ IPL​​​ನಲ್ಲಿ ಮತ್ತು ಭಾರತ ತಂಡವನ್ನ ಉತ್ತಮವಾಗಿ ಮುನ್ನಡೆಸಿದ ಅಪಾರ ಅನುಭವ ಹೊಂದಿದ್ದಾರೆ. ಜೊತೆಗೆ ಗೇಮ್​​ಪ್ಲಾನ್,​ಟ್ಯಾಕ್ಟಿಸ್, ಸ್ಟ್ರಾಟಜಿ, ಕ್ಯಾಪ್ಟನ್ಸಿ ಎಲ್ಲರಿಗಿಂತ ವಿಭಿನ್ನವಾಗಿದೆ. ಇದು ಒಂದಲ್ಲ, ಹಲವು ಬಾರಿ ಪ್ರೂವ್​ ಆಗಿದೆ. ಅದಕ್ಕಾಗಿಯೇ ರೋಹಿತ್​​​ ಆಯ್ಕೆಗೆ ದ್ರಾವಿಡ್​​​ ಸೂಚಿಸಿದ್ದಾರೆ.

​ಕನ್ನಡಿಗ ಕೆ.ಎಲ್​.ರಾಹುಲ್​​ಗೆ ಉಪನಾಯಕನ ಪಟ್ಟ..!
ರೋಹಿತ್​​ ನಾಯಕನಾದ್ರೆ ರಾಹುಲ್​​​ ಉಪನಾಯಕ ಅನ್ನೋ ಸುದ್ದಿ ಸಹ ಹರಿದಾಡ್ತಿದೆ. ರಾಹುಲ್​​ಗೆ ಉಪ ನಾಯಕನ ಪಟ್ಟ ನೀಡಬೇಕೆಂದು ಪಟ್ಟು ಹಿಡಿದಿರೋದು ದ್ರಾವಿಡ್. IPLನಲ್ಲಿ ಪಂಜಾಬ್​ ತಂಡವನ್ನ ಮುನ್ನಡೆಸಿರುವ ರಾಹುಲ್​ಗೆ, ರಾಷ್ಟ್ರೀಯ ತಂಡದ ನಾಯಕತ್ವ ಪಾತ್ರದ ಪರಿಚಯ ಮಾಡಿಕೊಡುವುದು ದ್ರಾವಿಡ್​ ಉದ್ದೇಶ. ಏಕೆಂದ್ರೆ ಭಾರತಕ್ಕೆ ಭವಿಷ್ಯದ ನಾಯಕನನ್ನ ಈಗಿನಿಂದಲೇ ಸಿದ್ಧಪಡಿಸೋದು ದ್ರಾವಿಡ್​ ಮಾಸ್ಟರ್​​ ಪ್ಲಾನ್​.

ಪರಾಸ್​​ ಮಾಂಬ್ರೆಗೆ ಬೌಲಿಂಗ್​​ ಕೋಚ್​​ ಹುದ್ದೆ.​.!
ಭಾರತದ ‘ಎ’ ಮತ್ತು ಅಂಡರ್-19 ತಂಡದ ಬೌಲಿಂಗ್​ ಕೋಚ್ ಆಗಿದ್ದ ಅನುಭವ, ಪರಾಸ್ ಮಾಂಬ್ರೆಗೆ ಇದೆ. ಯುವ ಕ್ರಿಕೆಟಿಗರಿಗೆ ತರಬೇತಿ ನೀಡಿ ಯಶಸ್ಸು ಕಂಡಿರುವ ಮಾಂಬ್ರೆ, NCAನಲ್ಲಿ ದ್ರಾವಿಡ್​​​​ ​ಜೊತೆಗೆ ಕೆಲಸ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲೂ ಮಾಂಬ್ರೆ, ದ್ರಾವಿಡ್ ಜೊತೆ ಕೆಲಸ ಮಾಡಿದ್ರು. ಆಪ್ತನ ಜೊತೆಗೆ ಒಟ್ಟಾಗಿ ಕೆಲಸ ಮಾಡಿ ಎಲ್ಲಾ ಕಡೆ ಮ್ಯಾಜಿಕ್​​ ನಡೆದಿದೆ. ಭಾರತ ತಂಡದಲ್ಲೂ ಇದೇ ಮ್ಯಾಜಿಕ್​ ಮುಂದುವರೆಸೋದು ದ್ರಾವಿಡ್​ ಯೋಜನೆಯಾಗಿದೆ.

ಫೀಲ್ಡಿಂಗ್​ ಕೋಚ್​ ಸ್ಥಾನಕ್ಕೆ ಅಭಯ್​​ ಶರ್ಮಾ ನೇಮಕ ಸಾಧ್ಯತೆ?
ಅಭಯ್​ ಶರ್ಮಾ ಕೂಡ ಟೀಮ್​​​ ಅಂಡರ್-19, ಭಾರತ-ಎ ತಂಡದಲ್ಲಿ ಫೀಲ್ಡಿಂಗ್​ ಕೋಚ್​​​​​ ಆಗಿ ಸೇವೆ ಸಲ್ಲಿಸಿದ್ದಾರೆ. ದ್ರಾವಿಡ್ ಆಪ್ತರಾಗಿರುವ ಅಭಯ್, NCAನಲ್ಲೂ ಕೋಚ್ ಆಗಿ ದ್ರಾವಿಡ್ ಜೊತೆ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅಭಯ್​ ಶರ್ಮಾ ಆಯ್ಕೆಗೆ, ದ್ರಾವಿಡ್​​ ಒಲವು ತೋರಿದ್ದಾರೆ.

ಬ್ಯಾಟಿಂಗ್​​​​ ಕೋಚ್​​​ಗೆ ವಿಕ್ರಮ್​ ರಾಥೋರ್​​ ಮರು ನೇಮಕ.?
ಹೀಗಾಗಿ ಮರು ಅರ್ಜಿ ಸಲ್ಲಿಸಿದ್ದು, ರಾಥೋರ್​ ಆಯ್ಕೆ ಬಹುತೇಕ ಖಚಿತ ಎನ್ನಲಾಗ್ತಿದೆ. ಒಟ್ನಲ್ಲಿ ದ್ರಾವಿಡ್​​ ಅಂದುಕೊಂಡಂತೆ ಈ ಎಲ್ಲಾ ಪ್ಲಾನ್​ ವರ್ಕೌಟ್​ ಆದ್ರೆ, ಟೀಮ್​ ಇಂಡಿಯಾ ಮತ್ತಷ್ಟು ಬಲಿಷ್ಠ ಆಗೋದ್ರಲ್ಲಿ ಅನುಮಾನವೇ ಇಲ್ಲ.

News First Live Kannada


Leave a Reply

Your email address will not be published. Required fields are marked *