ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ-20 ಸರಣಿ ಇಂದಿನಿಂದ ಆರಂಭವಾಗಲಿದೆ. ಇಂದು ಸಂಜೆ 7 ಗಂಟೆಯಿಂದ ಮೊದಲ ಟಿ-20 ಪಂದ್ಯಕ್ಕೆ ಜೈಪುರ್ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿ ಆಗಲಿದೆ.
ಇಂದಿನ ಪಂದ್ಯ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾಗೆ ಮಹತ್ವದ್ದಾಗಿದೆ. ಯಾಕಂದ್ರೆ ರೋಹಿತ್ ಶರ್ಮಾ, ಟಿ-20 ಪಂದ್ಯಗಳಿಗೆ ಇದೇ ಮೊದಲ ಬಾರಿಗೆ ಪೂರ್ಣಾವಧಿಗೆ ನಾಯಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹಾಗೆಯೇ ರಾಹುಲ್ ದ್ರಾವಿಡ್ಗೆ, ಟೀಂ ಇಂಡಿಯಾದ ಕೋಚ್ ಆಗಿ ಮೊದಲ ಪಂದ್ಯವಾಗಿದೆ.
T20 ವಿಶ್ವಕಪ್ 2021ರ ವೈಫಲ್ಯದ ನಂತರ, ಈಗ ಭಾರತ ತಂಡವು ಹೊಸ ನಾಯಕ ಮತ್ತು ಹೊಸ ಕೋಚ್ನೊಂದಿಗೆ ಹೊಸ ಆರಂಭವನ್ನು ಮಾಡಲು ಪ್ರಯತ್ನಿಸುತ್ತದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಯಾಱರು ಆಡ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಯಾಕಂದ್ರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೆಂಕಟೇಶ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.