ದ್ರಾವಿಡ್, ರೋಹಿತ್​​ಗೆ ಗೆಲುವಿನ ಗಿಫ್ಟ್; ಕೊನೆಯ 4 ಓವರ್​ಗಳ ರೋಚಕ ಕ್ಷಣ ಹೇಗಿತ್ತು ಗೊತ್ತಾ..!


ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ 5 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ಬೌಲಿಂಗ್​​ ಮತ್ತು ಬ್ಯಾಟಿಂಗ್​​​ನಲ್ಲಿ ಆಟವಾಡಿದ ರೋಹಿತ್​ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ನೂತನ ಕೋಚ್​ ದ್ರಾವಿಡ್​​ ಮತ್ತು ನೂತನ ನಾಯಕ ರೋಹಿತ್​ ಶರ್ಮಾಗೆ ಜವಾಬ್ದಾರಿ ಹೊತ್ತ ಮೊದಲ ಪಂದ್ಯದಲ್ಲೇ ಗೆಲುವಿನ ಗಿಫ್ಟ್​ ಸಿಕ್ಕಿದೆ.

ಟಾಸ್​ ಸೋತು ಬ್ಯಾಟಿಂಗ್​​ಗಿಳಿದ ನ್ಯೂಜಿಲೆಂಡ್​, ಮೊದಲ ಓವರ್​​ನಲ್ಲೇ ಆಘಾತಕ್ಕೆ ಒಳಗಾಯ್ತು. ಮಾರ್ಟಿನ್​ ಗಪ್ಟಿಲ್​ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ಡ್ಯಾರಿಲ್​ ಮಿಚೆಲ್​, ಎದುರಿಸಿದ ಮೊದಲ ಎಸೆತದಲ್ಲೇ ಭುವನೇಶ್ವರ್​ಗೆ ಕ್ಲೀನ್​ ಬೋಲ್ಡ್​ ಆದ್ರು. ಬಳಿಕ ಗಪ್ಟಿಲ್​ಗೆ ಜೊತೆಯಾದ​​ ಚಾಪ್​​ಮನ್​, ಬೌಂಡರಿ-ಸಿಕ್ಸರ್​​ಗಳ ಸುರಿಮಳೆಗೈದು ಆಘಾತದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿದ್ರು.

ಚಾಪ್​ಮನ್ ಜೊತೆಗೆ​​ ಅಬ್ಬರಿಸಲು ಶುರುವಿಟ್ಟ ಗಪ್ಟಿಲ್​, ಕೂಡ ಬೌಲರ್​​ಗಳ ಬೆಂಡೆತ್ತಿದ್ರು. ಹೀಗಾಗಿ ಶತಕದ ಜೊತೆಯಾಟವಾಡಿದ ಗಪ್ಟಿಲ್-ಚಾಪ್​​ಮನ್ ತಲಾ ಅರ್ಧಶತಕವನ್ನ ಸಿಡಿಸಿ ಪೆವಿಲಿಯನ್​ ಸೇರಿದ್ರು. ಇವರ ಬೆನ್ನಲ್ಲೇ ಕಣಕ್ಕಿಳಿದ​ ಪಿಲಿಫ್ಸ್​, ಸೀಫರ್ಟ್​, ರಾಚಿನ್​ ರವೀಂದ್ರ ಕೂಡ ಬೇಗನೇ ವಿಕೆಟ್​​ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಪರಿಣಾಮ 20 ಓವರ್​​ಗಳಲ್ಲಿ ಕಿವೀಸ್​ 6 ವಿಕೆಟ್​​ ನಷ್ಟಕ್ಕೆ 164 ರನ್​​​​ ಗಳಿಸಿತು. ಭಾರತದ ಪರ ಭುವಿ, ಅಶ್ವಿನ್​ ತಲಾ 2 ವಿಕೆಟ್​ ಕಬಳಿಸಿ ಮಿಂಚಿದ್ರು.

ಸ್ಪರ್ಧಾತ್ಮಕ ಮೊತ್ತವನ್ನ ಬೆನ್ನತ್ತಿದ ಟೀಮ್​ ಇಂಡಿಯಾ, ಕಿವೀಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ- KL ರಾಹುಲ್​ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದು 50 ರನ್​​ಗಳ ಜೊತೆಯಾಟವಾಡಿದ್ರು. ಆದರೆ ರಾಹುಲ್​ ಸ್ಯಾಂಟ್ನರ್​​​ಗೆ ವಿಕೆಟ್​ ಒಪ್ಪಿಸಿ ಹೊರ ನಡೆದ್ರು. ಬಳಿಕ ಕಣಕ್ಕಿಳಿದ ಸೂರ್ಯ ಕುಮಾರ್, ರೋಹಿತ್​​​ಗೆ ಅದ್ಭುತವಾಗಿ ಸಾಥ್​ ನೀಡಿದ್ರು.

ವೇಗವಾಗಿ ಬ್ಯಾಟ್​ ಬೀಸಿದ ರೋಹಿತ್​​​-ಸೂರ್ಯ ಕೂಡ, 50 ರನ್​ಗಳ ಜೊತೆಯಾಟವಾಡಿದ್ರು. ಆದರೆ ಈ ವೇಳೆ 48 ರನ್​​ ಗಳಿಸಿದ್ದ ರೋಹಿತ್​ ಮತ್ತು ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್​​​ಗೆ ಟ್ರೆಂಟ್​​ಬೋಲ್ಟ್​​ ಗೇಟ್​ಪಾಸ್​​​ ನೀಡುವಲ್ಲಿ ಯಶಸ್ವಿಯಾದ್ರು. ಇದಾದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್, ವೆಂಕಟೇಶ್​​ ಅಯ್ಯರ್​ ಕೂಡ ಔಟಾದ್ರು. ಪರಿಣಾಮ, ಭಾರತ ತಂಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡ್ತು. ಅಂತಿಮವಾಗಿ ರಿಷಭ್​​ ಪಂತ್​​ ಫೋರ್​ ಸಿಡಿಸಿ, ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದ್ರು.

ಹೇಗಿತ್ತು ಕೊನೆಯ ಓವರ್​​..?

  • 16ನೇ ಓವರ್​​: 4, 1, 4, 4, 1, L1
  • 17 ನೇ ಓವರ್: 0, 0, wide, 1, W, 0, 0
  • 18ನೇ ಓವರ್: 0, 1, wide, L2, 1, 0, 0
  • 19 ನೇ ಓವರ್: 1, 1, 1, L1, 2, W
  • 20 ನೇ ಓವರ್: wide, 4, W, wide, 1, 4

News First Live Kannada


Leave a Reply

Your email address will not be published. Required fields are marked *