
ಶಿಕ್ಷಣ ಸಚಿವ ಬಿ ಸಿ ನಾಗೇಶ
ಬಿಸಿ ನಾಗೇಶ್ ಅವರ ಈ ಪತ್ರಕ್ಕೆ ಪಿಯು ಬೋರ್ಡ್ ನಿರ್ದೇಶಕರು ಸಕಾರಾತ್ಮಕವಾಗಿ ಉತ್ತರ ನೀಡಿದರು. ಎನ್ಸಿಎಫ್ ಆಧರಿಸಿ ಪಠ್ಯಕ್ರಮ, ಪಠ್ಯ ವಸ್ತು ಹಾಗೂ ಹೊಸ ಪಠ್ಯ ಪುಸ್ತಕ ರಚನೆಯಾಗಲಿದೆ.
ಬೆಂಗಳೂರು: ಶಾಲಾ ಪಠ್ಯ ವಿವಾದದ ನಡುವೆ ಪಿಯು ಪಠ್ಯ ಪರಿಷ್ಕರಣೆ ಮಾಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ದ್ವಿತೀಯ ಪಿಯುಸಿಯ (2nd PUC) ಭಾರತದ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿರುವ ಶಿಕ್ಷಣ ಇಲಾಖೆ, ಪಠ್ಯ ಪರಿಷ್ಕರಣೆಯನ್ನು ರೋಹಿತ್ ಸಮಿತಿಗೆ ವಹಿಸಲು ಸೂಚನೆ ನೀಡಿದೆ. ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಅಧ್ಯಾಯ 4.2 ಹೊಸ ‘ಧರ್ಮಗಳ ಉದಯ’ ಪಠ್ಯಭಾಗ ಪರಿಷ್ಕರಣೆಗೆ ಸೂಚನೆ ನೀಡಲಾಗಿದೆ. ಇದೇ ವರ್ಷ ಫೆಬ್ರವರಿ 17 ರಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರ ಬರೆದಿದ್ದರು. ಹೊಸ ಧರ್ಮಗಳ ಉದಯ ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳಿರುವ ಬಗ್ಗೆ ದೂರು ಬಂದಿವೆ. ಈ ನಿಟ್ಟಿನಲ್ಲಿ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯ ತೆಗೆಯುವಂತೆ ಸೂಚನೆ ನೀಡಿದ್ದರು.
ಬಿಸಿ ನಾಗೇಶ್ ಅವರ ಈ ಪತ್ರಕ್ಕೆ ಪಿಯು ಬೋರ್ಡ್ ನಿರ್ದೇಶಕರು ಸಕಾರಾತ್ಮಕವಾಗಿ ಉತ್ತರ ನೀಡಿದರು. ಎನ್ಸಿಎಫ್ ಆಧರಿಸಿ ಪಠ್ಯಕ್ರಮ, ಪಠ್ಯ ವಸ್ತು ಹಾಗೂ ಹೊಸ ಪಠ್ಯ ಪುಸ್ತಕ ರಚನೆಯಾಗಲಿದೆ. ಯಾವುದೇ ವಿವಾದಿತ ಅಂಶಗಳಿಲ್ಲದಂತೆ ಕ್ರಮವಹಿಸಲಾಗುತ್ತದೆ ಎಂದು ಪಿಯು ಬೋರ್ಡ್ ತಿಳಿಸಿತ್ತು.