ಬೆಂಗಳೂರು: ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್ ವಿಚಾರವಾಗಿ ಇಂದು ಹೈಕೋರ್ಟ್ ಅಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ರಿಪಿಟರ್ಸ್ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎನ್ನುವ ತೀರ್ಮಾನಕ್ಕೆ ಸರ್ಕಾರ ಮುಂದಾಗಿದೆ.

ಇಂದು 76 ಸಾವಿರ ರಿಪಿಟರ್ಸ್ ವಿದ್ಯಾರ್ಥಿಗಳು ಕೂಡ ಪಾಸ್ ಎಂದು ತಜ್ಞರ ಸಮಿತಿ ತಿಳಿಸಿದೆ. ಒಮ್ಮೆಯಾದರೂ ಎಕ್ಸಾಂ ಅಲ್ಲಿ ಕುಳಿತು ಫೇಲ್ ಆಗಿದ್ರೆ ಅವರೆಲ್ಲಾ ಪಾಸ್ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ತನ್ನ ನಿರ್ಧಾರ ತಿಳಿಸಿದೆ.

ತಜ್ಞರ ಸಮಿತಿಯ ಪ್ರಕಾರ 76 ಸಾವಿರ ವಿದ್ಯಾರ್ಥಿಗಳು ಕೂಡ ಪಾಸ್ ಮಾಡಲಾಗುತ್ತದೆ. ಒಮ್ಮೆಯಾದರೂ ಎಕ್ಸಾಂ ಅಲ್ಲಿ ಕುಳಿತು ಫೇಲ್ ಆಗಿದ್ರೆ ಅವರೆಲ್ಲಾ ಪಾಸ್ ಆಗುತ್ತಾರೆ. 35 ರಷ್ಟು ಅಂಕ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಗ್ರೇಸ್ ಮಾಕ್ರ್ಸ್ ಆಗಿ ಪರಿಗಣಿಸೋದಾಗಿ ಹೈಕೋರ್ಟ್‍ಗೆ ಹೇಳಿಕೆ ನೀಡಿದೆ. ಪ್ರಷರ್ಸ್ ಪಾಸ್ ಮಾಡುವ ಬಗ್ಗೆ ಈಗಾಗಲೇ ಸರ್ಕಾರ ತೀರ್ಮಾನ ಮಾಡಿದೆ.

ಪರೀಕ್ಷಾ ಶುಲ್ಕ ಪಾವತಿಸಿ ಸುಮ್ಮನೆ ಪರೀಕ್ಷೆಗೆ ಗೈರಾದವರನ್ನು ಉತ್ತೀರ್ಣ ಮಾಡಲ್ಲ. ವಿದ್ಯಾರ್ಥಿ ಒಮ್ಮೆಯಾದ್ರೂ ಪರೀಕ್ಷೆಗೆ ಹಾಜರಾಗಿರಬೇಕು. ಎರಡ್ಮೂರು ಬಾರಿ ಅನುತ್ತೀರ್ಣ ಆಗಿದವರನ್ನು ಇದೇ ವರ್ಗದಲ್ಲಿ ಬರುತ್ತಾರೆ ಎಂದು ಸರ್ಕಾರ ಹೇಳಿದೆ.

The post ದ್ವಿತೀಯ ಪಿಯುಸಿ ರಿಪಿಟರ್ಸ್ ಪಾಸ್ ಮಾಡಲು ಸರ್ಕಾರದ ನಿರ್ಧಾರ! appeared first on Public TV.

Source: publictv.in

Source link