ಬೆಂಗಳೂರು: ಪರೀಕ್ಷೆ ಇಲ್ಲದೇ ಪಾಸ್ ಆಗ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನ ಸದ್ಯಕ್ಕೆ ನೀಡಬೇಡಿ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಮೌಖಿಕ ಆದೇಶ ಹೊರಡಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್​.. ಎರಡನೇ ಪಿಯುಸಿ ವಿಚಾರ ಕುರಿತು ಹೈಕೋರ್ಟ್ ಈ ರೀತಿ ಆದೇಶ ನೀಡಿದೆ. ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಆದೇಶವನ್ನು ಅಧ್ಯಯನ ಮಾಡಿ ಅಗತ್ಯ ಪರಾಮರ್ಶೆ ನಡೆಸಿ ನಮ್ಮ ನಿಲುವನ್ನು ಕೋರ್ಟ್​ಗೆ ತಿಳಿಸುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಈ ವರ್ಷ ದ್ವಿತೀಯ ಪಿಯುಸಿ ರೆಗ್ಯೂಲರ್ ವಿದ್ಯಾರ್ಥಿಗಳನ್ನ ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಪಿಯು ರಿಪಿಟರ್ಸ್ ಅಭ್ಯರ್ಥಿಗಳು ‌ಕೋರ್ಟ್ ಮೊರೆ ಹೋಗಿದ್ರು. ಇವರ ಅರ್ಜಿ ಆಲಿಸಿದ ನ್ಯಾಯಾಲಯ ರೆಗ್ಯೂಲರ್ ವಿದ್ಯಾರ್ಥಿಗಳನ್ನ ಪಾಸ್ ಮಾಡಿರೋದು ಸರಿಯಲ್ಲ. ಗುರುವಾರದ ತನಕ ಯಾವುದೇ ಫಲಿತಾಂಶ ಪ್ರಕಟ ಮಾಡಬೇಡಿ. ಪಾಸ್ ಮಾಡಿದ್ರೆ ಎಲ್ಲರನ್ನು ಪಾಸ್​​ ಮಾಡಬೇಕಿತ್ತು ಎಂದು ಹೇಳಿದೆ.

ಇದನ್ನೂ ಓದಿ: 2nd ಪಿಯು ವಿದ್ಯಾರ್ಥಿಗಳ ಫಲಿತಾಂಶ ಸದ್ಯಕ್ಕೆ ನೀಡಬೇಡಿ -ಹೈಕೋರ್ಟ್​

The post ದ್ವಿತೀಯ ಪಿಯು ಫಲಿತಾಂಶ ವಿಚಾರ; ಹೈಕೋರ್ಟ್​ ಆದೇಶಕ್ಕೆ ಸರ್ಕಾರ ಹೇಳಿದ್ದೇನು? appeared first on News First Kannada.

Source: newsfirstlive.com

Source link