‘ದ್ವಿತ್ವ’ ಸಿನಿಮಾದಲ್ಲಿ ಪುನೀತ್​ ಬದಲು ಬೇರೆಯವರು ನಟಿಸ್ತಾರಾ? ತಂಡದಿಂದ ಸಿಕ್ತು ಉತ್ತರ | Here is the answer who will lead Puneeth Rajkumar Dvitva Movie


ಪುನೀತ್​ ರಾಜ್​ಕುಮಾರ್ ‘ದ್ವಿತ್ವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಸಿನಿಮಾಗೆ ‘ಲೂಸಿಯಾ’ ಪವನ್​ ಆ್ಯಕ್ಷನ್​ ಕಟ್​ ಹೇಳಬೇಕಿತ್ತು. ಈ ಮೊದಲು ರಿಲೀಸ್​ ಆಗಿದ್ದ ಚಿತ್ರದ ಪೋಸ್ಟರ್​ ಸಾಕಷ್ಟು ಹೈಪ್​ ಸೃಷ್ಟಿ ಮಾಡಿತ್ತು.

[embed]https://www.youtube.com/watch?v=E0X8K9eSuSo[/embed]

ಪುನೀತ್​ ರಾಜ್​ಕುಮಾರ್ (Puneeth Rajkumar) ‘ದ್ವಿತ್ವ’ ಸಿನಿಮಾದಲ್ಲಿ (Dvitwa Movie) ನಟಿಸಬೇಕಿತ್ತು. ಈ ಸಿನಿಮಾಗೆ ‘ಲೂಸಿಯಾ’ ಪವನ್​ ಆ್ಯಕ್ಷನ್​ ಕಟ್​ ಹೇಳಬೇಕಿತ್ತು. ಈ ಮೊದಲು ರಿಲೀಸ್​ ಆಗಿದ್ದ ಚಿತ್ರದ ಪೋಸ್ಟರ್​ ಸಾಕಷ್ಟು ಹೈಪ್​ ಸೃಷ್ಟಿ ಮಾಡಿತ್ತು. ಈ ಚಿತ್ರದ ಕೆಲಸಗಳು ಆರಂಭವಾಗುವ ಮೊದಲೇ ಪುನೀತ್​ ನಿಧನ ಹೊಂದಿದ್ದರು. ಇದು ಎಲ್ಲರಿಗೂ ಸಾಕಷ್ಟು ದುಃಖ ತಂದಿದೆ. ‘ದ್ವಿತ್ವ’ ಸಿನಿಮಾದಲ್ಲಿ ಬೇರೆ ಯಾರಾದರೂ ನಟಿಸುತ್ತಾರಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇದಕ್ಕೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಉತ್ತರ ನೀಡಿದ್ದಾರೆ. ‘ಅದರ ಬಗ್ಗೆ ನಾವು ಇನ್ನೂ ಯೋಚನೆ ಮಾಡಿಲ್ಲ. ಈ ಸಬ್ಜೆಕ್ಟ್​ ಇಟ್ಟುಕೊಂಡು ಬೇರೆಯಾರಿಗಾದರೂ ಮಾಡಬೇಕು ಎಂಬುದು ತಲೆಗೆ ಬರುತ್ತಿಲ್ಲ. ನಾವು ಶೂನ್ಯ ಸ್ಥಿತಿಯಲ್ಲಿದ್ದೇವೆ. ಸದ್ಯಕ್ಕಂತೂ ಆ ರೀತಿ ಆಲೋಚನೆ ಇಲ್ಲ’ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ.


TV9 Kannada


Leave a Reply

Your email address will not be published. Required fields are marked *