ದ್ವಿಪಕ್ಷೀಯ ರಕ್ಷಣಾ ಸಹಕಾರ ಗಾಢಗೊಳಿಸಲು ವಿಯೆಟ್ನಾಂಗೆ 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ರಾಜನಾಥ್ ಸಿಂಗ್ | Defence minister Rajnath Singh to visit Vietnam on June 8 to deepen defence ties


ದ್ವಿಪಕ್ಷೀಯ ರಕ್ಷಣಾ ಸಹಕಾರ ಗಾಢಗೊಳಿಸಲು ವಿಯೆಟ್ನಾಂಗೆ 3 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಸಿಂಗ್ ಅವರು ಜನರಲ್ ಗಿಯಾಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇವರಿಬ್ಬರೂ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಪರಿಶೀಲಿಸುತ್ತಾರೆ ಮತ್ತು ಮಿಲಿಟರಿ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲು ಹೊಸ ಉಪಕ್ರಮಗಳನ್ನು ಅನ್ವೇಷಿಸಲಿದ್ದಾರೆ

ದೆಹಲಿ: ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಗಾಢಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ವಿಯೆಟ್ನಾಂ (Vietnam) ಸಹವರ್ತಿ ಜನರಲ್ ಫಾನ್ ವ್ಯಾನ್ ಗಿಯಾಂಗ್(Phan Van Giang) ಅವರೊಂದಿಗೆ ಮಾತುಕತೆಗಾಗಿ ಜೂನ್ 8 ರಂದು ವಿಯೆಟ್ನಾಂಗೆ ಮೂರು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ. ಆಗ್ನೇಯ ಏಷ್ಯಾದ ದೇಶಕ್ಕೆ ಭಾರತದ 100 ಮಿಲಿಯನ್ ಡಾಲರ್ ರಕ್ಷಣಾ ಸಾಲದ ಅಡಿಯಲ್ಲಿ ಎಲ್ ಆಂಡ್ ಟಿ ನಿರ್ಮಿಸಿದ 12 ಹೈಸ್ಪೀಡ್ ಬೋಟ್‌ಗಳನ್ನು ಹೈ ಫಾಂಗ್‌ನಲ್ಲಿರುವ ಹಾಂಗ್ ಹಾ ಯಾರ್ಡ್‌ನಲ್ಲಿ ವಿಯೆಟ್ನಾಂಗೆ ಹಸ್ತಾಂತರಿಸುವ ಸಮಾರಂಭದ ಅಧ್ಯಕ್ಷತೆಯನ್ನು ಸಿಂಗ್ ವಹಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.”ಈ ಯೋಜನೆಯು ವಿಯೆಟ್ನಾಂನೊಂದಿಗೆ ಬೆಳೆಯುತ್ತಿರುವ ರಕ್ಷಣಾ ಉದ್ಯಮದ ಸಹಕಾರದ ಸಂದರ್ಭದಲ್ಲಿ ಮಹತ್ವದ್ದಾಗಿದ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ್ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್’ಗೆ ಉದಾಹರಣೆಯಾಗಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.  ಅಧ್ಯಕ್ಷ ಹೋ ಚಿ ಮಿನ್ಹ್ ಅವರ ಹನೋಯಿಯಲ್ಲಿರುವ ಸಮಾಧಿಗೆ ಗೌರವ ಸಲ್ಲಿಸುವ ಮೂಲಕ ಸಿಂಗ್ ತಮ್ಮ ಭೇಟಿಯನ್ನು ಪ್ರಾರಂಭಿಸಲಿದ್ದಾರೆ.

ಸಿಂಗ್ ಅವರು ಜನರಲ್ ಜಿಯಾಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇವರಿಬ್ಬರೂ  ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಪರಿಶೀಲಿಸುತ್ತಾರೆ ಮತ್ತು ಮಿಲಿಟರಿ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲು ಹೊಸ ಉಪಕ್ರಮಗಳನ್ನು ಅನ್ವೇಷಿಸಲಿದ್ದಾರೆ. ಉಭಯ ರಾಷ್ಟ್ರಗಳ ನಾಯಕರ ಮಾತುಕತೆಗಳು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಂಗ್ ಅವರು ತಮ್ಮ ಭೇಟಿಯ ಸಮಯದಲ್ಲಿ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್ ಮತ್ತು ಪಿಎಂ ಫಾಮ್ ಮಿನ್ ಚಿನ್ಹ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ನ್ಹಾ ಟ್ರಾಂಗ್‌ನಲ್ಲಿರುವ ವಿಯೆಟ್ನಾಂನ ತರಬೇತಿ ಸಂಸ್ಥೆಗಳಿಗೆ ಭೇಟಿ ನೀಡುವುದು ಅವರ ಪ್ರವಾಸದಲ್ಲಿ ಸೇರಿದೆ. ಭಾರತದಿಂದ 5 ಮಿಲಿಯನ್ ಡಾಲರ್ ಅನುದಾನದಲ್ಲಿ ಆರ್ಮಿ ಸಾಫ್ಟ್‌ವೇರ್ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತಿರುವ ದೂರಸಂಪರ್ಕ ವಿಶ್ವವಿದ್ಯಾಲಯಕ್ಕೂ ಅವರು ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿ 50 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರ ಈ ಭೇಟಿ ಬಂದಿದೆ. ಎರಡೂ ದೇಶಗಳು 2016 ರಿಂದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದ್ದು, ರಕ್ಷಣಾ ಸಹಕಾರವು ಸಂಬಂಧದ ಪ್ರಮುಖ ಆಧಾರವಾಗಿದೆ.

TV9 Kannada


Leave a Reply

Your email address will not be published.