ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರು ಕಂಟೋನ್ಮೆಂಟ್ ನಿಂದ ಹಿಲಲಿಗೆ ಪ್ರಯಾಣಿಸುವ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ದ್ವಿಪಥ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಕರ್ನಾಟಕ ಸರ್ಕಾರ ಹಾಗೂ ರೈಲ್ವೆ ಸಚಿವಾಲಯ ಜಂಟಿ ಸಹಯೋಗದಲ್ಲಿ ಕೆ-ಆರೈಡಿಇ ಯು ಈ ಉಪನಗರ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.

ಬಿಎಸ್‍ಆರ್ ಪಿಯು 148ಕಿ.ಮೀ. ಅಂತರದಲ್ಲಿ 4 ಕಾರಿಡಾರ್ ಗಳನ್ನ ಹೊಂದಿದೆ.
1. ಕೆಎಸ್‍ಆರ್ ಬೆಂಗಳೂರು ನಗರ – ದೇವನಹಳ್ಳಿ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ) (41.40 ಕಿ.ಮೀ.)
2. ಬೈಯಪ್ಪನಹಳ್ಳಿ – ಚಿಕ್ಕಬಾಣಾವರ (25 ಕಿ.ಮೀ.)
3. ಕೆಂಗೇರಿ – ವೈಟ್ ಫಿಲ್ಡ್ (35.52 ಕಿ.ಮೀ.)
4. ಹೀಲಲಿಗೆ (ಚಂದಾಪುರ) – ರಾಜನಕುಂಟೆ (46.24 ಕಿ.ಮೀ.)

ನಾಲ್ಕು ಕಾರಿಡಾರ್ ಗಳಲ್ಲಿ ಕಾರಿಡಾರ್ – (ಬೈಯಪ್ಪನಹಳ್ಳಿ-ಚಿಕ್ಕಬಾಣಾವರ) ಮತ್ತು ಕಾರಿಡಾರ್ – 4 (ಹೀಲಲಿಗೆ (ಚಂದಾಪುರ)-ರಾಜನಕುಂಟೆ) ಕಾಮಗಾರಿಗಳನ್ನ ಮೊದಲು ಕೈಗೆತ್ತಿಕೊಳ್ಳಲಾಗುವುದು)

ದ್ವಿಪಥ ಯೋಜನೆಗಳು:
ಯಶವಂತಪುರ – ಚನ್ನಸಂದ್ರ ವಿಭಾಗ ಮತ್ತು ಬೈಯಪ್ಪನಹಳ್ಳಿ – ಹೊಸುರು ನಡುವಿನ ಏಕ ಮಾರ್ಗದಿಂದಾಗಿ ಬೆಂಗಳೂರಿನಿಂದ ಹೊರವಲಯಕ್ಕೆ ರೈಲುಗಳನ್ನ ಓಡಿಸಲು ಸಾಕಷ್ಟು ಅಡಚಣೆಯುಂಟಾಗುತ್ತಿತ್ತು. ಅದಕ್ಕಾಗಿಯೇ ಈ ದ್ವಿಪಥ ಯೋಜನೆಗಳನ್ನ 2018-19ರಲ್ಲಿ ಮಂಜೂರು ಮಾಡಲಾಯಿತು. ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು 50-50 ವೆಚ್ಚ ಹಂಚಿಕೆಯಲ್ಲಿ ಕೈಗೊಳ್ಳಲಾಗುತ್ತದೆ.

The post ದ್ವಿಪಥ ಕಾಮಗಾರಿ ಪರಿಶೀಲನೆಯಲ್ಲಿ ಮುಖ್ಯಮಂತ್ರಿಗಳಿಗೆ ಆರ್.ಅಶೋಕ್ ಸಾಥ್ appeared first on Public TV.

Source: publictv.in

Source link