ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​​ ಮುಗಿದಿದೆ. ಈಗ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಜೊತೆಗೆ ವಿಶ್ವ ಕ್ರಿಕೆಟ್ ಅಭಿಮಾನಿಗಳ ಚಿತ್ತ ದ್ವೀಪರಾಷ್ಟ್ರದ ಮೇಲೆ ಬಿದ್ದಿದೆ. ಯುವ ಆಟಗಾರರ ಈ ಪ್ರವಾಸದಲ್ಲಿ ಡೆಬ್ಯೂ ನಿರೀಕ್ಷೆಯಲ್ಲಿರುವ ಐವರು ಯುವ ಆಟಗಾರರು, ಸೆಂಟರ್ ಆಫ್​​ ಅಟ್ರಾಕ್ಷನ್ ಆಗಿದ್ದಾರೆ. ಹಾಗಾದ್ರೆ ಡೆಬ್ಯೂ ನಿರೀಕ್ಷೆಯಲ್ಲಿರುವ ಯುವ ಆಟಗಾರರು ಯಾರು.. ಅಭಿಮಾನಿಗಳ ಗಮನ ಸೆಳೆದಿರೋದು ಯಾಕೆ ಬನ್ನಿ ನೋಡೋಣ.

ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ನಿರಾಸೆಯ ಬಳಿಕ ಕ್ರಿಕೆಟ್ ಅಭಿಮಾನಿಗಳ ಚಿತ್ತ ಶ್ರೀಲಂಕಾ ಸರಣಿಯತ್ತ ನೆಟ್ಟಿದೆ. ಶಿಖರ್ ಧವನ್ ನೇತೃತ್ವದಲ್ಲಿ ಲಂಕಾಗೆ ತೆರಳುತ್ತಿರುವ ಯುವ ಆಟಗಾರರ ತಂಡ​​​, ಸಿಂಹಳೀಯರ ಸಂಹಾರಕ್ಕೆ ಸಜ್ಜಾಗುತ್ತಿದ್ದಾರೆ. ಮೊದಲ ಬಾರಿಗೆ ಕರೆ ಸ್ವೀಕರಿಸಿರುವ ಯಂಗ್​ ಗನ್ಸ್, ಅವಕಾಶಕ್ಕಾಗಿ ಎದುರುನೋಡುತ್ತಿದ್ದಾರೆ. ಅದ್ರಲ್ಲೂ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ವಿದೇಶಕ್ಕೆ ಹಾರುತ್ತಿರುವ ಕಾರಣ ಈ ಸರಣಿ ಮತ್ತಷ್ಟು ಕ್ಯೂರಿಯಸಿಟಿ ಹುಟ್ಟುಹಾಕಿದೆ. ಇದರ ಜೊತೆಗೆ ದೇಶಿ ಕ್ರಿಕೆಟ್​​ನಲ್ಲಿ ಮಿಂಚಿದ್ದ ಈ ಐವರು ಡೆಬ್ಯೂ ಮಾಡೋ ನಿರೀಕ್ಷೆಯಲ್ಲಿದ್ದಾರೆ.

ದೇವದತ್ ಪಡಿಕ್ಕಲ್


ದೇಶಿ ಕ್ರಿಕೆಟ್​ನ ಸೆನ್ಸೇಷನ್ ದೇವದತ್​ ಪಡಿಕ್ಕಲ್. ದೇಶಿ ಕ್ರಿಕೆಟ್​ನಲ್ಲಿ ಮಾತ್ರವಲ್ಲದೆ ಐಪಿಎಲ್​​ನಲ್ಲೂ ಗಮನ ಸೆಳೆದ ಪಡಿಕ್ಕಲ್, ಕರ್ನಾಟಕ ರಾಜ್ಯ ತಂಡದ ರನ್​​ಯಂತ್ರವೇ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಪರ ಕಳೆದೆರೆಡು ವರ್ಷಗಳಿಂದ ಬ್ಯಾಟ್ ಬೀಸುತ್ತಿರುವ ಪಡಿಕ್ಕಲ್, 14ನೇ ಆವೃತ್ತಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ವೈಟ್​ಬಾಲ್ ಕ್ರಿಕೆಟ್​​ನಲ್ಲಿ ಸಾಕಷ್ಟು ಪಳಗಿರುವ ಪಡಿಕ್ಕಲ್​, ಟಿ20, ಏಕದಿನ ಫಾರ್ಮೆಟ್​​ಗೆ ಪರ್ಫೆಕ್ಟ್​ ಪ್ಲೇಯರ್ ಆಗಿದ್ದಾರೆ. ಟೈಮಿಂಗ್ ಆ್ಯಂಡ್​ ಟೆಕ್ನಿಕ್​​ ಬ್ಯಾಟಿಂಗ್​​​​ ಇಂಪ್ರೆಸ್​ ಮಾಡೋದರಲ್ಲಿ ಅನುಮಾನ ಇಲ್ಲ. ಒಂದು ಅವಕಾಶ ಸಿಕ್ಕರೆ, ಖಂಡಿತಾ ಕಮಾಲ್ ಮಾಡೋದು ಪಕ್ಕಾ.

ರುತುರಾಜ್ ಗಾಯಕ್ವಾಡ್

ಚೆನ್ನೈ ಸೂಪರ್ ಕಿಂಗ್ಸ್​ನ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ತನ್ನ ಸ್ಕಿಲ್​​ಫುಲ್ ಬ್ಯಾಟಿಂಗ್ ಮೂಲಕ ಭವಿಷ್ಯದ ಸ್ಟಾರ್ ಆಟಗಾರ ಅಂತಾನೆ ಬಿಂಬಿತರಾಗಿದ್ದಾರೆ. ಪ್ಯೂರ್ ಕ್ಲಾಸ್ ಆ್ಯಂಡ್ ಪರ್ಫೆಕ್ಟ್​ ಟೈಮಿಂಗ್ ಈತನ ಬ್ಯಾಟಿಂಗ್ ಸಕ್ಸಸ್​ ಸಿಕ್ರೇಟ್​ ಆಗಿದೆ. ಪ್ರಸಕ್ತ ಐಪಿಎಲ್ ಟೂರ್ನಿಯ 7 ಪಂದ್ಯಗಳಿಂದ 196 ರನ್ ಗಳಿಸಿರೋ 24 ವರ್ಷದ ಯಂಗ್ ಬ್ಯಾಟ್ಸ್​ಮನ್, ಈಗ ಲಂಕಾ ಸರಣಿ ಎನ್​ಕ್ಯಾಶ್ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಈಗಾಗಲೇ ಭಾರತ ಎ ಪರ ಅಬ್ಬರಿಸಿರುವ ಈತ, ಈಗ ಟೀಮ್ ಇಂಡಿಯಾ ಹಿರಿಯರ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ.

ನಿತೀಶ್​ ರಾಣಾ

ಡೆಲ್ಲಿಯ ಕನ್ಸಿಸ್ಟೆಂಟ್ performer ನಿತೀಶ್ ರಾಣಾ, ಐಪಿಎಲ್​​ನಲ್ಲಿ ಕೆಕೆಆರ್​ನ ನಂಬಿಕಸ್ಥ ಬ್ಯಾಟ್ಸ್​ಮನ್​​​ ಆಗಿರುವ ರಾಣಾ, ಸ್ಟಾರ್ ಬ್ಯಾಟ್ಸ್​ಮನ್​ ಸಹ ಹೌದು. ವೈಟ್​​ಬಾಲ್ ಕ್ರಿಕೆಟ್​ನ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್ ಆಗಿರುವ ರಾಣಾ, ಪ್ರಸಕ್ತ ವರ್ಷದ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್​​ ರೈಡರ್ಸ್​ನ ಟಾಪ್ ಸ್ಕೋರರ್ ಆಗಿದ್ದಾರೆ. ಕೆಲ ವರ್ಷಗಳಿಂದ ಈತ ಕಾಯ್ದುಕೊಂಡಿರುವ ಕನ್ಸಿಸ್ಟೆನ್ಸಿ ಪ್ರದರ್ಶನವೇ ಟೀಮ್ ಇಂಡಿಯಾ ಬಾಗಿಲು ಬಡಿದಿದೆ. 2021ರ ವಿಜಯ್​ ಹಜಾರೆ ಟೂರ್ನಿಯಲ್ಲಿ 398 ರನ್​ಗಳಿಸಿರುವ ರಾಣಾ, ಸದ್ಯ ಉತ್ತಮ ಫಾರ್ಮ್​ನಲ್ಲಿದ್ದು ಡೆಬ್ಯು ಕನಸಿನಲ್ಲಿದ್ದಾರೆ.

ಚೇತನ್ ಸಕಾರಿಯಾ

ಐಪಿಎಲ್ ಸೀಸನ್​​ನ ಮೊದಲ ಪಂದ್ಯದಲ್ಲಿ ಸೆನ್ಸೇಷನ್ ಕ್ರಿಯೆಟ್​ ಮಾಡಿದ ಆಟಗಾರ ಚೇತನ್ ಸಕಾರಿಯಾ, ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದ ಸೌರಾಷ್ಟ್ರದ ಈ ಯಂಗ್ ಪೇಸರ್​. ಅಂದೇ ಕಠಿಣ ವೈಯಕ್ತಿಯ ನೋವಿನ ನಡುವೆ ಉತ್ತಮ ಪ್ರದರ್ಶನ ನೀಡಿ ಎಲ್ಲರ ಹೃದಯ ಗೆದ್ದಿದ್ದ. ರಾಜಸ್ಥಾನ್ ರಾಯಲ್ಸ್​ ತಂಡದ ನಿರ್ಣಾಯಕ ಡೆತ್ ಬೌಲರ್ ಎನಿಸಿಕೊಂಡ. ಅಷ್ಟೇ ಅಲ್ಲ. ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲೂ 4.90ರ ಏಕಾನಮಿಯಲ್ಲಿ ಬೌಲಿಂಗ್ ಮಾಡಿದ್ದ ಈ ಎಡಗೈ ವೇಗಿ, ಆಡಿದ 5 ಪಂದ್ಯಗಳಿಂದ 12 ವಿಕೆಟ್ ಉರುಳಿಸಿದ್ದಾರೆ. ನಂತರ ಐಪಿಎಲ್​​ನಲ್ಲಿ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡಿರುವ ಸಕಾರಿಯಾ, ಲಂಕಾ ಸರಣಿಯಲ್ಲಿ ಎಡಗೈ ವೇಗಿಯಾಗಿ ತಂಡಕ್ಕೆ ಪಾದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆ ಇದೆ.

ವರುಣ್ ಚಕ್ರವರ್ತಿ

ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಪ್ರಯೋಗಾತ್ಮಕ ಎಸೆತಗಳಿಂದ ಐಪಿಎಲ್​​ನಲ್ಲಿ ಛಾಪು ಮೂಡಿಸಿದ ಆಟಗಾರ.! 2020ರ ಐಪಿಎಲ್​​​ನಲ್ಲೇ ಮಿಸ್ಟ್ರಿ ಎಸೆತಗಳಿಂದ ಸೂಪರ್​ ಸ್ಟಾರ್​ ಆಟಗಾರರ ನಿದ್ದೆ ಗೆಡಿಸಿದ್ದ ವರುಣ್​ ಚಕ್ರವರ್ತಿ. ಅದೇ ವರ್ಷ ಆಸ್ಟ್ರೇಲಿಯಾ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿದ್ದರು. ಆದ್ರೆ, shoulder ಇಂಜುರಿ ಪರಿಣಾಮ ತಂಡದಿಂದ ಅವಕಾಶ ವಂಚಿತರಾಗಿದ್ದರು. ನಂತರದ ಇಂಗ್ಲೆಂಡ್​ ಸರಣಿ ವೇಳೆ ಫಿಟ್ನೆಸ್​ ಟೆಸ್ಟ್​ನಲ್ಲಿ ಫೇಲ್​ ಆಗಿದ್ದ ವರುಣ್, ತಂಡದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾಗಿದ್ದರು.. ಆದ್ರೀಗ ಶ್ರೀಲಂಕಾ ಪ್ರವಾಸದಲ್ಲಿ ಸ್ಥಾನ ಗಿಟ್ಟಿಸುವಲ್ಲಿ ವರುಣ್ ಚಕ್ರವರ್ತಿ, ಪ್ರೇಮದಾಸ ಅಂಗಳದಲ್ಲಿ ಲಂಕನ್ನರಿಗೆ ಕಂಟಕ ಆಗೋದು ಗ್ಯಾರಂಟಿ.. ಇನ್ನೂ ಲಂಕಾ ಹವಾಮಾನದ ಲಾಭ ಪಡೆದು ಮಿಂಚುವ ಭರವಸೆ ಇದೆ.

ಇಷ್ಟೇ ಅಲ್ಲ, ಕರ್ನಾಟಕದ ಕೃಷ್ಣಪ್ಪ ಗೌತಮ್​ ಕೂಡ, ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಆಲ್​ರೌಂಡರ್​ ಆಗಿ ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಗೌತಮ್​​ ಕೂಡ, ಡೆಬ್ಯೂ ಕನಸಿನ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಿನಲ್ಲಿ ಲಂಕಾ ಸರಣಿಯಲ್ಲಿ ದೇಶಿ ಕ್ರಿಕೆಟ್​ ಹಾಗೂ ಐಪಿಎಲ್​​ನಲ್ಲಿ ಕಮಾಲ್ ಮಾಡಿರೋ ಯಂಗ್ ಡೈನಾಮಿಕ್ ಆಟಗಾರರ ದಂಡೇ ಇದ್ದು, ಈ ಪೈಕಿ ಈ ಐವರು ಆಟಗಾರರ ಡೆಬ್ಯೂ ಹಾಗೂ ಆಟದ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿರೋದು ಸುಳ್ಳಲ್ಲ.

The post ದ್ವೀಪರಾಷ್ಟ್ರದ ಸರಣಿಗೆ ಯಂಗ್ ಟೈಗರ್ಸ್ ಸಜ್ಜು -ಲಂಕಾದಲ್ಲಿ ಘರ್ಜಿಸಲು ಕನ್ನಡಿಗ ಗೌತಮ್, ಪಡಿಕ್ಕಲ್ ತಯಾರಿ appeared first on News First Kannada.

Source: newsfirstlive.com

Source link