ದ್ವೇಷ ಭಾಷಣ ಪ್ರಕರಣ: ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಕೋಮು ದ್ವೇಷ ಸಹಿಸುವುದಿಲ್ಲ ಎಂದ ಪಿಣರಾಯಿ ವಿಜಯನ್ | Hate speech case PC George sent to judicial custody communal hatred will not be tolerated says Pinarayi Vijayan


ದ್ವೇಷ ಭಾಷಣ ಪ್ರಕರಣ: ಕೇರಳದ ಮಾಜಿ ಶಾಸಕ ಪಿಸಿ ಜಾರ್ಜ್​ಗೆ 14 ದಿನಗಳ ನ್ಯಾಯಾಂಗ ಬಂಧನ; ಕೋಮು ದ್ವೇಷ ಸಹಿಸುವುದಿಲ್ಲ ಎಂದ ಪಿಣರಾಯಿ ವಿಜಯನ್

ಪಿಸಿ ಜಾರ್ಜ್ – ಪಿಣರಾಯಿ ವಿಜಯನ್

ಏಪ್ರಿಲ್ 29ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾರ್ಜ್ ಮುಸ್ಲಿಮರು ನಡೆಸುವ ಹೋಟೆಲ್​​ನಿಂದ ಆಹಾರ ಸೇವಿಸಬೇಡಿ. ಮುಸ್ಲಿಮರು ಚಹಾದಲ್ಲಿ ಹನಿ ಮದ್ದನ್ನು ಕಲಕಿ ಕೊಡುತ್ತಿದ್ದು…

ತಿರುವನಂತಪುರಂ: ದ್ವೇಷ ಭಾಷಣ (Hate speech) ಪ್ರಕರಣದಲ್ಲಿ ಕೇರಳ ಜನಪಕ್ಷಂ (ಸೆಕ್ಯುಲರ್) (Kerala Janapaksham Secular) ನಾಯಕ ಪಿಸಿ ಜಾರ್ಜ್ (PC George) ಅವರಿಗೆ ಗುರುವಾರ ತಿರುವನಂತಪುರಂ ಮೆಜಿಸ್ಟ್ರೇಟ್ 14 ದಿನಗಳ  ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಬೆಳಗ್ಗೆ ಜಾರ್ಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 29ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಾರ್ಜ್ ಮುಸ್ಲಿಮರು ನಡೆಸುವ ಹೋಟೆಲ್​​ನಿಂದ ಆಹಾರ ಸೇವಿಸಬೇಡಿ. ಮುಸ್ಲಿಮರು ಚಹಾದಲ್ಲಿ ಹನಿ ಮದ್ದನ್ನು ಕಲಕಿ ಕೊಡುತ್ತಿದ್ದು ಇದು ಸಂತಾನಶಕ್ತಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಮುಸ್ಲಿಮರ ಸಂಖ್ಯೆ ಹೆಚ್ಚು ಮಾಡುವುದಕ್ಕಾಗಿ ಅವರು ಮುಸ್ಲಿಮೇತರರಿಗೆ ಈ ರೀತಿ ಮಾಡುತ್ತಿದ್ದಾರೆ ಎಂದಿದ್ದರು. ಅದೇ ವೇಳೆ ಹಿಂದೂ ಮತ್ತು ಕ್ರೈಸ್ತರು ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಮನವಿ ಮಾಡಿದ್ದರು ಜಾರ್ಜ್. 70 ವರ್ಷದ ಹರೆಯದ ಜಾರ್ಜ್ ಅವರನ್ನು ಏಪ್ರಿಲ್ 30 ರಂದು ಮೊದಲು ಬಂಧಿಸಲಾಯಿತು. ಮೇ 1 ರಂದು ತಿರುವನಂತಪುರಂ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು, ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬುಧವಾರ ಅವರ ಜಾಮೀನನ್ನು ರದ್ದುಗೊಳಿಸಿತು. ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಕೇರಳ ಪೊಲೀಸರು, ಜಾರ್ಜ್ ಮೇ 8 ರಂದು ಕೊಚ್ಚಿಯಲ್ಲಿ ಮತ್ತೆ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದಾರೆ.

ಗುರುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಪ್ರಾಸಿಕ್ಯೂಷನ್ ಸಲ್ಲಿಸಿದ ಮೇ 8 ರ ಕಾರ್ಯಕ್ರಮದ ವಿಡಿಯೊ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದ ನಂತರ ಪಿಸಿ ಜಾರ್ಜ್ ಅನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಈ ಹಿಂದೆ ಮಾಜಿ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ನ ವಾದವನ್ನು ಆಲಿಸಿಲ್ಲ ಎಂದು ಕೇರಳ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.ನ್ಯಾಯಾಲಯದ ಆದೇಶದ ನಂತರ, ಜಾರ್ಜ್ ಅವರನ್ನು ಪೂಜಾಪ್ಪುರ ಪ್ರದೇಶದಲ್ಲಿರುವ ತಿರುವನಂತಪುರಂ ಜಿಲ್ಲಾ ಸಬ್ ಜೈಲಿಗೆ ಕರೆದೊಯ್ಯಲಾಯಿತು.

ಕೋಮು ದ್ವೇಷವನ್ನು ಸಹಿಸುವುದಿಲ್ಲ: ಪಿಣರಾಯಿ ವಿಜಯನ್

ಕೊಚ್ಚಿ: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣಗಳಲ್ಲಿ ರಿಮಾಂಡ್‌ನಲ್ಲಿರುವ ಜನಪಕ್ಷದ ನಾಯಕ ಪಿಸಿ ಜಾರ್ಜ್ ಅವರನ್ನು ‘ರಕ್ಷಿಸುತ್ತಿರುವ’ ರಾಜ್ಯ ಬಿಜೆಪಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಟೀಕಿಸಿದ್ದಾರೆ. ಕಾಕ್ಕನಾಡಿನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದ ಪಿಣರಾಯಿ, ಜಾರ್ಜ್ ಕೋಮು ವಿಷವನ್ನು ಉಗುಳುತ್ತಿದ್ದಾರೆ. ಬಿಜೆಪಿ ಅವರನ್ನು ರಕ್ಷಿಸುತ್ತಿದೆ. ಬಿಜೆಪಿ ಕುರಿಯ ಅಂಗಿತೊಟ್ಟ ತೋಳ. ಕ್ರಿಶ್ಚಿಯನ್ನರನ್ನು ರಕ್ಷಿಸಲು ಜಾರ್ಜ್‌ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ.ಆದರೆ ಕೇರಳದ ಕ್ರಿಶ್ಚಿಯನ್ನರು ಅವರ ನಕಲಿ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *