ಸೌತ್ ಆಫ್ರಿಕಾದಲ್ಲಿ ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಗಿದ್ದೇನು? ಈ ಪ್ರಶ್ನೆ ತೀವ್ರ ಚರ್ಚೆಯಲ್ಲಿದೆ. ಅದಕ್ಕೆ ಈ ಇಬ್ಬರ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಯ್ತು ಎಂಬ ಉತ್ತರ ಕೇಳಿ ಬರ್ತಿದೆ. ಹಾಗಾದ್ರೆ, ಆ ಇಬ್ಬರು ಆಟಗಾರರು ಯಾರು? ಅವರಿಬ್ಬರಿದ್ದಿದ್ರೆ ತಂಡಕ್ಕೆ ಲಾಭವಾಗ್ತಿತ್ತಾ?
ಇಂಡೋ-ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಅಂತ್ಯ ಕಂಡಿದೆ. ಫಲಿತಾಂಶದ ಹೊರತಾಗಿ ಟೀಮ್ ಇಂಡಿಯಾ ಯಾವೆಲ್ಲ ವಿಭಾಗಗಳಲ್ಲಿ ಹಿನ್ನಡೆ ಅನುಭವಿಸಿತು ಎಂಬ ವಿಚಾರ ಚರ್ಚೆಯಲ್ಲಿದೆ. ಅದರಲ್ಲೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಅಲಭ್ಯತೆ ತಂಡವನ್ನ ಕಾಡಿತು ಅನ್ನೋದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಟೀಮ್ ಇಂಡಿಯಾಗೆ ಸಿಗಲೇ ಇಲ್ಲ ಕನ್ಸಿಸ್ಟೆಂಟ್ ಓಪನಿಂಗ್
ಸೌತ್ ಆಫ್ರಿಕಾಗೆ ತೆರಳೋಕೆ ಒಂದು ದಿನ ಮುಂಚೆ ಒಪನರ್ ರೋಹಿತ್ ಶರ್ಮಾ ಇಂಜುರಿಗೆ ತುತ್ತಾದ್ರು. ಪರಿಣಾಮ ಆಫ್ರಿಕನ್ ನಾಡಲ್ಲಿ ರಾಹುಲ್ ಜೊತೆಗೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಬೇಕಾದ ಅನಿವಾರ್ಯತೆ ಎದುರಾಯ್ತು. ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಈ ಜೋಡಿ ಭರವಸೆಯ ಆಟವನ್ನೇ ಆಡಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಕನ್ಸಿಸ್ಟೆಂಟ್ ಓಪನಿಂಗ್ ಸಿಗಲೇ ಇಲ್ಲ. ಉತ್ತಮ ಆರಂಭವೇ ಸಿಗದೇ ಇದ್ದದ್ದು, ತಂಡಕ್ಕೆ ಹಿನ್ನಡೆಯಾಯ್ತು.
ಸ್ಪಿನ್ ಆಲ್ರೌಂಡರ್ ಆಗಿ ಬೇಕಿತ್ತು ರವೀಂದ್ರ ಜಡೇಜಾ
ಸ್ಪಿನ್ ಆಲ್ರೌಂಡರ್ ಕೋಟಾದಲ್ಲಿ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್, ಇಂಪ್ಯಾಕ್ಟ್ಫುಲ್ ಪ್ರದರ್ಶನ ನೀಡಲೇ ಇಲ್ಲ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅಶ್ವಿನ್ ಸಾಮರ್ಥ್ಯಕ್ಕೆ ತಕ್ಕ ಕೊಡುಗೆ ನೀಡುವಲ್ಲಿ ವಿಫಲರಾದ್ರು. ವಿದೇಶಿ ಪಿಚ್ಗಳಲ್ಲಿ ಅಶ್ವಿನ್ಗಿಂತ ಎಫೆಕ್ಟೀವ್ ಆಗಿದ್ದ ರವೀಂದ್ರ ಜಡೇಜಾ ತಂಡದಲ್ಲಿದ್ರೆ, ಭಾರತದ ಬಲ ಹೆಚ್ಚುತ್ತಿತ್ತು ಅನ್ನೋದು ಎಕ್ಸ್ಫರ್ಟ್ಗಳ ಮಾತಾಗಿದೆ. ವಿದೇಶಿ ಪಿಚ್ಗಳಲ್ಲಿ 30.26 ಬ್ಯಾಟಿಂಗ್ ಸರಾಸರಿಯನ್ನ ಜಡೇಜಾ ಹೊಂದಿದ್ದಾರೆ. ಜೊತೆಗೆ ಸೌತ್ ಆಫ್ರಿಕಾ ಬ್ಯಾಟಿಂಗ್ ಲೈನ್ ಅಪ್ನಲ್ಲಿ ಹೆಚ್ಚು ರೈಟ್ ಹ್ಯಾಂಡೆಡ್ ಬ್ಯಾಟ್ಸ್ಮನ್ಗಳಿರೋದ್ರಿಂದ ಲೆಫ್ಟ್ ಆರ್ಮ್ ಸ್ಪಿನ್ನರ್ ಜಡ್ಡು ಜಾದೂ ಮಾಡ್ತಿದ್ರು ಅನ್ನೋದು ಹಲವರ ಅಭಿಪ್ರಾಯವಾಗಿದೆ.
ಒಂದು ವೇಳೆ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗದೇ ಇದ್ದಿದ್ರೆ, ತಂಡದಲ್ಲಿರುತ್ತಿದ್ರು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ವಿದೇಶಿ ನೆಲದಲ್ಲಿ ಈ ಇಬ್ಬರು ನೀಡಿರುವ ಪ್ರದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ. ಒಂದು ಇಂಜುರಿ ಆಟಗಾರನ ಭವಿಷ್ಯಕ್ಕೆ ಎಷ್ಟು ಕುತ್ತು ತರುತ್ತೋ. ಅಷ್ಟೇ ಹಿನ್ನಡೆಯನ್ನ ತಂಡಕ್ಕೂ ಉಂಟು ಮಾಡುತ್ತೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಪಲ್.