ಟೆಸ್ಟ್ ಸರಣಿ ಬಳಿಕ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಸವಾಲು ಸ್ವೀಕರಿಸಿಲಿದೆ. ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರರಂತೂ ಕಣಕ್ಕಿಳಿಯೋ ಉಮೇದಿಯಲ್ಲಿದ್ದಾರೆ. ಆದ್ರೆ, ಆಡೋ ಕನವರಿಕೆಯಲ್ಲಿರೋ ಕೆಲ ಆಟಗಾರರು ಸರಣಿಯುದ್ದಕ್ಕೂ ಬೆಂಚ್ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇಪ್ಟೌನ್ ಟೆಸ್ಟ್ ಗೆಲುವಿಗಾಗಿ ಟೀಮ್ ಇಂಡಿಯಾ ತೀವ್ರ ಹೋರಾಟ ನಡೆಸ್ತಿದೆ. ಈ ಮೂಲಕ ಐತಿಹಾಸಿಕ ಸರಣಿ ಗೆಲುವನ್ನ ಎದುರು ನೋಡ್ತಿದೆ. ಅತ್ತ ಏಕದಿನ ಸರಣಿಗಾಗಿ ಟೆಸ್ಟ್ ತಂಡದಲ್ಲಿ ಇಲ್ಲದ ಆಟಗಾರರು, ಆಫ್ರಿಕಾ ನಾಡಿಗೆ ಬಂದಿಳಿದಿದ್ದು, ಕ್ವಾರಂಟೀನ್ನಲ್ಲಿ ಬಂಧಿಯಾಗಿದ್ದಾರೆ. ಆಯ್ಕೆಯಾಗಿರುವ ತಂಡದಲ್ಲಿ ಯುವ ಆಟಗಾರರೇ ತುಂಬಿದ್ದು, ಯಾರಿಗೆಲ್ಲಾ ಅವಕಾಶ ಸಿಗುತ್ತೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.
ಜನವರಿ 19 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗುತ್ತೆ. ಆದ್ರೆ ಈ ಸರಣಿಗೆ ಅವಕಾಶ ಪಡೆದಿರೋ ಯಂಗ್ ಪ್ಲೇಯರ್ಸ್ ಆಲ್ಮೋಸ್ಟ್ ಬೆಂಚ್ ಸೀಮಿತವಾಗೋದು ಕನ್ಫರ್ಮ್ ಆಗಿದೆ. IPL, ದೇಶೀಯ ಟೂರ್ನಿಗಳಲ್ಲಿ ಸೆನ್ಸೇಷನ್ ಹುಟ್ಟು ಹಾಕಿದ ಋತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಕೂಡ ಈ ಸರಣಿಯಲ್ಲಿ ಒಂದೂ ಪಂದ್ಯವನ್ನ ಆಡದೆಯೇ ತವರಿಗೆ ವಾಪಸ್ ಆಗುವ ಸಾಧ್ಯತೆಯೇ ಹೆಚ್ಚಿದೆ.
ಋತುರಾಜ್ ಗಾಯಕ್ವಾಡ್ಗೆ ಯಾಕೆ ಚಾನ್ಸ್ ಸಿಗಲ್ಲ..?
ಋತುರಾಜ್ಗೆ ಆಡುವ 11ರ ಬಳಗದಲ್ಲಿ ಸ್ಥಾನವೇ ಸಿಗೋದಿಲ್ಲ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲೂ ಗಾಯಕ್ವಾಡ್ ಹೊರಗುಳಿಯುವುದು ಖಚಿತ. ಯಾಕೆಂದ್ರೆ ನಾಯಕ KL ರಾಹುಲ್ ಜೊತೆಗೆ ಅನುಭವಿ ಶಿಖರ್ ಧವನ್ ಇನ್ನಿಂಗ್ಸ್ ಆರಂಭಿಸೋ ಸಾಧ್ಯತೆ ದಟ್ಟವಾಗಿದೆ. ಓಪನರ್ ಸ್ಥಾನಕ್ಕೆ ಧವನ್ ಫಸ್ಟ್ ಆಯ್ಕೆಯಾಗಿರೋ ಕಾರಣ, ಋತುರಾಜ್ ಬೆಂಚ್ಗೆ ಫಿಕ್ಸ್ ಆಗಲಿದ್ದಾರೆ. ಒಂದು ವೇಳೆ ಧವನ್ ವೈಫಲ್ಯ ಅಥವಾ ಇಂಜುರಿಗೆ ತುತ್ತಾದ್ರೆ ಮಾತ್ರ ಗಾಯಕ್ವಾಡ್ಗೆ ಚಾನ್ಸ್ ಸಿಗುತ್ತದೆ.
ಆಲ್ರೌಂಡರ್ ಸ್ಥಾನಕ್ಕೆ ಶಾರ್ದೂಲ್ ಫಿಕ್ಸ್, ವೆಂಕಟೇಶ್ ಡೌಟ್
ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ಬೆಂಚ್ ವಾರ್ಮ್ ಮಾಡೋ ಸಾಧ್ಯತೆ ಹೆಚ್ಚಿದೆ. ಶಾರ್ದೂಲ್ ಠಾಕೂರ್ ತಂಡದಲ್ಲಿರುವ ಕಾರಣ, ವೆಂಕಟೇಶ್ಗೆ ಪದಾರ್ಪಣೆ ಮಾಡುವ ಅವಕಾಶವೇ ಇಲ್ಲವಾಗಿದೆ. ಈಗಾಗಲೇ ಶಾರ್ದೂಲ್ ಟೆಸ್ಟ್ ಮತ್ತು ಏಕದಿನದಲ್ಲೂ ಸಾಮರ್ಥ್ಯ ಸಾಬೀತುಪಡಿಸಿ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಆಡೋದು ಬಹುತೇಕ ಖಚಿತವಾಗಿದೆ. ಒಂದು ವೇಳೆ ವೆಂಕಟೇಶ್ಗೆ ಅವಕಾಶ ಸಿಕ್ಕರೂ ಅದು ಅಚ್ಚರಿಯ ಆಯ್ಕೆಯಾಗಬೇಕಷ್ಟೇ.
ಎಲ್ಲರಿಗೂ ಪ್ಲೇಯಿಂಗ್-XIನಲ್ಲಿ ಚಾನ್ಸ್ ನೀಡೋದಕ್ಕೆ ಸಾಧ್ಯವಾಗಲ್ಲ ಅನ್ನೋದಂತೂ ಸತ್ಯ. ಹೀಗಾಗಿ ಗಾಯಕ್ವಾಡ್, ವೆಂಕಟೇಶ್ ಜೊತೆಗೆ ಇನ್ನೂ ಹಲವು ಆಟಗಾರರು ಸರಣಿಯಲ್ಲಿ ಬೆಂಚ್ ಕಾಯಬೇಕಿದೆ.