ಕಾಲಿವುಡ್ ತಲೈವಾ ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ತಮಿಳು ನಟ ಧನುಷ್ ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇನ್ನು ಐಶ್ವರ್ಯಾ ಹಾಗೂ ಧನುಷ್ ಬೇರೆ ಬೇರೆಯಾಗಲು ನಿರ್ಧರಿಸಿದ್ದು ಯಾಕೆ? ಇಬ್ಬರ ಮಧ್ಯೆ ಬಿರುಕು ಮೂಡಿದ್ದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಇನ್ನು ತಿಳಿದಿಲ್ಲ.
ಇದೆಲ್ಲದರ ನಡುವೆ ಐಶ್ವರ್ಯಾ ಧನುಷ್ ಡಿರ್ವೋಸ್ ಸುದ್ದಿ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದೆ. ಧನುಷ್ ಹಾಗೂ ಐಶ್ವರ್ಯಾ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ 2004 ನವೆಂಬರ್ 18 ಮದುವೆಯಾದವರು. ಆದರೆ ಈ ಜೋಡಿ ಮದುವೆಯಾಗುವ ವೇಳೆ ಐಶ್ವರ್ಯಾಗೆ 23 ವರ್ಷ ಹಾಗೂ ಧನುಷ್ಗೆ ಕೇವಲ 21 ವರ್ಷ ವಯಸ್ಸಾಗಿತ್ತು.