ಧನುಷ್​, ಐಶ್ವರ್ಯಾ ಡಿವೋರ್ಸ್​ ಬೆನ್ನಲ್ಲೇ ವೈರಲ್ ಆಗ್ತಿರೋ ವಿಡಿಯೋ ಕಂಡು ಅಭಿಮಾನಿಗಳು ಭಾವುಕ


ಕಾಲಿವುಡ್​ ತಲೈವಾ ರಜನಿಕಾಂತ್​ ಪುತ್ರಿ ಐಶ್ವರ್ಯ ಹಾಗೂ ತಮಿಳು ನಟ ಧನುಷ್​ ಅವರು ತಮ್ಮ 18 ವರ್ಷಗಳ ಸುಖ ಸಂಸಾರಕ್ಕೆ ಅಂತ್ಯ ಹಾಡಿದ್ದಾರೆ. ಆದರೆ ಇಬ್ಬರ ಮಧ್ಯೆ ಯಾವ ಕಾರಣಕ್ಕಾಗಿ ಬಿರುಕು ಮೂಡಿದೆ ಎಂಬುದರ ಬಗ್ಗೆ ಮಾಹಿತಿ ಇನೂ ಲಭ್ಯವಾಗಿಲ್ಲ.

ಸೋಶಿಯಲ್ ಮೀಡಿಯಾ ಮೂಲಕ ಧನುಷ್​ ಹಾಗೂ ಐಶ್ವರ್ಯಾ ತಮ್ಮ ಡಿವೋರ್ಸ್​ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ಐಶ್ವರ್ಯಾ, ಧನುಷ್​ ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಇನ್ನು ಧನುಷ್​ ಅವರ ಕೆಲ ಫ್ಯಾನ್​ ಪೇಜ್​ಗಳು ಐಶ್ವರ್ಯಾ ಹಾಗೂ ಧನುಷ್​ ಅವರ ಕೆಲವು ಸುಂದರ ಕ್ಷಣಗಳ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ಪೈಕಿ ಒಂದು ವಿಡಿಯೋ ಕೆಲ ದಿನಗಳ ಹಿಂದೆಯಷ್ಟೇ ರೆಕಾರ್ಡ್​ ಮಾಡಲಾಗಿದ್ದು. ಆದರಲ್ಲಿ ಧನುಷ್​ ತಮ್ಮ ಪತ್ನಿ ಐಶ್ವರ್ಯಾಗಾಗಿ ತಮ್ಮ ಮಾವ ರಜನಿಕಾಂತ್​ ಅವರ ಪೇಟಾ ಚಿತ್ರದ ಹಾಡನ್ನು ಹಾಡುತ್ತ ಬಂದು ಐಶ್ವರ್ಯಾ ಅವರನ್ನು ಅಪ್ಪಿಕೊಳ್ಳುತ್ತಾರೆ. ಈ ವೇಳೆ ಐಶ್ವರ್ಯ ನಾಚಿ ನೀರಾಗುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇಷ್ಟೊಂದು ಅನ್ಯೋನ್ಯವಾಗಿದ್ದ ಜೋಡಿ ಯಾಕೆ ದೂರಾಗಿದ್ದಾರೆ ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *