ಧನುಷ್-ಐಶ್ವರ್ಯಾ ನಡುವೆ ಹೈದರಾಬಾದ್​ನಲ್ಲಿ ನಡೆದಿದ್ದೇನು? ಇಲ್ಲಿದೆ ಇನ್ಸೈಡ್​ ಮಾಹಿತಿ | Here what happend between Dhanush and Aishwarya Rajinikanth in in Hyderbad


ಧನುಷ್-ಐಶ್ವರ್ಯಾ ನಡುವೆ ಹೈದರಾಬಾದ್​ನಲ್ಲಿ ನಡೆದಿದ್ದೇನು? ಇಲ್ಲಿದೆ ಇನ್ಸೈಡ್​ ಮಾಹಿತಿ

ಧನುಷ್​-ಐಶ್ವರ್ಯಾ

ಧನುಷ್​ (Dhanush) ಹಾಗೂ ಐಶ್ವರ್ಯಾ (Aishwarya Rajinikanth) ನಡುವಣ 18 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇದು ಅವರ ಅಭಿಮಾನಿಗಳಿಗೆ ಶಾಕ್​ ನೀಡಿದೆ. ಧನುಷ್​ ಹಾಗೂ ಐಶ್ವರ್ಯಾ ನಡುವೆ ಯಾವ ವಿಚಾರಕ್ಕೆ ವೈಮನಸ್ಸು ಮೂಡಿತು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಹೈದರಾಬಾದ್​ನಲ್ಲಿ ನಡೆದ ಘಟನೆಯೊಂದರ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಧನುಷ್​ ಹಾಗೂ ಐಶ್ವರ್ಯಾ ದಾಂಪತ್ಯ ಮುರಿದು ಬೀಳಲು ಅಲ್ಲಿ ನಡೆದ ಘಟನೆ ಪ್ರಮುಖ ಕಾರಣವಾಯಿತು ಎನ್ನುವ ಮಾತು ಕೇಳಿ ಬಂದಿದೆ.

2004ರ ನವೆಂಬರ್ 18ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ದಂಪತಿ ವಿಚ್ಛೇದನ ಘೋಷಿಸಿರುವುದು ಅವರ ಅಭಿಮಾನಿಗಳಿಗೆ ನೋವು ತರಿಸಿದೆ. ವಿಶೇಷ ಎಂದರೆ, ಐಶ್ವರ್ಯಾ ಹಾಗೂ ಧನುಷ್​ ಅವರದ್ದು ಪ್ರೇಮ ವಿವಾಹ. 21ನೇ ವಯಸ್ಸಿಗೆ ಐಶ್ವರ್ಯಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು ಧನುಷ್​. 18 ವರ್ಷಗಳ ಕಾಲ ದಾಂಪತ್ಯ ನಡೆಸಿದ ಇಬ್ಬರೂ ಈಗ ಬೇರೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ತರಿಸಿದೆ.

ಕೆಲಸದ ನಿಮಿತ್ತ ಇಬ್ಬರೂ ಹೈದರಾಬಾದ್​ನಲ್ಲಿ ಇದ್ದಾರೆ. ಹೈದರಾಬಾದ್​ನಲ್ಲಿ ಇಬ್ಬರ ನಡುವೆ ಯಾವುದೋ ಒಂದು ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಜಗಳ ಏರ್ಪಟ್ಟಿದೆ ಎನ್ನಲಾಗಿದೆ. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಧನುಷ್​ ನಟನೆಯ ‘3’ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್​ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರ ತೆರೆಗೆ ಬಂದ ನಂತರದಲ್ಲಿ ಇಬ್ಬರೂ ಬೇರೆ ಆಗುತ್ತಾರೆ ಎನ್ನುವ ವದಂತಿ ಹುಟ್ಟಿಕೊಂಡಿತ್ತು. ಆದರೆ, ಅದು ನಿಜವಾಗಿರಲಿಲ್ಲ. ಈ ಸಿನಿಮಾ ತೆರೆಕಂಡು ಸುಮಾರು 10 ವರ್ಷಗಳ ನಂತರದಲ್ಲಿ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವು ವರದಿಗಳ ಪ್ರಕಾರ ಇಬ್ಬರ ನಡುವೆ ಹಲವು ವರ್ಷಗಳಿಂದ ಕಿತ್ತಾಟ ನಡೆದೇ ಇತ್ತು ಎನ್ನಲಾಗಿದೆ. ಈಗ ಇಬ್ಬರೂ ಒಟ್ಟಾಗಿ ಬೇರೆ ಆಗುವ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.

TV9 Kannada


Leave a Reply

Your email address will not be published. Required fields are marked *