ಧನುಷ್-ಐಶ್ವರ್ಯ ಮಧ್ಯೆ ‘ಪ್ರೇಮಾಂಕುರ’ ಆಗಿದ್ದು ಹೇಗೆ..? ಮೊದಲ ಭೇಟಿ ಹೇಗಿತ್ತು..?


ಕಾಲಿವುಡ್​ ಸೂಪರ್ ಸ್ಟಾರ್​ ರಜಿನಿ ಕಾಂತ್​ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್​ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ್ದಾರೆ. ಆದರೆ ಐಶರ್ಯ ಹಾಗೂ ಧನುಷ್​ ಬೇರೆ ಬೇರೆಯಾಗಲು ನಿರ್ಧರಿಸಿದ್ದು ಯಾಕೆ? ಇಬ್ಬರ ಮಧ್ಯೆ ಬಿರುಕು ಮೂಡಿದ್ದು ಹೇಗೆ..? ಎಂಬುದರ ಬಗ್ಗೆ ಮಾಹಿತಿ ಇನ್ನೂ ತಿಳಿದಿಲ್ಲ.

ಐಶ್ವರ್ಯಾ ಧನುಷ್​ ಡಿರ್ವೋಸ್​ ಸುದ್ದಿ ಆವರ ಅಭಿಮಾನಿಗಳಿಗೆ ದೊಡ್ಡ ಶಾಕ್​ ಆಗಿರೋದಂತೂ ಸುಳ್ಳಲ್ಲ. ಅಂದ್ಹಾಗೆ ಐಶ್ವರ್ಯಾ ಹಾಗೂ ಧನುಷ್​ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾವರು. ಇವರಿಬ್ಬರೂ ಮೊದಲು ಭೇಟೆಯಾಗಿದ್ದು ಎಲ್ಲಿ ಹಾಗೂ ಇವರ ಮಧ್ಯೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಧನುಷ್​ ಅಭಿನಯದ ಎರಡನೇ ಸಿನಿಮಾ ‘ಕಾದಲ್ ಕೊಂಡೇನ್’ ಚಿತ್ರದ ಫಸ್ಟ್​ ಡೇ ಫಸ್ಟ್​ ಶೋ ನೋಡಲು ಇಡೀ ಚಿತ್ರತಂಡ ಥಿಯೇಟರ್​ಗೆ ಹೊಗಿತ್ತು. ಆಗ ಈ ಸಿನಿಮಾ ನೋಡಲು ರಜಿನಿಕಾಂತ್​ ಅವರ ಇಬ್ಬರೂ ಪುತ್ರಿಯರು ಕೂಡ ಅದೇ ಥಿಯೇಟರ್​ಗೆ ಹೋಗಿದ್ದರು. ಸಿನಿಮಾ ಮುಗಿದ ನಂತರ ಇನ್ನೇನು ಥಿಯೇಟರ್​ನಿಂದ ಹೊರಡುವಾಗ ಚಿತ್ರಮಂದಿರದ ಮಾಲೀಕರು ಧನುಷ್​ ಅವರಿಗೆ ‘ಇವರು ರಜನಿಕಾಂತ್ ಅವರ ಪುತ್ರಿಯರು’ ಅಂತ ಹೇಳಿ ಐಶ್ವರ್ಯ ಮತ್ತು ಸೌಂದರ್ಯ ಅವರನ್ನು ಪರಿಚಯ ಮಾಡಿಸಿದ್ದರು. ಇದಾದ ಮಾರನೇ ದಿನ ಐಶ್ವರ್ಯ ಅವರು ಧನುಷ್​​ ಅವರಿಗೆ ಒಂದು ಹೂಗುಚ್ಛ ಕಳುಹಿಸಿ, ಅದರಲ್ಲಿ ಚೆನ್ನಾಗಿ ಅಭಿನಯಿಸಿದ್ದೀರಾ ಎಂದು ಬರೆದಿದ್ದರಂತೆ.

ನಂತರ ಒಳ್ಳೆ ಸ್ನೇಹಿತರಾಗಿದ ಐಶ್ವರ್ಯಾ ಹಾಗೂ ಧನುಷ್​ ಮಧ್ಯೆ ಪ್ರೀತಿ ಚಿಗುರುತ್ತದೆ. ಸುಮಾರು ಎರಡು ವರ್ಷಗಳ ಕಾಲ ಪ್ರೀತಿಸಿ 2004 ನವೆಂಬರ್​ 18 ರಂದು ಧನುಷ್​ ಹಾಗೂ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಈ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ 18 ವರ್ಷಗಳಿಂದ ಸುಖ-ಸಂಸಾರ ನಡೆಸುತ್ತಿದ್ದ ಈ ಜೋಡಿ ಇದೀಗ ಪರಸ್ಪರ ದೂರವಾಗಿದೆ.

News First Live Kannada


Leave a Reply

Your email address will not be published. Required fields are marked *